woman killed grandmother :ಆನ್​ಲೈನ್​ ಸಾಲದ ಆ್ಯಪ್​ಗಳಿಂದ ಕಿರುಕುಳ : ಸಾಲ ತೀರಿಸಲೆಂದು ಅಜ್ಜಿಯನ್ನೇ ಕೊಂದ ಮೊಮ್ಮಗಳು ಅಂದರ್​

ಪುಣೆ : woman killed grandmother : ಸಾಲವನ್ನು ತೀರಿಸುವ ಸಲುವಾಗಿ ಮೊಮ್ಮಗಳು ತನ್ನ ಅಜ್ಜಿಯನ್ನೇ ಕೊಂದತಂಹ ಆಘಾತಕಾರಿ ಘಟನೆಯು ಮಹಾರಷ್ಟ್ರದ ಪುಣೆಯ ವಾರ್ಜೆ ಎಂಬಲ್ಲಿ ಸಂಭವಿಸಿದೆ. ಮಂಗಳವಾರ ಸಂಜೆ ಸುಮಾರಿಗೆ ವಾರ್ಜೆಯಲ್ಲಿ ವೃದ್ಧೆಯೊಬ್ಬರನ್ನು ಹರಿತವಾದ ಆಯುಧಗಳಿಂದ ಕೊಂದು ಸಾಯಿಸಲಾಗಿದೆ ಎಂಬ ವಿಚಾರ ಪೊಲೀಸರ ಗಮನಕ್ಕೆ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಇದು ಮೃತ ವೃದ್ಧೆಯ ಮೊಮ್ಮಗಳದ್ದೇ ಕೃತ್ಯವೆಂದು ತಿಳಿದು ಬಂದಿದೆ. ತನ್ನ ಸಾಲವನ್ನು ಮರುಪಾವತಿ ಮಾಡಬೇಕೆಂದು ಅಜ್ಜಿಯ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಲು ಬಂದಿದ್ದ ಮೊಮ್ಮಗಳು ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೊಮ್ಮಗಳು ಆನ್​ಲೈನ್​ನ ವಿವಿಧ ಕ್ರೆಡಿಟ್​ ಫ್ಲಾಟ್​ಫಾರಂಗಳಲ್ಲಿ ಸಾಲವನ್ನು ಮಾಡಿದ್ದಳು .


ಸುಲೋಚನಾ ಸುಭಾಷ್​ ಡಾಂಗೆ(70) ಮಂಗಳವಾರ ಸಂಜೆ ಸುಮಾರಿಗೆ ವಾರ್ಜೆಯ ಆಕಾಶನಗರದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಬ್ಯಾಂಕ್​ ಒಂದರಲ್ಲಿ ಕ್ರೆಡಿಟ್​ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಮೊಮ್ಮಗಳು ಗೌರಿ ಡಾಂಗ್​ ಈ ಸಂಬಂಧ ದೂರನ್ನ ದಾಖಲಿಸಿದ್ದರು. ಮೃತ ವೃದ್ಧೆಯು ತನ್ನ ಪುತ್ರ ಸುನೀಲ್​ ಹಾಗೂ ಮೊಮ್ಮಗಳು ಗೌರಿಯೊಂದಿಗೆ ಮನೆಯಲ್ಲಿ ವಾಸವಿದ್ದರು.

ಮೊಮ್ಮಗಳು ಪೊಲೀಸರಿಗೆ ನೀಡಿದ್ದ ಮಾಹಿತಿಯ ಪ್ರಕಾರ ಮನೆಯಲ್ಲಿ ಸುಮಾರು 36 ಸಾವಿರ ರೂಪಾಯಿ ನಗದು , ಅಜ್ಜಿಯ ಚಿನ್ನಾಭರಣಗಳಾದ ಸರ ಹಾಗೂ ಕಿವಿಯೋಲೆಗಳು ನಾಪತ್ತೆಯಾಗಿವೆ ಎಂದಿದ್ದರು. ಮೊಮ್ಮಗಳು ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು ಮೊದಲು ಇದು ದರೋಡೆ ಪ್ರಕರಣ ಎಂದು ಭಾವಿಸಿದ್ದರು. ಮೃತದೇಹದ ಪಕ್ಕದಲ್ಲಿ ಪೊಲೀಸರಿಗೆ ರೇಜರ್​ ಬ್ಲೇಡ್​ ಕೂಡ ಪತ್ತೆಯಾಗಿತ್ತು. ಈ ರೇಜರ್​ ಬ್ಲೇಡ್​ನಿಂದ ವೃದ್ಧೆಯ ಗಂಟಲನ್ನು ಸೀಳಲಾಗಿತ್ತು. ಬೆಳಗ್ಗೆ 10.30ರಿಂದ ಅಜ್ಜಿ ಮನೆಯಲ್ಲಿ ಒಬ್ಬಳೇ ಇದ್ದಳು ಎಂದು ಗೌರಿ ಪೊಲೀಸರಿಗೆ ತಿಳಿಸಿದ್ದು, ಆಕೆ ಮತ್ತು ತಂದೆ ಮನೆಯಿಂದ ಹೊರಬಂದಿದ್ದರು.


ಮೊಮ್ಮಗಳ ಹೇಳಿಕೆಗಳು ಪೊಲೀಸರಿಗೆ ಈಕೆಯ ಮೇಲೆಯೇ ಅನುಮಾನ ಹುಟ್ಟುವಂತೆ ಮಾಡಿತ್ತು. ಹೀಗಾಗಿ ಪೊಲೀಸರು ಪ್ರಕರಣದಲ್ಲಿ ಗೌರಿ ಪಾತ್ರ ಏನಿರಬಹುದು ಎಂಬ ಬಗ್ಗೆ ತನಿಖೆ ನಡೆಸಲು ಆರಂಭಿಸಿದರು. ಗೌರಿ ತನ್ನ ಖರ್ಚಿಗೆಂದು ಆನ್​ಲೈನ್​ ಫ್ಲಾಟ್​ಫಾರಂಗಳಿಂದ ಸಾಲ ಪಡೆದಿದ್ದಳು ಎಂಬುದು ತನಿಖೆಯಿಂದ ಪೊಲೀಸರಿಗೆ ತಿಳಿಯಿತು. ಸಾಲ ನೀಡಿದ್ದ ಕಂಪನಿಗಳು ಸಾಲ ಮರುಪಾವತಿ ಮಾಡುವಂತೆ ಗೌರಿಗೆ ಪದೆ ಪದೇ ಕಾಲ್​ ಮಾಡಿ ಪೀಡಿಸುತ್ತಿದ್ದವು. ಇದರಿಂದ ಒತ್ತಡಕ್ಕೆ ಸಿಲುಕಿದ್ದ ಗೌರಿಯು ತಲೆದಿಂಬಿನಿಂದ ವೃದ್ಧೆಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಇದಾದ ಬಳಿಕ ರೇಜರ್​ ಬ್ಲೇಡ್​ ಹಾಗೂ ಸ್ಕ್ರೂಡ್ರೈವರ್​​ನಿಂದ ಶವಕ್ಕೆ ಗಾಯ ಮಾಡಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ.


ಬೆಳಗ್ಗೆ 10.30ರ ಸುಮಾರಿಗೆ ಗೌರಿ ಅಜ್ಜಿಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಪ ಪೊಲೀಸ್ ಕಮಿಷನರ್ (ವಲಯ 3), ಪೂರ್ಣಿಮಾ ಗಾಯಕ್ವಾಡ್, “ಅಜ್ಜಿಯನ್ನು ಕೊಂದು ದರೋಡೆ ಮಾಡಿದ ಆರೋಪದ ಮೇಲೆ ಮೊಮ್ಮಗಳನ್ನು ಬಂಧಿಸಿದ್ದೇವೆ. ಮೊಮ್ಮಗಳು ಚಿನ್ನಾಭರಣಗಳನ್ನು ಮಾರಾಟ ಮಾಡಿ ಸಾಲ ಮರುಪಾವತಿಗೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದಿದ್ದಾರೆ .

ಇದನ್ನು ಓದಿ : Robin Uthappa: ಕಾರ್‌ನಲ್ಲೇ ನಿದ್ದೆ, ಆತ್ಮಹತ್ಯೆಯ ಯೋಚನೆ.. ಗೊತ್ತಾ ಕೊಡಗಿನ ಕುವರ ರಾಬಿನ್ ಉತ್ತಪ್ಪನ ಕಣ್ಣೀರ ಕಥೆ ?

ಇದನ್ನೂ ಓದಿ : Gobhi Pepper Fry : ಗೋಬಿಯ ಈ ಸ್ನ್ಯಾಕ್ಸ್‌ ಸವಿದಿದ್ದೀರಾ; ಗೋಬಿ–ಪೆಪ್ಪರ್‌ ಫ್ರೈ ಹೀಗೆ ಮಾಡಿ

Police: Warje woman killed grandmother to rob her of valuables to repay loans

Comments are closed.