Indian Railways : ಉತ್ತಮ ಸೌಕರ್ಯಗಳನ್ನು ಪರಿಚಯಿಸಲು ಮುಂದಾದ ಭಾರತೀಯ ರೈಲ್ವೇ; ನೈರ್ಮಲ್ಯಕ್ಕಾಗಿ ಹೊಸ ಶೌಚಾಲಯಗಳ ವಿನ್ಯಾಸ

ಭಾರತೀಯ ರೈಲ್ವೇ (Indian Railways) ಶೀಘ್ರದಲ್ಲೇ ರೈಲು ಪ್ರಯಾಣಿಕರಿಗೆ ಉತ್ತಮ ಸೌಕರ್ಯಗಳನ್ನು (Facility) ಒದಗಿಸಲಿದೆ. ರೈಲಿನಲ್ಲಿ ನೈರ್ಮಲ್ಯ ಕಾಪಾಡುವ ಸಲುವಾಗಿ ಅಸ್ತಿತ್ವದಲ್ಲಿರುವ ಶೌಚಾಲಯಗಳನ್ನು ಹೊಸದಾಗಿ ವಿನ್ಯಾಸಗೊಳಿಸಲಿದೆ ಎಂದು ಭಾರತೀಯ ರೈಲ್ವೇ ಹೇಳಿದೆ. ಉತ್ತಮ ಸೌಕರ್ಯಗಳನ್ನು ಪ್ರಯಾಣಿಕರಿಗೆ ನೀಡುವ ನಿಟ್ಟಿನಿಲ್ಲಿ ರೈಲ್ವೇ ಇಲಾಖೆಯು ಪ್ರಾಯೋಗಿಕವಾಗಿ ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ನಾಲ್ಕು ಜೈವಿಕ ಶೌಚಾಲಯಗಳನ್ನು ಎಸಿ ಕೋಚ್ ಗೆ ಅಳವಡಿಸಿ ಪರಿಚಯಿಸಿದೆ. ಜನರಿಂದ ಪ್ರತಿಕ್ರಿಯೆ ಪಡೆದ ನಂತರ, ರೈಲುಗಳಲ್ಲಿ ಈ ಸೌಲಭ್ಯಗಳನ್ನು ಹೊರತರುವುದಾಗಿ ರೈಲ್ವೇ ಇಲಾಖೆ ಹೇಳಿದೆ.

ಈ ನವೀಕರಿಸಿದ ಶೌಚಾಲಯಗಳಲ್ಲಿ ಸ್ವಯಂಚಾಲಿತ ನೈರ್ಮಲ್ಯ ಮತ್ತು ವಾಸನೆ ನಿಯಂತ್ರಣ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ನೀರಿನ ಟ್ಯಾಪ್‌ಗಳು ಮತ್ತು ಸೋಪ್ ಡಿಸ್ಪೆನ್ಸರ್‌ಗಳು ಸಹ ಸ್ಪರ್ಶ-ಮುಕ್ತ ಮತ್ತು ಸಂವೇದಕ ಆಧಾರಿತವಾಗಿರುತ್ತವೆ. ಎಕನಾಮಿಕ್ ಟೈಮ್ಸ್‌ಗೆ ವಿವರಗಳನ್ನು ನೀಡಿದ ರೈಲ್ವೇ ಅಧಿಕಾರಿಗಳು, ಇವುಗಳನ್ನು ಕದಿಯಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ವಾಶ್‌ರೂಮ್‌ಗಳಷ್ಟೇ ಅಲ್ಲ, ರೈಲು ಪ್ರಯಾಣದ ಸಮಯದಲ್ಲಿ ಪ್ರಯಣಿಕರಿಗೆ ಸುಧಾರಿತ ಸೌಲಭ್ಯಗಳನ್ನು ಒದಗಿಸಲು ದ್ವಾರಗಳು ಮತ್ತು ಗ್ಯಾಂಗ್‌ವೇಗಳನ್ನು ಸಹ ಮರುರೂಪಿಸಲಾಗಿದೆ.

ದೇಶದಲ್ಲಿ ಅತಿ ಹೆಚ್ಚು ಸಂಪರ್ಕವನ್ನು ಕಲ್ಪಿಸುವುದು ರೈಲ್ವೇಯಾಗಿದೆ. ಹಾಗಾಗಿ ರೈಲ್ವೇ ಶೌಚಾಲಯಗಳ ವಿರುದ್ಧವೇ ಗರಿಷ್ಠ ದೂರುಗಳನ್ನು ಸ್ವೀಕರಿಸಲಾಗುತ್ತದೆ. ಆ ದೂರುಗಳಲ್ಲೆವೂ ಪ್ರಾಥಮಿಕವಾಗಿ ನೈರ್ಮಲ್ಯದ್ದೇ ಆಗಿದೆ. ಆದರೆ ಇನ್ನು ಮುಂದೆ ಹೊಸದಾಗಿ ವಿನ್ಯಾಸಗೊಳಿಸಿದ ಶೌಚಾಲಯಗಳಿಂದ ಈ ಸಮಸ್ಯೆ ದೂರವಾಗಲಿದೆ ಎಂದು ಇಲಾಖೆ ಹೇಳಿದೆ.

ಇದಕ್ಕೂ ಮೊದಲು ಕೇಂದ್ರ ರೇಲ್ವೇ ಸಚಿವ ಅಶ್ವಿನಿ ವೈಷ್ಣವ್‌ ನ್ಯೂ ದಿಲ್ಲಿ ರೇಲ್ವೆ ನಿಲ್ದಾಣಕ್ಕೆ ಜನವರಿಯಲ್ಲಿ ಬೇಟಿ ನೀಡಿ ಹೊಸ ಹೊಸ ಮೇಲ್ದರ್ಜೆಗೇರಿದ ಶೌಚಾಲಯಗಳ ಪರಿಶೀಲನೆ ನಡೆಸಿದ್ದರು ಮತ್ತು ಎಲ್ಲಾ ಕೋಚ್‌ಗಳಲ್ಲಿ ಈಗಿರುವ ಶೌಚಾಲಯಗಳನ್ನು ಆಧುನಿಕ ಶೌಚಾಲಯಗಳೊಂದಿಗೆ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಇದನ್ನೂ ಓದಿ : KHPT Recruitment 2023 : ಪ್ರಾಜೆಕ್ಟ್ ಸಂಯೋಜಕರು ಹುದ್ದೆಗೆ ಉದ್ಯೋಗಾವಕಾಶ

ಇದನ್ನೂ ಓದಿ : SBI ಗ್ರಾಹಕರ ಗಮನಕ್ಕೆ : ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ಸಂಖ್ಯೆ ನೋಂದಣಿ ಕಡ್ಡಾಯ

(Indian Railways To Introduce Better facility On Trains With Automatic Hygiene, Odour Control Systems)

Comments are closed.