Nagpura Railway accident: ಇಯರ್‌ ಫೋನ್‌ ಹಾಕಿಕೊಂಡು ರೈಲ್ವೇ ಹಳಿ ದಾಟುತ್ತಿದ್ದ ಇಂಜಿನಿಯರಿಂಗ್‌ ವಿದ್ಯಾರ್ಥಿನಿಗೆ ರೈಲು ಢಿಕ್ಕಿ: ಸಾವು

ನಾಗ್ಪುರ: (Nagpura Railway accident) 19 ವರ್ಷದ ವಿದ್ಯಾರ್ಥಿಯೊಬ್ಬಳು ಕಿವಿಗೆ ಇಯರ್ಫೊನ್‌ ಹಾಕಿಕೊಂಡು ರೈಲ್ವೇ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲಿಗೆ ಢಿಕ್ಕಿ ಹೊಡೆದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಾಗ್ಪುರ ಜಿಲ್ಲೆಯ ಗುಮ್‌ಗಾಂವ್ ರೈಲು ನಿಲ್ದಾಣದ ಬಳಿ ಬುಧವಾರ ಬೆಳಗ್ಗೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಭಂಡಾರಾ ಜಿಲ್ಲೆಯ ಸಟೋನಾ ಗ್ರಾಮದ ಆರತಿ ಮದನ್‌ ಗುರವ್‌ ಎಂದು ಗುರುತಿಸಲಾಗಿದ್ದು, ನಾಗ್ಪುರದ ಡೊಂಗರ್‌ಗಾಂವ್‌ನಲ್ಲಿರುವ ವೈಂಗಂಗಾ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಆಕೆ ರೈಲ್ವೇ ಹಳಿ ದಾಟುತ್ತಿದ್ದಾಗ ಒಳಬರುವ ರೈಲನ್ನು ಗಮನಿಸದೆ ಇದ್ದ ಕಾರಣ ಈ ಅವಘಡ (Nagpura Railway accident) ಸಂಭವಿಸಿದೆ.

ವಿದ್ಯಾರ್ಥಿನಿಯು ಕಿವಿಗೆ ಇಯರ್‌ ಫೋನ್‌ ಹಾಕಿಕೊಂಡು ರೈಲು ಹಳಿ ದಾಟುತ್ತಿದ್ದು, ಈ ವೇಳೆ ವೇಗವಾಗಿ ಬಂದ ರೈಲು ಆಕೆಗೆ ಢಿಕ್ಕಿಯಾಗಿದೆ. ರೈಲು ಬರುತ್ತಿದ್ದನ್ನು ಗಮನಿಸಿದ ಕೆಲವರು ಆಕೆಯನ್ನು ಕೂಗಿದ್ದಾರೆ. ಆದರೆ ಆಕೆ ಕಿವಿಗೆ ಇಯರ್ಫೊನ್‌ ಹಾಕಿಕೊಂಡಿದ್ದರಿಂದ ಜನರ ಕೂಗು ಹಾಗೂ ರೈಲಿನ ಸದ್ದು ಆಕೆಗೆ ಕೇಳಿಸಿರಲಿಲ್ಲ. ವೇಗವಾಗಿ ಬಂದ ರೈಲಿಗೆ ವಿದ್ಯಾರ್ಥಿನಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಿದ್ಯಾರ್ಥಿನಿಯು ಬೆಳಿಗ್ಗೆ ಸಂಬಂಧಿಕರೊಂದಿಗೆ ತಕಲಾಘಾಟ್ ಗ್ರಾಮದಿಂದ ಗುಮ್‌ಗಾಂವ್‌ಗೆ ಬಂದಿದ್ದರು ಎನ್ನಲಾಗಿದೆ. ಸದ್ಯ ಈ ಘಟನೆಯ ಕುರಿತು ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಯರ್‌ ಫೊನ್‌ ನಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆಯಾಗಿದೆ. ಇಯರ್‌ ಪೋನ್‌ ನಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಇಯರ್‌ ಫೋನ್‌ ಗಳನ್ನು ಬಳಕೆ ಮಾಡುವುದರಿಂದ ಬರಿ ಅಪಘಾತ ಸಂಭವಿಸುವುದಲ್ಲದೇ ಹಲವರು ಕಿವಿಯನ್ನು ಕೂಡ ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ : Mumbai-goa highway accident: ಕಾರು – ಟ್ರಕ್ ಭೀಕರ ಅಪಘಾತ : 9 ಮಂದಿ ಸಾವು

ಇದನ್ನೂ ಓದಿ : ಉಕ್ರೇನ್‌ನಲ್ಲಿ ವಿಮಾನ ದುರಂತ : ಆಂತರಿಕ ಸಚಿವರು ಸೇರಿ 18 ಮಂದಿ ಸಾವು

ಇದನ್ನೂ ಓದಿ : Police Arrests Roosters : ಕೋಳಿ ಹುಂಜಗಳನ್ನು ಅರೆಸ್ಟ್ ಮಾಡಿದ ಪೊಲೀಸರು

Nagpura Railway accident: An engineering student who was crossing the railway tracks with earphones was hit by a train: killed.

Comments are closed.