Shikhar Dhawan : ಶಿಖರ್ ಧವನ್’ಗೆ ಪೇಂಟಿಂಗ್ ಗಿಫ್ಟ್ ಕೊಟ್ಟ ಅಂತರಾಷ್ಟ್ರೀಯ ಚಿತ್ರಕಾರ ವಿಲಾಸ್ ನಾಯಕ್, ಕನ್ನಡಿಗನಿಗೆ ಥ್ಯಾಂಕ್ಸ್ ಎಂದ ಗಬ್ಬರ್

ಬೆಂಗಳೂರು: ಭಾರತ ಕ್ರಿಕೆಟ್ ತಂಡದ (Indian Cricket team) ಎಡಗೈ ಓಪನರ್ ಶಿಖರ್ ಧವನ್ (Shikha’s Dhawan) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಆಕರ್ಷಕ ಶೈಲಿಯ ಎಡಗೈ ದಾಂಡಿಗ ಶಿಖರ್ ಧವನ್ ಸ್ಫೋಟಕ ಆಟಕ್ಕೆ ಹೆಸರಾದವರು. ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಶಿಖರ್ ಧವನ್, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡದ ನಾಯಕತ್ವ ವಹಿಸಲಿದ್ದಾರೆ.ಶಿಖರ್ ಧವನ್’ಗೆ ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ, ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ. ಗಬ್ಬರ್ ಹಾಕಿರುವ ಅದೊಂದು ಪೋಸ್ಟ್. ತಮ್ಮ ಮನೆಯ ಬೆಡ್ ರೂಮ್’ನಲ್ಲಿ ಆಕರ್ಷಕ ಪೇಂಟಿಂಗ್ (International painter Vilas Naik) ಮುಂದೆ ನಿಂತಿರುವ ಚಿತ್ರವೊಂದನ್ನು ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂದ ಹಾಗೆ ಆ ಪೇಂಟಿಂಗ್ ಅನ್ನು ರಚಿಸಿ ಶಿಖರ್ ಧವನ್’ಗೆ ಉಡುಗೊರೆಯಾಗಿ ನೀಡಿದವರು ನಮ್ಮ ಕನ್ನಡಿಗ ವಿಲಾಸ್ ನಾಯಕ್ (International artist Vilas Nayak). ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯವರಾದ ವಿಲಾಸ್ ನಾಯಕ್ ಅಂತರಾಷ್ಟ್ರೀಯ ಕಲಾವಿದ. ಕ್ಷಣ ಮಾತ್ರದಲ್ಲಿ ಅತ್ಯಾಕರ್ಷಕ ಪೇಂಟಿಂಗ್ ಕಲಾಕೃತಿಗಳನ್ನು ರಚಿಸುವುದರಲ್ಲಿ ವಿಲಾಸ್ ನಾಯಕ್ ಅವರದ್ದು ಎತ್ತಿದ ಕೈ.ತಮಗೆ ಪೇಂಟಿಂಗ್ ಗಿಫ್ಟ್ ಕೊಟ್ಟಿರುವ ವಿಲಾಸ್ ನಾಯಕ್’ಗೆ ಶಿಖರ್ ಧವನ್ ಸೋಷಿಯಲ್ ಮೀಡಿಯಾದಲ್ಲೇ ಧನ್ಯವಾದ ತಿಳಿಸಿದ್ದಾರೆ.

‘’ಈ ಚಂದದ ಪೇಂಟಿಂಗ್’ಗಾಗಿ ತುಂಬಾ ಥ್ಯಾಂಕ್ಸ್ ಸಹೋದರ ವಿಲಾಸ್ ನಾಯಕ್’’ ಎಂದು ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಇದಕ್ಕೆ ಫೇಸ್’ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ವಿಲಾಸ್ ನಾಯಕ್ ‘’ನನ್ನ ಪೇಂಟಿಂಗ್ ಶಿಖರ್ ಧವನ್ ಅವರ ಮನೆಯ ಗೋಡೆಯಲ್ಲಿ ಮಿಂಚುತ್ತಿದೆ. ನಿಮಗೆ ಇದು ಇಷ್ಟವಾಗಿದ್ದಕ್ಕೆ ಖುಷಿಯಾಗುತ್ತಿದೆ ಸಹೋದರ ಶಿಖರ್ ಧವನ್’’ ಎಂದು ಫೇಸ್’ಬುಕ್’ನಲ್ಲಿ ವಿಲಾಸ್ ನಾಯಕ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ರಣಜಿ ಕ್ವಾರ್ಟರ್ ಫೈನಲ್ : ಉತ್ತರಾಖಂಡ್ ವಿರುದ್ಧ ಮೊದಲ ದಿನವೇ ಕನ್ನಡಿಗರ ಆರ್ಭಟ

ಇದನ್ನೂ ಓದಿ : Exclusive: ಜ್ಯೂನಿಯರ್ ಮಹಿಳಾ ವಿಶ್ವಕಪ್ ವಿಕ್ರಮದ ಹಿಂದೆ ಕನ್ನಡತಿಯ ಕಮಾಲ್, ಭಾರತದ ಯಶಸ್ಸಿನ ಹಿಂದಿದ್ದಾರೆ ಕಲ್ಬುರ್ಗಿ ಕೋಚ್

ಇದನ್ನೂ ಓದಿ : ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ಕೊಹ್ಲಿ ದಂಪತಿ

International painter Vilas Naik gave painting gift to Shikhar Dhawan, Gabbar said thanks to Kannadiga.

Comments are closed.