500 ರೂಪಾಯಿ‌ ಸಾಲ ವಾಪಾಸ್ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ನೆರೆ ಮನೆಯವನನ್ನು ಹೊಡೆದುಕೊಂದ ಆರೋಪಿ

ಪಶ್ಚಿಮ ಬಂಗಾಳ : (Murder- complaint failed) 500 ರೂ ವೈಯಕ್ತಿಕ ಸಾಲವನ್ನು ಹಿಂದಿರುಗಿಸಲು ವಿಫಲವಾದ ಕಾರಣ 40 ವರ್ಷದ ವ್ಯಕ್ತಿಯನ್ನು ಆತನ ನೆರೆಹೊರೆಯವರು ಹೊಡೆದು ಕೊಂದಿರುವ ಘಟನೆ ಮಾಲ್ಡಾ ಜಿಲ್ಲೆಯ ಬಮಂಗೋಲಾ ಪೊಲೀಸ್ ಠಾಣೆಯ ಗಂಗಾಪ್ರಸಾದ್ ಕಾಲೋನಿ ಪ್ರದೇಶದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬನ್ಮಾಲಿ ಪ್ರಮಾಣಿಕ್ ಎಂದು ಗುರುತಿಸಲಾಗಿದ್ದು, ತನ್ನ ನೆರೆಯ ಪ್ರಫುಲ್ಲ ರಾಯ್ ಅವರಿಂದ 5000 ರೂ ಸಾಲವನ್ನು ತೆಗೆದುಕೊಂಡಿದ್ದರು. ನಿಗದಿತ ಸಮಯದಲ್ಲಿ ಹಣವನ್ನು ಹಿಂದಿರುಗಿಸಲು ಪ್ರಾಮಾಣಿಕ್ ವಿಫಲರಾಗಿದ್ದು, ಇದೇ ಕಾರಣಕ್ಕೆ ಅತನನ್ನು ಹೊಡೆದು ಕೊಲ್ಲಲಾಯಿತು ಎನ್ನಲಾಗಿದೆ.

ಭಾನುವಾರ ಸಂಜೆ ಸಾಲ ನೀಡಿದ ಪ್ರಫುಲ್ಲ ರಾಯ್ ಅವರು ಪ್ರಮಾಣಿಕ್ ಅವರ ಮನೆಗೆ ಹಣ ಕೇಳಲು ಬಂದಿದ್ದರು. ಆದರೆ ಸಂತ್ರಸ್ತ ವ್ಯಕ್ತಿ ಮನೆಯಲ್ಲಿರಲಿಲ್ಲ. ಆತನನ್ನು ಕಾಣದ ಅವರು ಪ್ರಮಾಣಿಕನನ್ನು ಹುಡುಕಿದ್ದು, ಸ್ಥಳೀಯ ಚಹಾ ಅಂಗಡಿಯಲ್ಲಿ ಸಂತ್ರಸ್ತ ವ್ಯಕ್ತಿ ಇರುವುದನ್ನು ಕಂಡುಕೊಂಡಿದ್ದಾರೆ. ಈ ವೇಳೆ ಆತನಲ್ಲಿ ಹಣ ಹಿಂತಿರುಗಿಸುವಂತೆ ಕೇಳಿದ್ದಾರೆ. ಆದರೆ ಆತ ಹಣ ಕೊಡಲು ವಿಫಲನಾಗಿದ್ದಾನೆ. ನಗದು ಹಿಂಪಡೆಯಲು ಸಾಧ್ಯವಾಗದೆ ಇದ್ದಾಗ ರಾಯ್‌ ಬಿದಿರಿನ ಬೆತ್ತದಿಂದ ಪ್ರಮಾಣಿಕ್ ಅವರನ್ನು ಥಳಿಸಲು ಪ್ರಾರಂಭಿಸಿದ್ದಾರೆ.

ಪ್ರಮಾಣಿಕ್ ಅವರ ತಲೆಗೆ ಪೆಟ್ಟು ಬಿದ್ದು ಕುಸಿದು ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮರುದಿನ ವ್ಯಕ್ತಿ ರಕ್ತ ವಾಂತಿ ಮಾಡಲು ಪ್ರಾರಂಭಿಸಿದ್ದು, ಸ್ಥಳೀಯ ಮುಡಿಪುಕೂರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಾಲ್ಡಾಕ್ಕೆ ಕಳುಹಿಸಲಾಯಿತು. ಆದರೆ ಅಲ್ಲಿ ವೈದ್ಯರು ಆತ ದಾರಿ ಮಧ್ಯೆಯೇ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ”ನನ್ನ ಸಹೋದರ ಗಂಗಾಪ್ರಸಾದ್ ಕಾಲೋನಿಯಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದಾಗ ರಾಯ್ ಬಂದು ಥಳಿಸಲು ಆರಂಭಿಸಿದ್ದಾನೆ” ಎಂದು ಮೃತನ ಸಹೋದರ ಅಜಯ್ ಪ್ರಮಾಣಿಕ್ ಹೇಳಿದ್ದಾರೆ.

ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಮೃತನ ಕುಟುಂಬದವರು ಆರೋಪಿಗಳ ವಿರುದ್ಧ ಬಾಮನ್ ಗೋಳ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಬಮಂಗೋಳ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Bluefilm broadcast on railway station: ರೈಲು ನಿಲ್ದಾಣದ ಟಿವಿಯಲ್ಲಿ ಬ್ಲೂ ಫಿಲ್ಮ್‌ ಪ್ರಸಾರ : ದೂರು ದಾಖಲಿಸಿದ ಪ್ರಯಾಣಿಕರು

Murder-complaint failed: Accused beat neighbor for not repaying Rs 500 loan

Comments are closed.