Bangalore Rain : ಬೆಂಗಳೂರಿನಲ್ಲಿ ರಣಮಳೆಯ ಅವಾಂತರ

ಬೆಂಗಳೂರು : Bangalore Rain ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿ ಹೋಗಿದೆ. ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ನಿನ್ನೆ ರಾತ್ರಿ ಮೇಘಸ್ಫೋಟದಂತೆ ಮೂರು ಗಂಟೆ ನಿರಂತರ ಮಳೆ ಸುರಿದಿತ್ತು. ಕೇವಲ 24 ಗಂಟೆಗಳಲ್ಲಿ ಸುಮಾರು 83 ಮಿಮೀ ಮಳೆಯಾಗಿದ್ದು, ಇದು 2014ರ ನಂತರ ನಗರದಲ್ಲಿ ಸುರಿದಿರುವ ಅತಿಹೆಚ್ಚಿನ ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆಯದ ತಿಳಿಸಿದೆ.

ಕಳೆದ ಎರಡು ತಿಂಗಳಿನಿಂದ ಮಳೆಯಿಂದಾಗಿ ತತ್ತರಿಸಿ ಹೋಗಿರುವ ರೈನ್ ಬೋ ಡ್ರೈವ್ ಲೇಔಟ್ ನಲ್ಲಿ ಮತ್ತೆ ನೀರು ನುಗ್ಗಿದೆ. ಸರ್ಜಾಪುರ ರಸ್ತೆ ಜಲಾವೃತಗೊಂಡಿದ್ದು, 100ಕ್ಕೂ ಹೆಚ್ಚು ಮನೆಗಳಿಗೆ ಜಲದಿಗ್ಬಂಧನ ಬಿದ್ದಿದೆ. ರೈನ್ ಬೋ ಡ್ರೈವ್ ಲೇಔಟ್ ಮುಂಭಾಗದ ಎರಡು ರಸ್ತೆಗಳು ಮುಳುಗಿ ಹೋಗಿವೆ. ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಸೇರಿ ಇಡೀ ಪ್ರದೇಶ ಜಲಾವೃತಗೊಂಡಿದೆ. ರೈನ್​ಬೋ ಲೇಔಟ್ ಮತ್ತು ಸುತ್ತಮುತ್ತಲ ಲೇಔಟ್​ಗಳು ಸೇರಿ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕೋರ ಮಂಗಲದ ರಸ್ತೆಗಳು ಸೋಮವಾರ ಬೆಳಗ್ಗೆಯೂ ಜಲಾವೃತವಾಗಿವೆ.

ಇನ್ನು ಮಾರತ್ ಹಳ್ಳಿಯ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ಇಕೋ ಸ್ಪೇಸ್ ಬಳಿಯ ರಿಂಗ್ ರೋಡ್ ಮೂರು ದಿನದ ಹಿಂದೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ನಿನ್ನೆ ಸುರಿದ ಮಳೆಗೆ ಮತ್ತೆ ಕಂಪ್ಲೀಟ್ ರಸ್ತೆ ಮುಳುಗಿ ಹೋಗಿದ್ದು ನದಿಯಂತೆ ಭಾಸವಾಗುತ್ತಿದೆ. ರಿಂಗ್ ರೋಡ್ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಮಾರತ್ ಹಳ್ಳಿಯ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ವ್ಯಕ್ತಿಯೊಬ್ಬ ನೀರಿನಲ್ಲಿ ಸಿಲುಕಿಕೊಂಡಿದ್ದ, ಸ್ಥಳೀಯ ಸೆಕ್ಯೂರಿಟಿ ಗಾರ್ಡ್ ಗಳು ನೀರಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ರಕ್ಷಿಸಿದ್ದಾರೆ.

ನೀರುತುಂಬಿದ ರಸ್ತೆ, ಕಂಬದಲ್ಲಿ ಹರಿದ ವಿದ್ಯುತ್ ಗೆ ಯುವತಿ ಸಾವು

ಬೆಂಗಳೂರು : ಸಿಲಿಕಾನ್‌ಸಿಟಿ ಬೆಂಗಳೂರಲ್ಲಿ ಸುರಿಯುತ್ತಿರುವ ರಣ ಮಳೆಗೆ ಬಾಳಿ ಬದುಕಬೇಕಿದ್ದ ಯುವತಿಯೊರ್ವಳು ಬಲಿಯಾಗಿದ್ದಾಳೆ. ಮಾರತ್ ಹಳ್ಳಿಯಿಂದ ವರ್ತೂರು ಕೋಡಿ ಬಳಿಯ ಸಿದ್ಧಾಪುರದ ನಿವಾಸಿ ಅಖಿಲಾ ಎಂಬ ಯುವತಿ ಬೆಂಗಳೂರಿನ ರಸ್ತೆ ಅವ್ಯವಸ್ಥೆ ಹಾಗೂ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತಿದ್ದು ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ ಮಾರತ್ ಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರ ನಿವಾಸಿಯಾಗಿರೋ 23 ವರ್ಷದ ಅಖಿಲಾ ಸೋಮವಾರ ರಾತ್ರಿ 9.30 ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಸಿದ್ಧಾಪುರ ಬಳಿ ಇರುವ ಮಯೂರ ಬೇಕರಿ ಬಳಿ ರಸ್ತೆ ಮೇಲೆ ಮಂಡಿಯುದ್ದಕ್ಕೆ ನೀರು ನಿಂತಿತ್ತು.

ನಿನ್ನೆ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ಹೊರಟಿದ್ದು,ರಾತ್ರಿ 9.30 ಆಗಿರೋದರಿಂದ ಅಖಿಲಾ ಅದೇ ಮಳೆಯಲ್ಲೇ ನೀರಿನ ಮಧ್ಯೆಯೇ ಸ್ಕೂಟರ್ ಚಲಾಯಿಸಿಕೊಂಡು ಮನೆಗೆ ಹೋಗೋ ಪ್ರಯತ್ನ ಮಾಡಿದ್ದಾಳೆ. ಈ ವೇಳೆ ರಸ್ತೆಯಲ್ಲಿ ನೀರು ಹೆಚ್ಚಿದ್ದರಿಂದ ಸ್ಕೂಟರ್ ಆಫ್ ಆಗಿ ಬೀಳುವಂತಾಗಿದೆ. ಈ ಸಮಯದಲ್ಲಿ,ಸಹಾಯಕ್ಕೆ ಬಲ ಭಾಗದಲ್ಲೇ ಇದ್ದ ಎಲೆಕ್ಟ್ರಿಕಲ್ ಪೋಲ್ ಹಿಡಿದುಕೊಂಡಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾಳೆ ಎನ್ನಲಾಗ್ತಿದೆ.

ಇದನ್ನೂ ಓದಿ : India Cricket team coach Rahul Dravid : ಸುದ್ದಿಗೋಷ್ಠಿಯಲ್ಲಿ ‘Sexy’ ಪದ ಬಳಸಲು ಹಿಂಜರಿದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ : viral Video

ಇದನ್ನು ಓದಿ : Cyrus Mistry : ಟಾಟಾ ಗ್ರೂಪ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

Bangalore Rain- Several parts of Bengaluru remain inundated due to severe water logging after heavy rainfall Massive traffic jam on Marathahalli

Comments are closed.