Bike horn Murder : ಬೈಕ್​ ಹಾರ್ನ್​ ವಿಚಾರಕ್ಕೆ ಶುರುವಾದ ದ್ವೇಷ ಕೊಲೆಯಲ್ಲಿ ಅಂತ್ಯ : ಆರೋಪಿಗಳ ಬಂಧನ

ಮಂಗಳೂರು : Bike horn Murder : ಬೈಕ್​ ಹಾರನ್​ ವಿಚಾರಕ್ಕೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯಕಂಡ ದಾರುಣ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಪೊನ್ನೊಡಿಯ ಲಗೂನ್ ಕೊಕೊನಟ್ ಹೋಟೆಲ್​ ಸಮೀಪದಲ್ಲಿ ಸಂಭವಿಸಿದೆ. ಕೊಲೆಯಾದ ಯುವಕನನ್ನು ಮೊಹಮ್ಮದ್ ಆಸಿಫ್​ ಎಂದು ಗುರುತಿಸಲಾಗಿದೆ.

ದೂರುದಾರ ಮೊಹಮ್ಮದ್​ ನೌಫಲ್​ ಕೊಲೆಯಾದ ಮೊಹಮ್ಮದ್​ ಆಸಿಫ್​ನ ಗೆಳೆಯನಾಗಿದ್ದಾನೆ. ಸೋಮವಾರ ತಡರಾತ್ರಿ ಮೊಹಮ್ಮದ್​ ನೌಫಲ್​ಗೆ ಕರೆ ಮಾಡಿದ ಮೊಹಮ್ಮದ್​ ಆಸಿಫ್​ ಶಾಂತಿಯಂಗಡಿ ಸ್ಟೋರ್​ ಬಳಿಯಲ್ಲಿ ಮಾರಿಪಳ್ಳ ಮಹಮ್ಮದ್​ ನೌಫೆಲ್​ ಹಾಗೂ ಮಹಮ್ಮದ್​ ನೌಸಿರ್​ ನನ್ನ ಸ್ಕೂಟಿಯನ್ನು ಅಡ್ಡಗಟ್ಟಿದ್ದಾರೆ. ಅಲ್ಲದೇ ನನಗೆ ಧಮ್ಕಿ ಹಾಕುತ್ತಿದ್ದಾರೆ. ಹೀಗಾಗಿ ನೀನು ಈ ಕೂಡಲೇ ಇಲ್ಲಿಗೆ ಬಾ ಎಂದು ಕೊಲೆಯಾದ ಆಸಿಫ್​​ ಸ್ನೇಹಿತ ಮೊಹಮ್ಮದ್​ ನೌಫಲ್​ಗೆ ಕರೆ ಮಾಡಿ ತಿಳಿಸಿದ್ದ ಎನ್ನಲಾಗಿದೆ.

ಸ್ನೇಹಿತ ಸಂಕಷ್ಟದಲ್ಲಿರುವ ಬಗ್ಗೆ ಮಾಹಿತಿ ಪಡೆದ ನೌಫಲ್​ ಕೊಲೆಯಾದ ಆಸಿಫ್​ನ ತಮ್ಮ ಅನ್ಸಾರ್​, ಗೆಳೆಯರಾದ ಕೌಶಿಕ್​ ಹಾಗೂ ನಿಜಾಮುದ್ದೀನ್​ ಜೊತೆಯಲ್ಲಿ ಶಾಂತಿಯಂಗಡಿ ಸ್ಟೋರ್ ಬಳಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ಮೊಹಮ್ಮದ್​ ಆಸಿಫ್​ಗೆ ಆರೋಪಿಗಳಾದ ಮೊಹಮ್ಮದ್​ ನೌಫೆಲ್​ ಮಾರಿಪಳ್ಳ ಹಾಗೂ ಮೊಹಮ್ಮದ್​​ ನೌಸಿರ್​​ ಕೊಲೆ ಧಮ್ಕಿ ಹಾಕಿದ್ದರು. ಅಲ್ಲದೇ ಲಗೂನ್​ ಕೊಕನಟ್​ ಹೋಟೆಲ್​ ಕಡೆಗೆ ಬಂದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಆವಾಜ್​ ಹಾಕಿ ಆರೋಪಿಗಳು ತೆರಳಿದ್ದರು ಎನ್ನಲಾಗಿದೆ.

ಲಗೂನ್​ ಕೊಕನಟ್​ ಹೋಟೆಲ್​ ಬಳಿಗೆ ಆಸಿಫ್​ನ ಜೊತೆಗೆ ತೆರಳಿದ ಸ್ನೇಹಿತರು ಆರೋಪಿಗಳ ಬಳಿಯಲ್ಲಿ ನೀವೇಕೆ ನಮ್ಮ ಸ್ನೇಹಿತನಿಗೆ ಕೊಲೆ ಬೆದರಿಕೆ ಹಾಕಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ನೌಫಲ್​​ ಅವಾಚ್ಯ ಶಬ್ದಗಳಲ್ಲಿ ಆಸಿಫ್​ಗೆ ನಿಂದಿಸುತ್ತಾ ಆತನ ಹೊಟ್ಟೆ ಹಾಗೂ ಎದೆಗೆ ಚೂರಿ ಹಾಕಿದ್ದಾನೆ . ನೋವಿನಿಂದ ಆಸಿಫ್​ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆಸಿಫ್​ನನ್ನು ಫಾದರ್​ ಮುಲ್ಲರ್ ಆಸ್ಪತ್ರೆಗೆ ಗೆಳೆಯರು ಕರೆದುಕೊಂಡು ಹೋಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆಂದು ಆಸಿಫ್​ನನ್ನು ಮಂಗಳೂರಿನ ಆಸ್ಪತ್ರೆಗೆ ಶಿಫ್ಟ್​ ಮಾಡಲಾಯ್ತಾದರೂ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಏನಿದು ದ್ವೇಷ..? : ಈ ಸಂಪೂರ್ಣ ಘಟನೆ ನಡೆಯಲು ಕಾರಣ ಆರೋಪಿಗಳು ಹಾಗೂ ಕೊಲೆಯಾದ ವ್ಯಕ್ತಿಯ ನಡುವೆ ಇದ್ದ ಹಾರನ್​ ದ್ವೇಷ. ಪ್ರತಿ ದಿನ ಲಗೂನ್​ ಕೊಕೊನಟ್​ ಹೋಟೆಲ್​​ ಬಳಿಯಲ್ಲಿ ಆಸಿಫ್​ ಈ ಆರೋಪಿಗಳು ಕಂಡಾಗಲೆಲ್ಲ ತನ್ನ ಡಿಯೋ ಸ್ಕೂಟಿಯಿಂದ ಹಾರನ್​ ಮಾಡುತ್ತಿದ್ದನಂತೆ. ತಮ್ಮನ್ನು ನೋಡಿ ಸುಖಾ ಸುಮ್ಮನೇ ಹಾರನ್​ ಹಾಕುತ್ತಾನೆಂದು ಕೆರಳಿದ್ದ ಮೊಹಮ್ಮದ್​ ನೌಸಿರ್​ ಹಾಗೂ ಮೊಹಮ್ಮದ್​ ನೌಫೆಲ್​ ಆಸಿಫ್​ಗೆ ಕೊಲೆ ಬೆದರಿಕೆ ಹಾಕಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನು ಓದಿ : Rohit Sharma batting practice : ಟೀಮ್ ಇಂಡಿಯಾ ಟೆಸ್ಟ್ ಆಡುತ್ತಿರುವ 500 ಮೀ. ದೂರದಲ್ಲೇ ರೋಹಿತ್ ಬ್ಯಾಟಿಂಗ್ ಅಭ್ಯಾಸ

ಇದನ್ನೂ ಓದಿ : Electricity Bill Scam : ಎಚ್ಚರ ! ವಿದ್ಯುತ್ತ ಬಿಲ್‌ ಕಟ್ಟಿ ಎಂದೂ ನಿಮ್ಮ ಹಣ ದೋಚಬಹುದು!!

Murder due to hate over bike horn Bike horn Murder

Comments are closed.