Kidney Stone Health Tips:ಕಿಡ್ನಿ ಸ್ಟೋನ್ ಪರಿಹಾರಕ್ಕೆ ಬಾಳೆ ದಿಂಡಿನ ಜ್ಯೂಸ್

(Kidney Stone Health Tips)ಸರಿಯಾದ ಸಮಯಕ್ಕೆ ಊಟ ಮಾಡದಿದ್ದರೆ ಮತ್ತು ನೀರು ಅತಿ ಹೆಚ್ಚಾಗಿ ಕುಡಿಯದಿದ್ದರೆ ಮೂತ್ರಪಿಂಡದಲ್ಲಿ ಕಲ್ಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದಲ್ಲಿ ಕಲ್ಲಾಗುವ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೆಸಾಮಾನ್ಯವಾಗಿದೆ. ಆಹಾರ ಕ್ರಮ ಮತ್ತು ಆಧುನಿಕ ಜೀವನ ಶೈಲಿಯಿಂದಾಗಿ ಮೂತ್ರಪಿಂಡದಲ್ಲಿ ಕಲ್ಲುಗಳಾಗುತ್ತಿವೆ. ಈ ಸಮಸ್ಯೆ ಹೆಚ್ಚಾಗಿದ್ದರೆ ವೈದ್ಯರನ್ನು ಬೇಟಿ ಮಾಡಿ ಅವರ ಸಲಹೆಗಳನ್ನು ಪಾಲಿಸುವುದು ಉತ್ತಮ. ಕಿಡ್ನಿಯಲ್ಲಿನ ಕಲ್ಲುಗಳು ಸಣ್ಣದಿದ್ದಾಗಲೆ ನೈಸರ್ಗಿಕ ವಿಧಾನಗಳಿಂದ ಅವುಗಳನ್ನು ಕರಗಿಸಬಹುದು. ಬಾಳೆದಿಂಡಿನ ಜ್ಯೂಸ್‌ ಕುಡಿಯುವ ಮೂಲಕ ಕಿಡ್ನಿ ಸ್ಟೋನ್‌ ಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಬಾಳೆ ದಿಂಡಿನ ಜ್ಯೂಸ್‌ ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Kidney Stone Health Tips)ಬೇಕಾಗುವ ಸಾಮಾಗ್ರಿಗಳು:

  • ಬಾಳೆದಿಂಡು
  • ಉಪ್ಪು
  • ಕಾಳು ಮೆಣಸು
  • ಶುಂಠಿ
  • ನಿಂಬೆರಸ
  • ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲಿಗೆ ಬಾಳೆ ದಿಂಡನ್ನು ಬಿಡಿಸಿಕೊಂಡು ರೌಂಡ್‌ ಶೇಪ್ ನಲ್ಲಿ ಕತ್ತರಿಸಿಕೊಂಡು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ನಂತರ ಮಿಕ್ಸಿ ಜಾರಿಯಲ್ಲಿ ಕಟ್‌ ಮಾಡಿಕೊಂಡ ಬಾಳೆದಿಂಡು, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ನಾಲ್ಕು ಕಾಳು ಮೆಣಸು, ಐದು ಶುಂಠಿ, ಅರ್ಧ ನಿಂಬೆಯ ರಸ , ಅರ್ಧ ಲೋಟ ನೀರು ಹಾಕಿ ಗ್ರೈಂಡ್‌ ಮಾಡಬೇಕು. ಅನಂತರ ಅದನ್ನು ಲೋಟದಲ್ಲಿ ಸೊಸಿಕೊಂಡು ಕುಡಿದರೆ ಕಿಡ್ನಿ ಸ್ಟೋನ್‌ ಕಡಿಮೆ ಆಗುತ್ತದೆ.

ಇದನ್ನೂ ಓದಿ:Banana Stem Recipe:ದೇಹದ ಹಲವು ಸಮಸ್ಯೆ ನಿವಾರಣೆ ಮಾಡುವ ಬಾಳೆ ದಿಂಡಿನ ದೋಸೆ

ಇದನ್ನೂ ಓದಿ:Weight Gain Tips : ನೀವು ತುಂಬಾ ತೆಳ್ಳಗಿದ್ದೀರಾ; ಹಾಗಾದರೆ ಈ ಸೂಪರ್‌ ಫುಡ್‌ಗಳನ್ನು ತಿನ್ನಿ

ಪ್ರತಿದಿನ ಬೆಳಿಗ್ಗೆ ಒಂದು ಲೋಟ ಬೆಚ್ಚಗಿನ ನೀರಿಗೆ ಎರಡು ಚಮಚ ನಿಂಬೆಹಣ್ಣಿನ ರಸ ಬೆರೆಸಿ ನಂತರ ಅದಕ್ಕೆ ಒಂದು ಚಮಚ ಆಲಿವ್‌ ಎಣ್ಣೆ ಸೇರಿಸಿ ಮಿಶ್ರಣ ಮಾಡಿಕೊಂಡು ಕಾಲಿ ಹೊಟ್ಟೆಯಲ್ಲಿ ಕುಡಿದರೆ ಮೂತ್ರಪಿಂಡದ ಕಲ್ಲನ್ನು ಕರಗಿಸುತ್ತದೆ. ಒಂದು ಲೋಟ ಕಲ್ಲಂಗಡಿ ರಸಕ್ಕೆ ಒಂದು ಚಮಚ ದಾಲ್ಚಿನ್ನಿ ಪುಡಿ ಬೆರೆಸಿ ರಾತ್ರಿ ಇಡಿ ನೆನಸಿಡಬೇಕು.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ಕಿಡ್ನಿಯಲ್ಲಿರುವ ಕಲ್ಲು ಕರಗುತ್ತದೆ. ಒಂದು ಲೋಟ ಎಳನೀರಿಗೆ ಎರಡು ಚಮಚ ನಿಂಬೆರಸ ಬೆರಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕಲ್ಲು ಕರಗುವಂತೆ ಮಾಡುತ್ತದೆ. ಬಾರ್ಲಿಯನ್ನು ನೀರಿನಲ್ಲಿ ನೆನಸಿಟ್ಟುಕೊಂಡು ಈ ನೀರನ್ನು ಕುಡಿಯುವುದರಿಂದ ಕಿಡ್ನಿ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಕಪ್ಪು ಜೀರಿಗೆಯನ್ನು ಪ್ರತಿದಿನ ಒಂದು ಚಮಚ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯುತ್ತದೆ. ಪ್ರತಿದಿನ ಅತಿ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್‌ ಸಮಸ್ಯೆಯಿಂದ ದೂರ ಇರಬಹುದು.

Kidney Stone Health Tips Banana stem juice for kidney stone relief

Comments are closed.