ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಬಾಲಿವುಡ್‌ ಹೆಸರಾಂತ ನಟನ ಮೇಲೆ ಪತ್ನಿಯಿಂದಲೇ ಅತ್ಯಾಚಾರ ಆರೋಪದ ಮೇಲೆ ದೂರು ದಾಖಲಾಗಿದೆ. ಅಷ್ಟಕ್ಕೂ ಈ ನಟ ಯಾರು ಗೊತ್ತಾ? ನಟ ನವಾಜುದ್ದೀನ್‌ ಸಿದ್ದಿಕಿ (Nawazuddin Siddiqui Controversy) ಮೇಲೆ ಆತನ ಧರ್ಮಪತ್ನಿಯಾದ ಆಲಿಯಾ ಈ ಆರೋಪವನ್ನು ಮಾಡಿದ್ದಾರೆ. ಹಿಂದೊಮ್ಮೆ ನಟನ ಮೇಲೆ ಆರೋಪಗಳನ್ನು ಮಾಡಿದ್ದು, ಇದೀಗ ಮತ್ತೆ ತಮ್ಮ ಗಂಡನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ಅಷ್ಟೇ ಅಲ್ಲದೇ ನಟ ನವಾಜುದ್ದೀನ್‌ ಸಿದ್ದಿಕಿ ಅವರ ಪತ್ನಿ ತನ್ನ ಮಕ್ಕಳನ್ನು ತನ್ನಿಂದ ದೂರ ಮಾಡಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅಳಲನ್ನು ಹೇಳಿಕೊಂಡಿದ್ದಾರೆ. ಈ ರೀತಿ ತಮ್ಮ ನೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಫೋಸ್ಟ್‌ ಮಾಡಿದ್ದಾರೆ. ಇನ್ನು ಕೆಲ ದಿನಗಳಿಂದ ಸಿದ್ದಿಕಿ ಪತ್ನಿ ಆಲಿಯಾ ಆತನ ಕುಟುಂಬ ಹಾಗೂ ಆತನ ಮೇಲೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಸದ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, “ನನ್ನ ಮಕ್ಕಳಿಗೆ ಆತ ಎಂದಿಗೂ ತಂದೆ ಆಗೋಕೆ ಸಾಧ್ಯವಿಲ್ಲ. ಮಕ್ಕಳು ಹೇಗಿದ್ದಾರೆ ಎಂದು ಒಂದು ದಿನವೂ ನೋಡಲಿಲ್ಲ.

ಆದರೆ ಇದ್ದಕ್ಕಿದ್ದಂತೆ ಈಗ ಬಹಳ ಒಳ್ಳೆಯ ತಂದೆ ಎನ್ನುವಂತೆ ಸಾಬೀತು ಮಾಡಿ ನನ್ನ ಮಕ್ಕಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಹಣದಿಂದ ಜನರನ್ನು ಕೊಂಡುಕೊಳ್ಳಬಹುದು. ಆದರೆ ನನ್ನ ಮಕ್ಕಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಅಸಲಿಗೆ ಅವರನ್ನು ಇಲ್ಲಿ ಇರಿಸಬೇಕು ಎಂದುಕೊಂಡಿದ್ದೀಯಾ? ನಿನ್ನೊಟ್ಟಿಗೆ ಇರ್ತಾರೆ ಅಂದುಕೊಂಡಿದ್ದೀಯಾ? ತಂದೆ ಅಂದ್ರೆ ಏನು ಎಂದು ಅವರಿಗೆ ಗೊತ್ತಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ : ಕಿಯಾರಾ ಅಡ್ವಾಣಿಯನ್ನು ‘ಮೈ ವೈಫ್’ ಎಂದ ಸಿದ್ಧಾರ್ಥ್ ಮಲ್ಹೋತ್ರಾ : ‘ಇಷ್ಕ್ ವಾಲಾ ಲವ್’ ಎಂದ ಫ್ಯಾನ್ಸ್

ಇದನ್ನೂ ಓದಿ : Martin Movie Teaser Release : ಮಾರ್ಟಿನ್‌ ಟೀಸರ್‌ ನೋಡಿ ಬಾಲಿವುಡ್‌ ಮಂದಿ ಕಂಗಲಾಗಿದ್ದು ಯಾಕೆ ?

ಇದನ್ನೂ ಓದಿ : Prajaakeeya Party : ಉತ್ತಮ ಪ್ರಜಾಕೀಯ ಪಾರ್ಟಿಗೆ ‘ಆಟೋ ರಿಕ್ಷಾ’ ಗುರುತು : ಏನಿದು ಉಪ್ಪಿದ್ದು ಲೆಕ್ಕಚಾರ

ಅಷ್ಟೇ ಅಲ್ಲದೇ ಆಲಿಯಾ ತನ್ನ ಪತಿ ಕುಟುಂಬಸ್ಥರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಊಟ, ನೀರು ಕೊಡದೇ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆಲಿಯಾ ಇತ್ತೀಚೆಗೆ ಹೇಳಿಕೊಂಡಿದ್ದರು. ಇದೀಗ ಪತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ, ತಮ್ಮನ್ನು ಮನೆಯಿಂದ ಹೊರಗೆ ಹಾಕಲು ಏನೆಲ್ಲಾ ಕುತಂತ್ರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಆಲಿಯಾ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಜನವರಿ 23 ರಂದು ನವಾಜ್ ಅವರ ತಾಯಿ ಮೆಹರುನಿಸಾ ಸಿದ್ದಿಕಿ ಅವರು ನಟನ ಪತ್ನಿ ವಿರುದ್ಧ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದ್ದರು. ಮುಂಬೈನ ವರ್ಸೋವಾ ಪೊಲೀಸರು ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಆಲಿಯಾಳನ್ನು ಕರೆದರು. ನಂತರ, ಆಲಿಯಾಳ ವಕೀಲರು ನವಾಜುದ್ದೀನ್ ಅವರ ಕುಟುಂಬವು ಆಲಿಯಾಗೆ ಹೇಗೆ ಚಿತ್ರಹಿಂಸೆ ನೀಡುತ್ತಿದೆ ಮತ್ತು ಆಹಾರ, ಹಾಸಿಗೆ ಮತ್ತು ಶೌಚಾಲಯದ ಪ್ರವೇಶವನ್ನು ಹೇಗೆ ಕಸಿದುಕೊಳ್ಳುತ್ತಿದೆ ಎಂಬುದರ ಕುರಿತು ಕೆಲವು ಆಘಾತಕಾರಿ ಬಹಿರಂಗಪಡಿಸಿದರು.

ನಂತರ, ನಟನ ವಕೀಲರು ಆಲಿಯಾ ಇನ್ನೂ ತನ್ನ ಮಾಜಿ ಪತಿಯನ್ನು ಮದುವೆಯಾಗಿದ್ದಾರೆ ಮತ್ತು ಆದ್ದರಿಂದ ನವಾಜ್ ಅವರೊಂದಿಗಿನ ವಿವಾಹವು ಮಾನ್ಯವಾಗಿಲ್ಲ ಎಂದು ಹೇಳಿದರು.ನಟ ನವಾಜುದ್ದೀನ್‌ ಸಿದ್ದಿಕಿ ಅವರ ವೈಯಕ್ತಿಕ ಜೀವನವನ್ನು ಹೊರತುಪಡಿಸಿದ್ದರೆ, ಸಿನಿರಂಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಸಿನಿಪ್ರೇಕ್ಷಕರನ್ನು ಸದಾ ರಂಜಿಸಿದ್ದಾರೆ.

Nawazuddin Siddiqui Controversy: Rape Case Filed Against Bollywood Actor Nawazuddin Siddiqui

Comments are closed.