Actress Prema : ಕಂಕಣಭಾಗ್ಯ ಕರುಣಿಸುವಂತೆ ಕೊರಗಜ್ಜನಿಗೆ ಮೊರೆಹೋದ ನಟಿ ಪ್ರೇಮ

ಉಡುಪಿ : ಸ್ಯಾಂಡಲ್ ವುಡ್ ನ ಖ್ಯಾತ ನಟಿ ಪ್ತೇಮ (Actress Prema) ಅವರು ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನಿಗೆ ಮೊರೆಯಿಟ್ಟಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಉಡುಪಿ ಜಿಲ್ಲೆಗೆ ಆಗಮಿಸಿದ್ದ ಅವರು ಉಡುಪಿ ಜಿಲ್ಲೆಯ ಕಾಪುವಿನಲ್ಲಿರುವ ಕೊರಗಜ್ಜನ ಗುಡಿಗೆ ಭೇಟಿ ನೀಡಿದ್ದಾರೆ. ಈ ವೇಳೆಯಲ್ಲಿ ತಾವು ನೋಡಿರುವ ವರನನ್ನೇ ಅನುಗ್ರಹಿಸುವಂತೆ ಕೊರಗಜ್ಜನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕರಾವಳಿಗರ ಪಾಲಿನ ಆರಾಧ್ಯ ದೈವವಾಗಿರುವ ಕೊರಗಜ್ಜನ ಗುಡಿಗೆ ನಟ, ನಟಿಯರು ಆಗಮಿಸುತ್ತಲೇ ಇರುತ್ತಾರೆ. ಕಾರಣೀಕ ಸ್ಥಳವಾಗಿರುವ ಕಾಪು ಕೊರಗಜ್ಜನ ಸನ್ನಿಧಾನಕ್ಕೆ ಇದೀಗ ನಟಿ ಪ್ರೇಮ ಭೇಟಿ ನೀಡಿದ್ದಾರೆ. ಕೊರಗಜ್ಜನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ವೇಳೆಯಲ್ಲಿ ಅಲ್ಲಿದ್ದ ಅರ್ಚಕರು ಏನಾದ್ರೂ ಪ್ರಾರ್ಥನೆ ಸಲ್ಲಿಸುವುದು ಇದೆಯೇ ಎಂದು ಕೇಳಿದ್ದಾರೆ. ಈ ವೇಳೆಯಲ್ಲಿ ನಟಿ ಪ್ರೇಮ ಅವರು ಕಂಕಣಭಾಗ್ಯ ಕರುಣಿಸುವಂತೆ ಪ್ರಾರ್ಥನೆಯನ್ನು ಮಾಡಿದ್ದಾರೆ. ಈಗಾಗಲೇ ವರನನ್ನು ನೋಡಿದ್ದೇವೆ. ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಲ್ಲಿ ಪ್ರಾರ್ಥಿಸಿದ್ದಾರೆ.

ಉಡುಪಿ ಜಿಲ್ಲೆಯ ಕಾಫುವಿನ ಕೊರಗಜ್ಜ ದೈವ ಸಾನಿಧ್ಯಕ್ಕೆ ಭೇಟಿ ನೀಡಿದ ನಂತರ ನಟಿ ಪ್ರೇಮಾ ಕಾಪುವಿನ ಅಯ್ಯಪ್ಪ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಇವರೊಂದಿಗೆ ನಟಿ ಪ್ರೇಮಾ ಅವರ ಸಹೋದರ ಅಯ್ಯಪ್ಪ ಹಾಗೂ ಅವರ ಪತ್ನಿ ಅನು ಕೂಡ ಹಾಜರಿದ್ದರು. ನಟಿ ಪ್ರೇಮಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ದಿನಗಳಲ್ಲಿ ಹೊಂದಾಣಿಕೆಯ ಕಾರಣದಿಂದಾಗಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದರು. ಅನತಂರ ಅವರು ರೆಡಿಯೋ ಜಾಕಿಯೊಬ್ಬರನ್ನು ಮದುವೆಯಾಗಿದ್ದರು ಎನ್ನುವ ವಂದತಿ ಹರಿದಾಡಿತ್ತು. ಅದಕ್ಕೆ ತೆರೆ ಕೂಡ ಎಳೆದಿದ್ದರು. ಇದೀಗ ನಟಿ ಪ್ರೇಮಾ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನ ನಂ.1 ನಟಿಯಾಗಿ ಮೆರೆದಿರುವ ಪ್ರೇಮ, ಕೆಲವು ವರ್ಷಗಳಿಂದಲೂ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ಖ್ಯಾತ ನಟಿ ರಾಖಿ ಸಾವಂತ್ ಅರೆಸ್ಟ್

ಇದನ್ನೂ ಓದಿ : ನಟ ದರ್ಶನ್‌ ತೂಗುದೀಪ್ ಫ್ಯಾನ್‌ ಗೆ ಫಿದಾ ಆದ ಆರ್‌ಜೆ ಮಯೂರ ರಾಘವೇಂದ್ರ‌

ಇದನ್ನೂ ಓದಿ : Young actor Dhanush : ಸ್ಯಾಂಡಲ್‌ವುಡ್‌ ಯುವ ನಟ ಧನುಷ್‌ ವಿಧಿವಶ

https://youtu.be/PViUxYc0kP0

Actress Prema Pray Koragajja to be merciful to Marriage

Comments are closed.