NEET Aspirants suicide: NEET ಆಕಾಂಕ್ಷಿತ ವಿದ್ಯಾರ್ಥಿ ಆತ್ಮಹತ್ಯೆ: ಹಾಸ್ಟೆಲ್‌ ಕೊಠಡಿಯಲ್ಲಿ ಸೂಸೈಡ್ ನೋಟ್ ಪತ್ತೆ

ಕೋಟಾ: (NEET Aspirants suicide) ಉತ್ತರ ಪ್ರದೇಶದ ಬದೌನ್ ಜಿಲ್ಲೆಯ 17 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ರಾಜಸ್ಥಾನದ ಕೋಟಾದಲ್ಲಿರುವ ತಮ್ಮ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಅಭಿಷೇಕ್ ಯಾದವ್ ಎಂದು ಗುರುತಿಸಲಾಗಿದ್ದು, ಪೊಲೀಸರ ಪ್ರಕಾರ, ಕೋಟಾದಲ್ಲಿ ಇದು ಈ ವರ್ಷ ನಾಲ್ಕನೇ ವಿದ್ಯಾರ್ಥಿ ಆತ್ಮಹತ್ಯೆಯಾಗಿದೆ.

ವರದಿಯ ಪ್ರಕಾರ, ಮೃತರು ಕಳೆದ ಕೆಲವು ದಿನಗಳಿಂದ ಅವರ ಕೋಚಿಂಗ್ ತರಗತಿಗಳಿಗೆ ಹಾಜರಾಗುತ್ತಿರಲಿಲ್ಲ. ಅವರು ಕಳೆದ ಎರಡು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರು ಮತ್ತು ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಅಥವಾ ನೀಟ್‌ಗೆ ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ಆತನ್ನ ಹಾಸ್ಟೆಲ್ ಕೊಠಡಿಯಿಂದ ವಶಪಡಿಸಿಕೊಂಡ ಆತ್ಮಹತ್ಯೆ ಪತ್ರದಲ್ಲಿ, ಮೃತನು ತನ್ನ ಪೋಷಕರಲ್ಲಿ ಕ್ಷಮೆಯಾಚಿಸಿದ್ದು, ತಾನು ತೊಂದರೆಯಲ್ಲಿದ್ದೇನೆ ಮತ್ತು ಅಧ್ಯಯನದ ಒತ್ತಡದಲ್ಲಿದೆ” ಎಂದು ಬರೆದುಕೊಂಡಿರುವುದಾಗಿ ಕುನ್ಹಾರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಗಂಗಾ ಸಹಾಯ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.ವಿದ್ಯಾರ್ಥಿ ಡೆತ್‌ ನೋಟ್‌ ಬರೆದಿಟ್ಟರೂ ಕೂಡ ವಿದ್ಯಾರ್ಥಿಯ ತಂದೆ ಹೆಚ್ಚುತ್ತಿರುವ ಅಧ್ಯಯನದ ಒತ್ತಡಕ್ಕೆ ಮಗ ಸಾವನ್ನಪ್ಪಿರುವುದಾಗಿ ತರಬೇತಿ ಸಂಸ್ಥೆಯನ್ನು ಹೊಣೆ ಮಾಡಿದ್ದಾರೆ.

“ಕೋಟಾದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶಗಳು ಏಕೆ ಉದ್ಭವಿಸುತ್ತಿವೆ ಮತ್ತು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ವ್ಯವಸ್ಥೆ ಏಕೆ ಜಾರಿಯಲ್ಲಿದೆ. ಸರಕಾರ ಕ್ರಮ ಕೈಗೊಳ್ಳಬೇಕು” ಎಂದು ಮೃತ ವಿದ್ಯಾರ್ಥಿಯ ತಂದೆ ಆರಾಮ್ ಸಿಂಗ್ ಆಗ್ರಹಿಸಿದ್ದಾರೆ. ಇದೀಗ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಮತ್ತು ಸಿಆರ್ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : Dehli road accident: ವಲಸೆ ಕಾರ್ಮಿಕರ ಮೇಲೆ ಟ್ರಕ್ ಪಲ್ಟಿ : 4 ವರ್ಷದ ಬಾಲಕ ಸೇರಿ 4 ಮಂದಿ ಸಾವು

ಇದನ್ನೂ ಓದಿ : Bengaluru Prostitution: ಸಿಲಿಕಾನ್‌ ಸಿಟಿಯಲ್ಲಿ ನಡೆಯುತ್ತಿದೆ ವೇಶ್ಯಾವಾಟಿಕೆ ದಂಧೆ: ಖೆಡ್ಡಾಗೆ ಬಿದ್ರೆ ಕಥೆ ಅಷ್ಟೇ!

ಇದನ್ನೂ ಓದಿ : Sathna truck accident: ಸ್ಟೇಷನರಿ ಬಸ್‌ಗಳಿಗೆ ಟ್ರಕ್ ಢಿಕ್ಕಿ: 6 ಮಂದಿ ಸಾವು, 50 ಮಂದಿಗೆ ಗಾಯ: 10 ಲಕ್ಷ ರೂ ಪರಿಹಾರ ಘೋಷಣೆ

NEET Aspirants commit suicide: Suicide note found in hostel room

Comments are closed.