ಶ್ರದ್ಧಾ ವಾಕರ್ ಹತ್ಯೆ ಪ್ರಕರಣ : ಅಫ್ತಾಬ್‌ ಗೆ ಇಂದು ಪಾಲಿಗ್ರಾಫ್ ಪರೀಕ್ಷೆ

ನವದೆಹಲಿ : ಪ್ರೇಯಸಿಯನ್ನು ಕೊಂದು 38 ತುಂಡುಗಳನ್ನಾಗಿ ಕತ್ತರಿಸಿದ್ದ ಶ್ರದ್ದಾ ವಾಕರ್ ಕೊಲೆ ಪ್ರಕರಣದ (Shraddha Walkar murder case) ತನಿಖೆ ಚುರುಕುಗೊಂಡಿದೆ. ಶ್ರದ್ದಾ ಹತ್ಯೆಯ ಆರೋಪಿ ಆಫ್ತಾಬ್ ಪೂನಾವಾಲಾ ನನ್ನು (Aftab Poonawala) ಈಗಾಗಲೇ ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಆರೋಪಿ ಎಲ್ಲಾ ಮಾಹಿತಿಯನ್ನು ನೀಡದ ಹಿನ್ನೆಲೆಯಲ್ಲಿ ಆತನನ್ನು ಇಂದು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ.

ದೆಹಲಿಯ ಖಾಸಗಿ ಕಂಪೆನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಶ್ರದ್ದಾ ವಾಕರ್ ಜೊತೆಗೆ ಪ್ರೀತಿಸುವ ನಾಟಕವಾಡಿದ್ದ ಅಫ್ತಾಬ್ ಪೂನಾವಾಲಾ ನಂತರ ಆಕೆಯನ್ನು ಮನೆಯಲ್ಲಿ ಹತ್ಯೆ ಮಾಡಿ ಆಕೆಯ ಮೃತ ದೇಹಲವನ್ನು ಬರೋಬ್ಬರಿ 38 ತುಂಡುಗಳನ್ನಾಗಿ ಕತ್ತರಿಸಿದ್ದ. ನಿತ್ಯವೂ ಒಂದೊಲ್ಲೇ ತುಂಡುಗಳನ್ನು ಕಾಡಿನಲ್ಲಿ ಪ್ರಾಣಿಗಳಿಗೆ ಎಸೆದು ಬರುತ್ತಿದ್ದ. ಏನೂ ಆಗಿಲ್ಲ ಅನ್ನುವಂತೆ ಆಫ್ತಾಬ್ ವರ್ತಿಸುತ್ತಿದ್ದ. ಆದರೆ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲೀಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಕಾಡಿನಲ್ಲಿ ದೊರೆತಿರುವ ಮೂಳೆಗಳು ಮನುಷ್ಯರ ಮೂಳೆಗಳಾಗಿವೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹೇಳುತ್ತಿದೆ. ಆದರೆ ಆಕೆಯ ರುಂಡ ಇನ್ನೂ ಪತ್ತೆಯಾಗಿಲ್ಲ. ಆರೋಪಿ ಕ್ಷಣಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಇನ್ನೂ ಪ್ರಮುಖ ಸಾಕ್ಷ್ಯಗಳು ಪತ್ತೆಯಾಗಿಲ್ಲ. ಇದೇ ಕಾರಣಕ್ಕೆ ಪೊಲೀಸರು ಆರೋಪಿಯನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ. ಈಂದು ಪಾಲಿಗ್ರಾಫ್ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ಇನ್ನೊಂದೆಡೆಯಲ್ಲಿ ಅಫ್ತಾಬ್ ಪೂನಾವಾಲಾ ಕೊಲೆಗೆ ಬಳಕೆ ಮಾಡಿದ್ದ ಆಯುಧ, ಶ್ರದ್ಧಾಳ ತಲೆಬುರುಡೆ, ಬಟ್ಟೆ ಮತ್ತು ಫೋನ್ ವಶ ಪಡಿಸಿಕೊಳ್ಳಲು ಇನ್ನೂ ಬಾಕಿ ಉಳಿದಿದೆ. ಹೀಗಾಗಿ ಅಫ್ತಾಬ್ ಪೊಲೀಸ್ ಕಸ್ಟಡಿ ಅವಧಿಯನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಮಾಡುವಂತೆ ಕೋರಿಕೊಳ್ಳುವ ಸಾಧ್ಯತೆಯಿದೆ.

Shraddha Walkar murder case : ಸಿಬಿಐಗೆ ವರ್ಗಾವಣೆ ಆಗುತ್ತಾ ಪ್ರಕರಣ ?

ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ವಸೂಲಾತಿ ಸ್ಥಳಗಳಲ್ಲಿ ಮಾಧ್ಯಮಗಳು ಮತ್ತು ಸಾರ್ವಜನಿಕರ ಉಪಸ್ಥಿತಿಯು ಸಾಕ್ಷ್ಯವನ್ನು ಹಾಳುಮಾಡುತ್ತದೆ ಎಂದು ಆರೋಪಿಸಿದೆ.

ಬುಧವಾರ ವಿಚಾರಣೆಗೆ ಪಟ್ಟಿಯಾಗುವ ಸಾಧ್ಯತೆಯಿರುವ ಅರ್ಜಿಯು, ಇದುವರೆಗೆ ದೆಹಲಿ ಪೊಲೀಸರು ಕಾನೂನಿನಡಿಯಲ್ಲಿ ಅನುಮತಿ ಸಿಗದೆ ತನಿಖೆಗೆ ಸಂಬಂಧಿಸಿದಂತೆ ಪ್ರತಿಯೊಂದು ವಿವರವನ್ನು ಮಾಧ್ಯಮಗಳು ಮತ್ತು ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಘಟನಾ ಸ್ಥಳವನ್ನು ದೆಹಲಿ ಪೊಲೀಸರು ಇಲ್ಲಿಯವರೆಗೆ ಸೀಲ್ ಮಾಡಿಲ್ಲ. ಅಲ್ಲದೇ ಸಾರ್ವಜನಿಕರು ಹಾಗೂ ಮಾಧ್ಯಮ ಸಿಬ್ಬಂದಿಗಳು ನಿರಂತರವಾಗಿ ಪ್ರವೇಶಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : Shraddha Walkar Murder Case: ಮನೆ ಖರ್ಚು ನಿಭಾಯಿಸೋಕೆ ಜಗಳ.. ಶ್ರದ್ಧಾ ಕೊಲೆಯಲ್ಲಿ ಅಂತ್ಯ

ಇದನ್ನೂ ಓದಿ : Lockdown again in China : ಕೊರೊನಾ ಹೊಸ ಅಲೆಯ ಆರ್ಭಟ : ಚೀನಾದಲ್ಲಿ ಮತ್ತೆ ಲಾಕ್‌ಡೌನ್

Shraddha Walkar murder case Aftab Poonawala Polygraph test likely today

Comments are closed.