Mumbai crime news: ಪ್ರೇಯಸಿಯನ್ನು ಕೊಂದು ಹಾಸಿಗೆಯ ಪೆಟ್ಟಿಗೆಯಲ್ಲಿ ಶವವನ್ನು ಬಚ್ಚಿಟ್ಟು ಪರಾರಿ

ಮುಂಬೈ: (Mumbai crime news) ತನ್ನ ಜೊತೆ ಲೈವ್‌ ಇನ್‌ ರಿಲೇಷನ್‌ ಶಿಪ್‌ ನಲ್ಲಿದ್ದ ಪ್ರೇಯಸಿಯನ್ನು ವ್ಯಕ್ತಿಯೊಬ್ಬ ಕೊಂದು ಹಾಸಿಗೆಯ ಪೆಟ್ಟಿಗೆಯಲ್ಲಿ ಬಚ್ಚಿಟ್ಟು ಪರಾರಿಯಾದ ಘಟನೆ ಮುಂಬೈನ ನಲಸೋಪಾರಾದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇಘಾ ಧನಸಿಂಗ್‌ (35 ವರ್ಷ) ಮೃತ ಮಹಿಳೆ.

ಪೋಲೀಸರ ಪ್ರಕಾರ, ಆರೋಪಿ ಹಾರ್ದಿಕ್ ಶಾ ಕಳೆದ ಎರಡು ತಿಂಗಳಿನಿಂದ ಸೀತಾಸದನ್ ಸೊಸೈಟಿಯಲ್ಲಿ ತನ್ನ ಲೈವ್-ಇನ್ ಪಾಲುದಾರ ಮೇಘಾ ಧನಸಿಂಗ್ ತೋರ್ವಿಯೊಂದಿಗೆ ಉಳಿದುಕೊಂಡು ಮದುವೆಯಾಗುವುದಾಗಿ ನಟಿಸುತ್ತಿದ್ದ. ಭಾನುವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿತ್ತು. ಜಗಳ ತಾರಕಕ್ಕೇರಿದ್ದು, ಶಾ ಮೇಘಾಳನ್ನು ಕೊಚ್ಚಿ ಕೊಂದಿದ್ದಾನೆ. ನಂತರ ಶಾ ಆಕೆಯ ದೇಹವನ್ನು ಹಾಸಿಗೆಯ ಕುಳಿಯಲ್ಲಿ ಬಚ್ಚಿಟ್ಟು, ಮನೆಯಲ್ಲಿದ್ದ ಕೆಲವು ಪೀಠೋಪಕರಣಗಳನ್ನು ಸ್ವಲ್ಪ ಹಣಕ್ಕೆ ಮಾರಾಟ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈತ ರೈಲಿನಲ್ಲಿ ಪರಾರಿಯಾಗುತ್ತಿದ್ದ ಎಂಬ ಮಾಹಿತಿ ಮೇರೆಗೆ ಪೊಲೀಸರು ಆತನ ಸ್ಥಳವನ್ನು ಪತ್ತೆ ಹಚ್ಚಿ ಮಧ್ಯಪ್ರದೇಶದ ನಗ್ಡಾದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಲಾಡ್‌ನ ವಜ್ರದ ವ್ಯಾಪಾರಿಯೊಬ್ಬರ ಪುತ್ರನಾಗಿದ್ದು, ಈತ ನಿರುದ್ಯೋಗಿಯಾಗಿದ್ದಾನೆ. ನರ್ಸ್ ಮೇಘಾ ಮನೆಯ ಖರ್ಚನ್ನು ಭರಿಸುತ್ತಿದ್ದರು. ಇದೆ ಕಾರಣಕ್ಕೆ ಅವರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಕೊಲೆ ಕೂಡ ನಡೆದಿತ್ತು ಎಂದು ವರದಿ ಮಾಧ್ಯಮಗಳು ವರದಿ ಮಾಡಿವೆ.

ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ ಇತರ ನಿವಾಸಿಗಳು ಕೊಠಡಿಯಿಂದ ದುರ್ವಾಸನೆ ಬೀರುತ್ತಿದ್ದ ಕಾರಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯ ಮೆರೆಗೆ ಪೊಲೀಸರು ಬಾಗಿಲು ಒಡೆದು ನೋಡಿದಾಗ ಮಹಿಳೆಯ ಶವ ಹಾಸಿಗೆಯ ಕುಳಿಯಲ್ಲಿ ಪತ್ತೆಯಾಗಿದೆ. ಇದಾದ ಬಳಿಕ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಲು ಪ್ರಾರಂಭಿಸಿದ್ದಾರೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಆರೋಪಿ ಶಾ ಅವರ ಮೊಬೈಲ್‌ ಫೋನ್‌ ಸ್ಕ್ಯಾನ್‌ ಮಾಡಿದ್ದಾರೆ.

ಇದನ್ನೂ ಓದಿ : Attack on Ram Mandir: ಕೆನಡಾದ ರಾಮಮಂದಿರದ ಮೇಲೆ ದಾಳಿ ನಡೆಸಿದ ಖಲಿಸ್ತಾನ್‌ ಗುಂಪು

ಇದನ್ನೂ ಓದಿ : Koteshwara serial accident: ಕೋಟೇಶ್ವರ: ಬೀಜಾಡಿ ಕ್ರಾಸ್‌ ಬಳಿ ಸರಣಿ ಅಪಘಾತ: ಇಬ್ಬರಿಗೆ ಗಾಯ

ಇದನ್ನೂ ಓದಿ : Life threatening: ಬೈಂದೂರು: ದ್ವಿಚಕ್ರ ವಾಹನ ಅಡ್ಡಗಟ್ಟಿ ಜೀವ ಬೆದರಿಕೆ

ಈ ವೇಳೆ ಆತ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಿಂದ ರಾಜಸ್ಥಾನಕ್ಕೆ ರೈಲು ಹತ್ತಿರುವುದಾಗಿ ಮಾಹಿತಿ ದೊರೆತಿದ್ದು, ರೈಲ್ವೇ ಪೊಲೀಸ್ ಪಡೆಯ ಸಹಾಯದಿಂದ ರಾಜಸ್ಥಾನದ ನಗ್ಡಾ ರೈಲು ನಿಲ್ದಾಣದಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಆರೋಪಿನ್ನು ಕಸ್ಟಡಿಗೆ ಪಡೆದು ಮುಂಬೈಗೆ ಕರೆತರುವ ಪ್ರಕ್ರಿಯೆಯಲ್ಲಿರುವುದಾಗಿ ಅಧಿಕಾರಿಗಳು ಹೇಳಿದರು.

Mumbai crime news: He killed his girlfriend and hid the body in a bed box and escaped

Comments are closed.