Padma Royal Challenge Scheme Fraud: ಕುಂದಾಪುರದಲ್ಲಿ ಪದ್ಮಾ ರಾಯಲ್‌ ಚಾಲೆಂಜ್‌ ಸ್ಕೀಮ್‌ ಹೆಸರಲ್ಲಿ ಕೋಟ್ಯಾಂತರ ರೂ ವಂಚನೆ: ಪ್ರಕರಣ ದಾಖಲು

ಗಂಗೊಳ್ಳಿ: (Padma Royal Challenge Scheme Fraud) ಪದ್ಮಾ ರಾಯಲ್‌ ಚಾಲೆಂಜ್‌ ಸ್ಕೀಮ್‌ ಹೆಸರಲ್ಲಿ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ನೀಡಬೇಕಾದ ಕೋಟ್ಯಾಂತರ ರೂಪಾಯಿ ಹಣವನ್ನು ವಂಚನೆ ಮಾಡಿದ ಆರೋಪದ ಮೇಲೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದ್ಮಾ ಹೆಗ್ಡೆ ಹಾಗೂ ಮೂಕಾಂಬು ಎನ್ನುವವರು ಪದ್ಮಾ ರಾಯಲ್‌ ಚಾಲೆಂಜ್‌ ಸ್ಕೀಮ್‌ ಹೆಸರಲ್ಲಿ ವಂಚನೆ ಮಾಡಿದ್ದು, ರತ್ನ ಎನ್ನುವವರಲ್ಲಿ ತಮ್ಮ ಉದ್ಯಮದಲ್ಲಿ ನೀವು ಸದಸ್ಯರಾದರೆ ನಿಮಗೆ ಕ್ಯಾಶಿಯರ್‌ ಆಗಿ ನೇಮಕ ಮಾಡುತ್ತೇವೆ ನೀವು 2 ಲಕ್ಷ ರೂಪಾಯಿ ಡೆಪಾಸಿಟ್‌ ಅಲ್ಲದೆ ನಿಮಗೆ 20 ಸಾವಿರ ಸಂಬಳ ನೀಡುವುದಾಗಿ ನಂಬಿಸಿದ್ದಾರೆ. ನಂತರ ರತ್ನಾ ಅವರು 2 ಲಕ್ಷ ರೂಪಾಯಿ ಡೆಪಾಸಿಟ್‌ ಇಟ್ಟಿದ್ದಾರೆ. ಇದಲ್ಲದೆ ಸಂಸ್ಥೆಗೆ ಗ್ರಾಹಕರನ್ನು ನೇಮಕ ಮಾಡುವಂತೆ ಹೇಳಿದ್ದಾರೆ.

ಗ್ರಾಹಕರು ವಾರಕ್ಕೆ 500 ರೂಪಾಯಿಯಂತೆ ಗ್ರಾಹಕರು 50 ಕಂತು ಕಟ್ಟಿದಲ್ಲಿ ಅವರಿಗೆ 34,000 ರೂಪಾಯಿ ನೀಡುವುದಾಗಿಯೂ, ಗ್ರಾಹಕರು ವಾರಕ್ಕೆ 950 ರೂಪಾಯಿಯಂತೆ 50 ಕಂತು ಕಟ್ಟಿದಲ್ಲಿ 68,000 ರೂಪಾಯಿ, ಗ್ರಾಹಕರು ತಿಂಗಳಿಗೆ 1,000 ರೂಪಾಯಿಯಂತೆ ಗ್ರಾಹಕರು 12 ಕಂತು ಕಟ್ಟಿದರೆ 17,000 ರೂಪಾಯಿ ಕೊಡುವುದಾಗಿಯೂ ಹಾಗೂ ಗ್ರಾಹಕರು ತಿಂಗಳಿಗೆ 2,000 ರೂಪಾಯಿಯಂತೆ 12 ತಿಂಗಳು ಕಟ್ಟಿದರೆ 34,000 ರೂಪಾಯಿ ನೀಡುವುದಾಗಿಯೂ, ಗ್ರಾಹಕರು 50 ಸಾವಿರ ರೂಪಾಯಿ ಒಂದು ವರ್ಷ ಡೆಪೋಸಿಟ್‌ ಇಟ್ಟರೆ 80 ಸಾವಿರ ರೂಪಾಯಿ ಕೊಡುವುದಾಗಿಯೂ, ಗ್ರಾಹಕರು 1ಲಕ್ಷ ರೂಪಾಯಿ ಒಂದು ವರ್ಷ ಡೆಪೋಸಿಟ್‌ ಇಟ್ಟರೆ 1,60,000 ರೂಪಾಯಿ ಕೊಡುವುದಾಗಿಯೂ ಹೇಳಿದ್ದಾರೆ.

ಅಲ್ಲದೇ ಒಬ್ಬ ಗ್ರಾಹಕರನ್ನು ಸೇರ್ಪಡೆ ಮಾಡಿದರೆ 100 ರೂಪಾಯಿ ಕಮಿಷನ್ ನೀಡುವುದಾಗಿಯೂ ನಂಬಿಸಿದ್ದಾರೆ. ಅದರಂತೆ ರತ್ನಾ ಅವರು 131 ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದು ಕೆಲವು ಗ್ರಾಹಕರಲ್ಲಿ ವಾರಕ್ಕೆ 500 ರೂಪಾಯಿ ಹಾಗೂ ಇನ್ನು ಕೆಲವು ಗ್ರಾಹಕರಲ್ಲಿ 1,000 ರೂಪಾಯಿಯನ್ನು ಸಂಗ್ರಹಿಸುತ್ತಿದ್ದರು. ಸಂಗ್ರಹಿಸಿದ ಹಣವನ್ನು ಬಗ್ವಾಡಿಯಲ್ಲಿರುವ ಪದ್ಮಾಹೆಗ್ಡೆಯವರ ಕಛೇರಿಯಲ್ಲಿ ಪದ್ಮಾ ಹೆಗ್ಡೆ, ಸೆಲ್ವಾರಾಜ, ಪದ್ಮಾ ಹೆಗ್ಡೆ ರವರ ಮಗ ದಿಶಾಂತ್ ಹೆಗ್ಡೆ, ಮಗಳು ಸುಹಾನಿ ಹೆಗ್ಡೆ ಯವರು ಸಹಿ ಹಾಕಿ ಹಣ ಸ್ವೀಕರಿಸುತ್ತಿದ್ದರು.

ಗ್ರಾಹಕರಿಂದ ಹಣ ಸಂಗ್ರಹಿಸುವ ಬಗ್ಗೆ ಪದ್ಮಾ ಹೆಗ್ಡೆ ಯವರು ನೀಡಿದ ಕಾರ್ಡ್‌ಗೆ ಹಣ ಸ್ವೀಕರಿಸಿದ ಬಗ್ಗೆ ಸಹಿ ಹಾಕಿಸಿಕೊಳ್ಳುತ್ತಿದ್ದು, ಸಂಸ್ಥೆಗೆ ಗ್ರಾಹಕರಿಂದ ಹಣ ಡೆಪಾಸಿಟ್‌ ಇರಿಸಿಕೊಂಡು ಅವರಿಗೆ ಅಗ್ರಿಮೆಂಟ್ ಪತ್ರ ನೀಡುತ್ತಿದ್ದರು. ‌2022 ನೇ ಸಾಲಿನ ಜೂನ್‌ ತಿಂಗಳಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಬಾರಂದಾಡಿ ಶಾಲೆಯನ್ನು 5 ವರ್ಷಗಳ ವರೆಗೆ ದತ್ತು ಪಡೆದು 6 ಜನ ಗೌರವ ಶಿಕ್ಷಕಿಯರನ್ನು ಹಾಗೂ ಇಬ್ಬರು ಆಯಾರನ್ನು ನೇಮಿಸಿ ಸಂಬಳ ಕೊಡುವುದಾಗಿ ಹೇಳಿದ್ದು, ಶಾಲಾ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವುದಾಗಿ ಹೇಳಿದ್ದಾರೆ. ನಂತರ ಮಕ್ಕಳಿಗೂ ಮೂಲ ಸೌಕರ್ಯವನ್ನು ಒದಗಿಸದೇ ಶಿಕ್ಷಕರಿಗೆ ಹಾಗೂ ಆಯಾಗಳಿಗೆ ಸಂಬಳ ಕೊಡದೇ ನಂಬಿಸಿ ಮೋಸ ಮಾಡಿದ್ದಾರೆ.

ಅಲ್ಲದೇ ಸದಸ್ಯರಿಗೆ ಹಾಗೂ ಗ್ರಾಹಕರಾದ ಸುಜಾತಾ ಹಾಗೂ ಅವರ ಗ್ರಾಹಕರಿಗೆ 24,05,000 ರೂಪಾಯಿ ಸುಭಾಷ ಹಾಗೂ ಅವರ ಗ್ರಾಹಕರಿಗೆ 5,92,500 ರೂಪಾಯಿ ಭಾಗ್ಯಶ್ರೀ ಹಾಗೂ ಅವರ ಗ್ರಾಹಕರಿಗೆ 7,87,500 ರೂಪಾಯಿ ಹಾಗೂ ಯಶೋಧಾ ಹಾಗೂ ಅವರ ಗ್ರಾಹಕರಿಗೆ 9,12,000 ರೂಪಾಯಿ ರೇವತಿ ಹಾಗೂ ಅವರ ಗ್ರಾಹಕರಿಗೆ 4,05,800 ದೀಪಾ ಹಾಗೂ ಅವರ ಗ್ರಾಹಕರಿಗೆ 3,94,000 ರಾಘವೇಂದ್ರ ಪೂಜಾರಿ ಹಾಗೂ ಅವರ ಗ್ರಾಹಕರಿಗೆ 11,00,515 ರೂಪಾಯಿ ಭಾರತಿ ಹಾಗೂ ಅವರ ಗ್ರಾಹಕರಿಗೆ 2,14,000 ಸರೋಜಾ ಹಾಗೂ ಅವರ ಗ್ರಾಹಕರಿಗೆ 3,90,000 ರೂಪಾಯಿ ಸವಿತಾ ಹಾಗೂ ಅವರ ಗ್ರಾಹಕರಿಗೆ 76,300 ರೂಪಾಯಿ ಸುಶೀಲಾ ಹಾಗೂ ಅವರ ಗ್ರಾಹಕರಿಗೆ 2,50,000 ರೂಪಾಯಿ ಒಟ್ಟು 1,07,60,615 ರೂಪಾಯಿ ಹಿಂದುರಿಗಸಬೇಕಾದ ಹಣವನ್ನು ನೀಡದೇ ಅವರ ಕಛೇರಿಗಳನ್ನು ಬಂದ್‌ ಮಾಡಿ ಸದಸ್ಯರು ಹಾಗೂ ಗ್ರಾಹಕರಿಗೆ ನಂಬಿಸಿ ಮೋಸ ಮಾಡಿದ್ದಾರೆ.

ಇದನ್ನೂ ಓದಿ : Mangalore Civil strike: ಮಂಗಳೂರು : ಇಂದಿನಿಂದ ಪೌರಕಾರ್ಮಿಕ ಮುಷ್ಕರ : ತ್ಯಾಜ್ಯ ವಿಲೇವಾರಿ, ನೀರು ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರತ್ನಾ ಅವರು ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಅಪರಾಧ ಕ್ರಮಾಂಕ 12/2023 ಕಲಂ: 406, 417, 420 ಐಪಿಸಿ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Padma Royal Challenge Scheme Fraud: Crores of Rs fraud in the name of Padma Royal Challenge Scheme in Kundapur: Case registered

Comments are closed.