ಸೋಮವಾರ, ಏಪ್ರಿಲ್ 28, 2025
HomeCrimeMumbai Crime news: ವಿಕೃತಿ ಮೆರೆದ ಕಾಮುಕರು: ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

Mumbai Crime news: ವಿಕೃತಿ ಮೆರೆದ ಕಾಮುಕರು: ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

- Advertisement -

ಮುಂಬೈ: (Mumbai Crime news) ಮಹಿಳೆಯೊಬ್ಬರ ಮನೆಗೆ ನುಗ್ಗಿ ಮೂವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು, ಹರಿತವಾದ ಕತ್ತಿಯಿಂದ ಹಲ್ಲೆ ಮಾಡಿ, ಸಿಗರೇಟ್ ನಿಂದ ಆಕೆಯ ಖಾಸಗಿ ಭಾಗಗಳನ್ನು ಸುಟ್ಟು ವಿಕೃತಿ ಮೆರೆದಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಹಿಳೆ ಒಂಟಿಯಾಗಿರುವುದನ್ನು ನೋಡಿಕೊಂಡ ಕಾಮುಕರು ಆಕೆಯ ಮನೆಗೆ ನುಗ್ಗಿ ಒಬ್ಬೊಬ್ಬರಾಗಿ ಆಕೆಯ ಮೇಲೆ ಅತ್ಯಾಚಾರ (Mumbai Crime news) ಎಸಗಿ, ಮನಸ್ಸೋ ಇಚ್ಚೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಆಕೆಯ ಖಾಸಗಿ ಭಾಗಗಳನ್ನು ಸಿಗರೇಟ್‌ನಿಂದ ಸುಟ್ಟಿದ್ದು, ಎದೆ ಭಾಗದ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾರೆ. ಕೃತ್ಯ ನಡೆಯುವಾಗ ಮೂವರಲ್ಲಿ ಒಬ್ಬ ಕಾಮುಕ ಕೃತ್ಯದ ವೀಡಿಯೋ ಮಾಡಿಕೊಂಡಿದ್ದು, ಪೊಲೀಸರಿಗೆ ಹೇಳಿದ್ರೆ ಜಾಲತಾಣದಲ್ಲಿ ವೀಡಿಯೋ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ಒಂದೆರಡು ದಿನಗಳ ನಂತರ ಮಹಿಳೆ ಅಕ್ಕಪಕ್ಕದವರೊಂದಿಗೆ ನಡೆದ ವಿಚಾರಗಳನ್ನು ವಿವರಿಸಿದ್ದಾಳೆ. ನಂತರ ಎನ್‌ಜಿಒ ಸಂಸ್ಥೆಯೊಂದು ಸಂಪರ್ಕಿಸಿ ಆಕೆಗೆ ಧೈರ್ಯ ತುಂಬಿದೆ. ನಂತರ ಸಂತ್ರಸ್ತ ಮಹಿಳೆ ಕುರ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಮುಂಬೈನ ಕುರ್ಲಾದಲ್ಲಿರುವ 42 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದು, ಹರಿತವಾದ ಆಯುಧಗಳಿಂದ ಮಹಿಳೆಗೆ ಕಿರುಕುಳ ನೀಡಲಾಗಿದೆ. ಅತ್ಯಾಚಾರ ಎಸಗಿದ ಕಾಮುಕರು ಹಾಗೂ ಸಂತ್ರಸ್ತೆ ಒಂದೇ ಪ್ರದೇಶದವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : minivan overturned: ಗುಂಟೂರಿನಲ್ಲಿ ಮಿನಿವ್ಯಾನ್‌ ಪಲ್ಟಿ: 4 ಸಾವು, ಒಬ್ಬರ ಸ್ಥಿತಿ ಗಂಭೀರ

ಅತ್ಯಾಚಾರ ಎಸಗಿದ ಮೂವರು ಕಾಮುಕರ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 376 ಡಿ (ಸಾಮೂಹಿಕ ಅತ್ಯಾಚಾರ), 377 (ಅಸ್ವಾಭಾವಿಕ ಲೈಂಗಿಕತೆ), 324 (ಅಪಾಯಕಾರಿ ಆಯುಧದಿಂದ ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಹಾಗೂ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

(Mumbai Crime news) An incident in Mumbai where a woman was gang-raped by three men who broke into her house, assaulted her with a sharp sword, burned her private parts with a cigarette and disfigured her, has come to light of late.

RELATED ARTICLES

Most Popular