ಆಸ್ತಿ ವಿಚಾರವಾಗಿ ಪತ್ನಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ನವದೆಹಲಿ: (Murder and Suicide attempt) ರಾಷ್ಟ್ರ ರಾಜಧಾನಿಯ ಮೋಹನ್ ಗಾರ್ಡನ್ ಏರಿಯಾದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, 38 ವರ್ಷದ ವ್ಯಕ್ತಿಯೊಬ್ಬರು ಆರ್ಥಿಕ ಸಮಸ್ಯೆಯಿಂದ ತನ್ನ ಪತ್ನಿ ಮತ್ತು ನಾಲ್ಕು ತಿಂಗಳ ಹಸುಳೆ ಸೇರಿದಂತೆ ಇಬ್ಬರು ಗಂಡು ಮಕ್ಕಳನ್ನು ಕೊಂದು ತನ್ನ ಜೀವನವನ್ನು ಮುಗಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ರಾಜೇಶ್ (38) ಎಂದು ಗುರುತಿಸಲಾದ ವ್ಯಕ್ತಿ ತನ್ನ 35 ವರ್ಷದ ಪತ್ನಿ ಸುನಿತಾ ಮತ್ತು ಐದು ವರ್ಷ ಹಾಗೂ ನಾಲ್ಕು ತಿಂಗಳ ಇಬ್ಬರು ಗಂಡು ಮಕ್ಕಳನ್ನು ಕೊಂದಿದ್ದಾನೆ.

ಪತ್ನಿ ಮತ್ತು ಪುತ್ರರನ್ನು ಕೊಂದ ಬಳಿಕ ರಾಜೇಶ್ ತನ್ನ ಮಣಿಕಟ್ಟಿನ ಮೇಲೆ ಆಳವಾದ ಗಾಯ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಅತನನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಭಾನುವಾರ ಮುಂಜಾನೆ ತನ್ನ ಸ್ನೇಹಿತರಿಗೆ ತನ್ನ ಆರ್ಥಿಕ ಸಂಕಷ್ಟದ ಬಗ್ಗೆ ಸಂದೇಶ ಕಳುಹಿಸಿದ್ದ. ಹೀಗಾಗಿ ಆತನ ಸ್ನೇಹಿತರು ಆತನ ಸಹೋದರನನ್ನು ಎಚ್ಚರಿಸಿದ್ದು, ಅವರು ಬೆಳಿಗ್ಗೆ 6 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಎಂ ಹರ್ಷ ವರ್ಧನ್ ತಿಳಿಸಿದ್ದಾರೆ.

ಘಟನೆ ನಡೆದಾಗ 75 ವರ್ಷ ಮೇಲ್ಪಟ್ಟ ವ್ಯಕ್ತಿಯ ಪೋಷಕರು ಮತ್ತೊಂದು ಕೋಣೆಯಲ್ಲಿದ್ದರು ಎಂದು ತಿಳಿದುಬಂದಿದ್ದು, ಅವರನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ. ರಾಜೇಶ್ ಜನರಲ್ ಸ್ಟೋರ್ ನಡೆಸುತ್ತಿದ್ದಾರೆ. ಮೊದಲು, ಅವರು ISO ಪ್ರಮಾಣೀಕರಣಕ್ಕೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕಂಪನಿಯನ್ನು ನಡೆಸುತ್ತಿದ್ದರು. ಇನ್ನೂ ಘಟನೆಗೆ ಹಣಕಾಸಿನ ಸಮಸ್ಯೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಆಸ್ತಿಗಾಗಿ ಬೇಡಿಕೆಯಿಟ್ಟಿದ್ದು, ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಆತನ ಅತ್ತೆಯಂದಿರು ಆರೋಪಿಸಿದ್ದಾರೆ. ರಾಜೇಶ್ ಆಸ್ತಿಗಾಗಿ ಬೇಡಿಕೆ ಇಟ್ಟಿದ್ದೇ ಕೊಲೆಗೆ ಕಾರಣ ಎಂದು ಮೃತ ಸುನೀತಾ ಕುಟುಂಬ ಆರೋಪಿಸಿದೆ.

ಇದನ್ನೂ ಓದಿ : ರೋಗಿಯನ್ನು ಹೊತ್ತೊಯ್ಯುತ್ತಿದ್ದ ಏರ್‌ ಲಿಫ್ಟ್ ವಿಮಾನ ಪತನ: 5 ಮಂದಿ ಸಾವು

ರಾಜೇಶ್‌ ಕೃತ್ಯ ನಡೆಸಿದಾಗ ಅವರ ಕುಟುಂಬದವರು ಮಲಗಿದ್ದು, ಈ ಸಂದರ್ಭದಲ್ಲಿ ಪತ್ನಿ ಮತ್ತು ಇಬ್ಬರು ಪುತ್ರರಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2015ರಲ್ಲಿ ಸುನೀತಾ ಅವರನ್ನು ರಾಜೇಶ್ ವಿವಾಹವಾಗಿದ್ದರು ಎಂದು ಮನೆಯವರು ತಿಳಿಸಿದ್ದಾರೆ. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ರಾಜೇಶ್ ತಮ್ಮಿಂದ ಆಸ್ತಿಗಾಗಿ ಬೇಡಿಕೆ ಇಡುತ್ತಿದ್ದರು ಮತ್ತು ಈ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಇದರಿಂದ ರಾಜೇಶ್ ತನ್ನ ಪತ್ನಿ ಮತ್ತು ಇಬ್ಬರು ಪುತ್ರರನ್ನು ಕೊಲೆ ಮಾಡಿದ್ದಾನೆ ಎಂದು ಸುನೀತಾ ಕುಟುಂಬ ಆರೋಪಿಸಿದೆ. ಸದ್ಯ ಈ ಘಟನೆಯ ಕುರಿತು ಮೋಹನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ ಎಂದು ಡಿಸಿಪಿ ತಿಳಿಸಿದ್ದಾರೆ.

Murder and Suicide attempt: A man tried to commit suicide by killing his wife and children due to property issues

Comments are closed.