Jayaprakash Hegde: ಟೋಲ್‌ ವಸೂಲಿ ಮನ್ನಾ ಹೋಣೆ ಸಿಎಂ ಹೆಗಲಿಗೆ: ಜಯಪ್ರಕಾಶ್‌ ಹೆಗ್ಡೆ

ಮಂಗಳೂರು: (Jayaprakash Hegde) ಹೆಜಮಾಡಿಯಲ್ಲಿ ಸುರತ್ಕಲ್‌ ಟೋಲ್‌ ದರವನ್ನು ಸೇರಿಸಿ ವಸೂಲಿ ಮಾಡುವ ಕ್ರಮಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಟೋಲ್‌ ದರ ಮನ್ನಾ ಮಾಡುವ ಕುರಿತು ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ಸಭೆ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಸಚಿವರು (Jayaprakash Hegde) ಸೇರಿ ಉಡುಪಿಯಲ್ಲಿ ಸಭೆ ನಡೆಸಿದ್ದು, ಟೋಲ್‌ ದರ ಮನ್ನಾ ಮಡುವ ಕುರಿತು ಚರ್ಚೆ ನಡೆದಿದೆ. ಎರಡೂ ಟೋಲ್‌ ದರ ಒಟ್ಟಾಗಿ ಪಡೆಯುವ ಹೆದ್ದಾರಿ ಇಲಾಖೆಯ ನಿರ್ಧಾರವನ್ನು ವಿರೋಧಿಸಿದ್ದು, ವಿವಿಧ ಟೋಲ್‌ ಗಳಿಗೆ ಹಂಚಿ ಹಾಕುವುದಕ್ಕೆ ವಿರೋಧ ವ್ಯಕ್ತವಾಗಿದೆ.

ರಸ್ತೆ ನಿರ್ಮಾಣ ಕುರಿತು ಒಟ್ಟು ನಾಲ್ಕು ನೂರು ಕೋಟಿ ಪಾವತಿಸಬೇಕಿದ್ದು, ಟೋಲ್‌ ಮೂಲಕ ಇನ್ನೂರೈವತ್ತು ಕೋಟಿ ರೂ ಸಂಗ್ರಹಿಸಿ ಈಗಾಗಲೇ ಪಾವತಿಸಲಾಗಿದೆ. ಇನ್ನುಳಿದ ನೂರೈವತ್ತು ಕೋಟಿ ರೂ ಅನ್ನು ಮನ್ನಾ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೇ ಈ ಕುರಿತು ಕೇಂದ್ರ ಸರಕಾರಕ್ಕೆ ಮನವಿ ಪತ್ರ ಬರೆಯಬೇಕಾಗಿದ್ದರಿಂದ ಮುಖ್ಯಮಂತ್ರಿ ನೇತ್ರತ್ವದಲ್ಲಿ ಸಭೆ ನಡೆದು ಅಲ್ಲಿಯೇ ಸ್ಪಷ್ಟ ತೀರ್ಮಾನ ನಡೆಯಲಿದೆ ಎಂದು ವರದಿ ಮಾದ್ಯಮದವೊಂದಿಗೆ ಮಾತನಾಡುವಾಗ ಹೇಳಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಅವರು, ಈಗ ಸಾಂವಿಧಾನಿಕ ಹುದ್ದೆಯಲ್ಲಿ ಇರುವುದರಿಂದ ಯಾವುದೇ ತೀರ್ಮಾನ ಮಾಡಿಲ್ಲ, ಪಕ್ಷ ಸೂಚಿಸಿದರೆ ಪಕ್ಷದ ತೀರ್ಮಾನಕ್ಕೆ ಬದ್ಧನಿದ್ದೇನೆ. ಕೆಲಸ ಮಾಡುವ ಜನಪ್ರತಿನಿಧಿ ಬೇಕು ಎಂದು ಜನ ಬಯಸುತ್ತಿದ್ದಾರೆ. ಆದ್ದರಿಂದ ಯಾವುದಾದರೂ ಕ್ಷೇತ್ರದಲ್ಲಿ ಶಾಸಕರ ಕೆಲಸ ಕಡಿಮೆ ಎಂದು ಜನರಿಗೆ ಹಾಗೂ ಪಕ್ಷಕ್ಕೆ ಅನಿಸಿದರೆ ಅಲ್ಲಿ ಸ್ಪರ್ಧಿಸಲು ಪಕ್ಷದವರು ಸೂಚಿಸಿದರೆ ನಾನು ನಿರಾಕರಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : Toll rate Increase: ಪ್ರಯಾಣಿಕರಿಗೆ ಟೋಲ್ ಶಾಕ್: ನಾಳೆಯಿಂದ ಹೆಜಮಾಡಿ ಟೋಲ್‌ ದರ ಹೆಚ್ಚಳ

ಇದನ್ನೂ ಓದಿ : ಸುರತ್ಕಲ್ ಟೋಲ್ ರದ್ದು, ಹೆಜಮಾಡಿಯಲ್ಲಿ ಟೋಲ್ ದರ ಏರಿಕೆ ಇಲ್ಲ : ಹೋರಾಟಗಾರರ ಸಂಭ್ರಮಾಚರಣೆ

ಇದನ್ನೂ ಓದಿ : Hejamadi toll rate: ಪ್ರಯಾಣಿಕರಿಗೆ ಟೋಲ್ ಶಾಕ್ :ಡಿ.1 ರಿಂದ ಹೆಜಮಾಡಿ ಟೋಲ್‌ ದರ ದುಪ್ಪಟ್ಟು

ಇದನ್ನೂ ಓದಿ : Ermayi Falls : ಬೆಳ್ತಂಗಡಿ ಎರ್ಮಾಯಿ ಫಾಲ್ಸ್ ಗೆ ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

(Jayaprakash Hegde) Jayaprakash Hegde, chairman of the Commission for Backward Classes, said that a meeting will be held under the supervision of the Chief Minister to waive the toll rate in the background of widespread public outrage over the addition of the Suratkal toll rate in Hejamadi.

Comments are closed.