Neginahala Swamiji commits suicide : ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣಕ್ಕೆ ಹೊಸ ತಿರುವು : ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ

ಬೆಳಗಾವಿ : Neginahala Swamiji commits suicide : ಲೈಂಗಿಕ ಕಿರುಕುಳ ಪ್ರಕರಣದ ಅಡಿಯಲ್ಲಿ ಪೊಲೀಸ್​ ಕಸ್ಟಡಿಯಲ್ಲಿರುವ ಮುರುಘಾ ಶರಣರ ಕಸ್ಟಡಿ ಅವಧಿ ಇಂದಿಗೆ ಕೊನೆಗೊಂಡಿದೆ. ಹೀಗಾಗಿ ಇಂದು ಪೊಲೀಸರು ಮುರುಘಾ ಶರಣರನ್ನು ಕೋರ್ಟ್ನ ಎದುರು ಹಾಜರುಪಡಿಸಲಿದ್ದಾರೆ. 11 ಗಂಟೆಗೆ ಮುರುಘಾ ಶರಣರ ಪೊಲೀಸ್​ ಕಸ್ಟಡಿ ಕೊನೆಗೊಳ್ಳಲಿದ್ದು ಮುರುಘಾ ಶರಣರನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.


ಈ ಎಲ್ಲ ಕಾನೂನು ಪ್ರಕ್ರಿಯೆಗಳ ನಡುವೆಯೇ ಮುರುಘಾ ಶರಣರ ಮೇಲೆ ಎದುರಾಗಿರುವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಹೊಸ ತಿರುವೊಂದು ಸಿಕ್ಕಿದೆ. ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇಬ್ಬರು ಮಹಿಳೆಯರು ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡಿದ್ದ ಆಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.


ಈ ವೈರಲ್​ ಆಡಿಯೋದಲ್ಲಿ ಮಹಿಳೆಯರಿಬ್ಬರು ನೇಗಿನಹಾಳ ಸ್ವಾಮೀಜಿಯ ಹೆಸರನ್ನು ಪ್ರಸ್ತಾಪಿಸಿದ್ದರು. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಹೆಸರು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮನನೊಂದ ನೇಗಿನಹಾಳ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಮೊನ್ನೆಯಷ್ಟೇ ಇಬ್ಬರು ಮಹಿಳೆಯರು ಮಾತನಾಡಿಕೊಂಡಿದ್ದ ಆಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆತ್ಮ ಗೌರವಕ್ಕೆ ಬೆಲೆ ನೀಡಿದ ನೇಗಿನಹಾಳ ಬಸವಸಿದ್ದಲಿಂಗ ಸ್ವಾಮೀಜಿ ಈ ಕಟು ನಿರ್ಧಾರ ಕೈಗೊಂಡಿದ್ದಾರೆ ಎಂದು ಮಠದ ಸಿಬ್ಬಂದಿ ಹೇಳ್ತಿದ್ದಾರೆ.


ವೈರಲ್​ ಆಗಿರುವ ಆಡಿಯೋದ ಕುರಿತು ಸೂಕ್ತ ತನಿಖೆ ನಡೆಸುವಂತೆ ಬೈಲಹೊಂಗಲ ಡಿವೈಎಸ್ಪಿಗೆ ಮಠದ ಆಡಳಿತ ಮಂಡಳಿ ದೂರನ್ನು ನೀಡಿದೆ. ಲಿಂಗಾಯತ ಧರ್ಮದ ಮಠಾಧೀಶರನ್ನು ಗುರಿಯಾಗಿಸಿಕೊಂಡು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡ್ತಿದ್ದಾರೆ .ನಮ್ಮ ಮಠಾಧೀಶರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಠಾಧೀಶರ ಚಾರಿತ್ರ್ಯಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಲಿಂಗಾಯತ ಧರ್ಮಕ್ಕೆ ಮುಜುಗರ ಉಂಟಾಗುವಂತೆ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡ್ತಿದ್ದಾರೆ. ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದೂರನ್ನು ನೀಡಲಾಗಿದೆ.

ಇದನ್ನು ಓದಿ : Cyrus Mistry : ಟಾಟಾ ಗ್ರೂಪ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

ಇದನ್ನೂ ಓದಿ : Bangalore Rain : ಬೆಂಗಳೂರಿನಲ್ಲಿ ರಣಮಳೆಯ ಅವಾಂತರ

Neginahala Swamiji commits suicide due to allegations of sexual assault

Comments are closed.