ಬೆಂಗಳೂರು : Gang rape Bangalore : ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯೋರ್ವಳ ಮೇಲೆ ಆಕೆಯ ಸ್ನೇಹಿತ ಅತ್ಯಾಚಾರವೆಸಗಿದ್ದು ಮಾತ್ರವಲ್ಲದೇ ತನ್ನ ಸ್ನೇಹಿತನ ಜೊತೆ ಸೇರಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಬೆಂಗಳೂರು ಗಿರಿನಗರದ ನಿವಾಸಿಗಳಾಗಿರುವ ಚೇತನ್ ಹಾಗೂ ಪುರುಷೋತ್ತಮ್ ಎಂಬವರೇ ಅತ್ಯಾಚಾರವೆಸಗಿದ ಆರೋಪಿಗಳಾಗಿದ್ದಾರೆ. ಪುರುಷೋತ್ತಮ್ ತುಮಕೂರು ಮೂಲದ ಯುವತಿಯನ್ನು ಪ್ರೀತಿಸುವಂತೆ ಕಳೆದ ಎರಡು ವರ್ಷಗಳಿಂದಲೂ ಬೆನ್ನಿಗೆ ಬಿದ್ದಿದ್ದ. ಆತನ ಕಿರುಕುಳ ತಾಳಲಾರದೆ ಆಕೆ ಕಳೆದೊಂದು ವರ್ಷದಿಂದಲೂ ಪ್ರೀತಿಸೋದಕ್ಕೆ ಒಪ್ಪಿಕೊಂಡಿದ್ದಳು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪುರುಷೋತ್ತಮ್ ತನ್ನ ತುಮಕೂರಿಗೆ ತೆರಳಿದ್ದ ವೇಳೆಯಲ್ಲಿ ಪ್ರಿಯತಮೆಯೆ ಜೊತೆಗೆ ಕಿರಿಕ್ ಮಾಡಿಕೊಂಡಿದ್ದ. ಬೆಂಗಳೂರಿಗೆ ವಾಪಾಸಾಗುವ ವೇಳೆಯಲ್ಲಿ ಆಕೆಯ ಮೊಬೈಲ್ ಪೋನ್ ತೆಗೆದುಕೊಂಡು ಬಂದಿದ್ದಾನೆ. ಆದರೆ ತನ್ನ ಮೊಬೈಲ್ ಪೋನ್ ವಾಪಾಸ್ ಕೊಡುವಂತೆ ಕರೆ ಮಾಡಿ ಕೇಳಿದಾಗ, ನೀವು ಬೆಂಗಳೂರಿನ ಮೆಜಿಸ್ಟಿಕ್‌ಗೆ ಬಾ ಮೊಬೈಲ್ ಕೊಡುವುದಾಗಿ ಹೇಳಿದ್ದಾನೆ. ಆಕೆ ಮೊಬೈಲ್ ಪಡೆಯುವ ಸಲುವಾಗಿ ಮೆಜಿಸ್ಟಿಕ್‌ಗೆ ಬಂದಾಗ ಆಕೆಯನ್ನು ಪುರುಷೋತ್ತಮ್ ಗಿರಿನಗರದಲ್ಲಿರುವ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ನಂತರ ತನ್ನ ಸ್ನೇಹಿತ ಚೇತನ್‌ನನ್ನೂ ಕೂಡ ಸ್ಥಳಕ್ಕೆ ಕರೆಯಿಸಿಕೊಂಡು ಆತನ ಜೊತೆಗೆ ಸೇರಿಕೊಂಡು ಸಾಮೂಹಿಕವಾಗಿ ಅತ್ಯಾಚಾರ ವೆಸಗಿದ್ದಾರೆ. ಈ ವೇಳೆಯಲ್ಲಿ ಯುವತಿ ಕೂಗಿಕೊಂಡಿದ್ದಾಳೆ. ಯುವತಿಯ ಚೀರಾಟವನ್ನು ಕೇಳಿದ ಸ್ಥಳೀಯರು ಗಿರಿನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಗಿರಿನಗರ ಠಾಣೆಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : Uttar Pradesh Crime Case : ಮಗಳ ಮೇಲೆ ಅತ್ಯಾಚಾರ, ಆರೋಪಿಗಳ ವಿರುದ್ದ ಕ್ರಮಕೈಗೊಳ್ಳದ ಪೊಲೀಸರು : ತಂದೆ ಆತ್ಮಹತ್ಯೆಗೆ ಶರಣು
ಇದನ್ನೂ ಓದಿ : Woman Killed : ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯನ್ನು ಕೊಂದು ದೇಹವನ್ನು ತುಂಡರಿಸಿದ ಆರೋಪಿ ಅರೆಸ್ಟ್
Paramedical student gang rape in Bangalore Atrocities by lover