Kannada Rajyotsava 2022 : ಕನ್ನಡ ರಾಜ್ಯೋತ್ಸವ “ನನ್ನ ನಾಡು ನನ್ನ ಹಾಡು” ಕೋಟಿ ಕಂಠ ಗೀತ ಗಾಯನ

ಬೆಂಗಳೂರು : ಕರ್ನಾಟಕದಲ್ಲಿ(Kannada Rajyotsava 2022) ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಕ್ಟೋಬರ್‌ 28 ರಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ “ಕೋಟಿ ಕಂಠ ಗೀತ ಗಾಯನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಮ್ಮ ನಾಡು ನುಡಿಯ ಬಗ್ಗೆ ಹೆಮ್ಮೆ ಮೂಡಿಸುವಂತಹ ಹಾಡುಗಳನ್ನು ನಮ್ಮ ಹೆಮ್ಮೆಯ ಕವಿಗಳು ರಚಿಸಿದ್ದಾರೆ. ಇದನ್ನು ಹಾಡುವ ಹಾಗೂ ಕೇಳುವ ಮೂಲಕ ಅಭಿಮಾನವನ್ನು ಹೆಚ್ಚಿಸುವ ಸುಲುವಾಗಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಒಂದು ಅದ್ಬುತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮವು “ನನ್ನ ನಾಡು ನನ್ನ ಹಾಡು” ಎನ್ನುವಂತಹ ಶೀರ್ಷಿಕೆಯನ್ನು ಇಟ್ಟುಕೊಂಡು ಮಾಡಲಾಗುತ್ತಿದೆ.

“ಕೋಟಿ ಕಂಠ ಗೀತಗಾಯನ” ಕಾರ್ಯಕ್ರಮವನ್ನು ಸರಕಾರದ ವತಿಯಿಂದ ಆಯೋಜಿಸಲಾಗಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಯನ್ನು ಸಾರುವ ಶ್ರೇಷ್ಠ ಆರು ಹಾಡುಗಳನ್ನು ಹಾಡುವ ಮೂಲಕ ಈ ಬಾರಿಯ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕನ್ನಡ ನಾಡು ನುಡಿಯನ್ನು ಸಾರುವ ಶ್ರೇಷ್ಠ ಆರು ಹಾಡುಗಳು ಈ ಕೆಳಗಿನಂತಿವೆ.

  • ನಾಡಗೀತೆಯಾದ “ಜಯ ಭಾರತ ಜನನೀಯ ತನುಜಾತೆ”
  • “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”
  • “ಬಾರಿಸು ಕನ್ನಡ ಡಿಂಡಿಮವ”
  • “ಹಚ್ಚೇವು ಕನ್ನಡದ ದೀಪ”
  • “ವಿಶ್ವವಿನೂತನ ವಿದ್ಯಾಚೇತನ”
  • “ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು”

ನನ್ನ ನಾಡು ನನ್ನ ಹಾಡು ಎನ್ನುವ ಶೀರ್ಷಿಕೆಯನ್ನು ಇಟ್ಟುಕೊಂಡು ಕೋಟಿ ಕಂಠ ಗಾಯನವನ್ನು ರಾಜ್ಯೋತ್ಸವದ ಎದುರುಗೊಳ್ಳುವ ಮೊದಲು ಅಕ್ಟೋಬರ್‌ 28ರಂದು ಒಂದು ಕೋಟಿ ಜನ ಕನ್ನಡದ ಆರು ಹಾಡುಗಳನ್ನು ಹೇಳಬೇಕು ಎನ್ನುವ ಪೂರ್ವ ಸಿದ್ಧತೆಗೆ ಕರೆಯನ್ನು ಕೊಡಲಾಗಿದೆ. ಇಡೀ ರಾಜ್ಯದ ಜನತೆಯಲ್ಲಿ ಕನ್ನಡದ ಮೇಲಿರುವ ಅಭಿಮಾನವನ್ನು ಮೆಚ್ಚುವಂತದಾಗಿದೆ. ಯಾಕೆಂದರೆ ನಿನ್ನೆ ರಾತ್ರಿಯ ಹೊತ್ತಿಗೆ ಒಂದು ಕೋಟಿ ಹತ್ತು ಜನ ಕ್ಯೂರ್‌ ಕೋಡ್‌ನಲ್ಲಿ ರಿಜಿಸ್ಟ್ರೆರ್‌ ಆಗುವ ಮೂಲಕ ಬಹಳ ದೊಡ್ಡ ಪ್ರಮಾಣದಲ್ಲಿ ಈ ಕಾರ್ಯಕ್ರಮಕ್ಕೆ ಭಾಗವಹಿಸುವಂತಹ ಪೂರಕ ಸ್ಪಂದನೆ ಸರಕಾರಕ್ಕೆ ಲಭಿಸಿದೆ. ಕನ್ನಡದ ಆರು ಹಾಡುಗಳನ್ನು ಏಕಕಾಲದಲ್ಲಿ ಹೇಳಬೇಕು. ದೇಶದಲ್ಲೇ ಮೊದಲ ಬಾರಿಗೆ ಏಕಕಾಲದಲ್ಲಿ ಕನ್ನಡದ ಆರು ಹಾಡುಗಳನ್ನು ಹಾಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಲಿದೆ.

ಈ ಕಾರ್ಯಕ್ರಮದ ತಾತ್ಪರ್ಯವೆನೆಂದರೆ ಕನ್ನಡದ ಭಾಷೆ, ಸಂಸ್ಕೃತಿಗಳನ್ನು ಒಟ್ಟುಗೂಡಿಸುವಂತಾಗಿದೆ. 26 ರಾಜ್ಯಗಳಿಂದ ಇದಕ್ಕೆ ನೊಂದಾವಣಿ ಪ್ರಕ್ರಿಯೆಯಲ್ಲಿ ನೊಂದಾವಣಿಯನ್ನು ಮಾಡಿದ್ದಾರೆ. ಹತ್ತು ಸಾವಿರ ಸ್ಥಳಗಳಲ್ಲಿ ಏಕಕಾಲದಲ್ಲಿ ಒಂದು ಕೋಟಿ ಜನ ಕನ್ನಡದ ಹಾಡನ್ನು ಹೇಳುವಂತಹ ಒಂದು ವಿನೂತನವಾದ ಕಾರ್ಯಕ್ರಮ ರಾಜ್ಯೋತ್ಸವದ ಸಂಧರ್ಭದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮವನ್ನು ಅಧಿಕೃತವಾಗಿ ಇಲಾಖೆಯವರು ಘೋಷಣೆ ಮಾಡಿದ ನಂತರ, ಕ್ಯೂರ್ ಕೋಡ್‌ನ್ನು ಸಾರ್ವಜನಿಕವಾಗಿ ಪ್ರಕಟಣೆ ಮಾಡಲಾಯಿತು. ಈ ಕ್ಯೂರ್‌ ಕೋಡ್‌ನಲ್ಲಿ ರಿಜಿಸ್ಟರ್‌ ಮಾಡುವ ಮುಖಾಂತರ ವ್ಯಕ್ತಿ ಅಥವಾ ಸಂಸ್ಥೆಯವರು ಇದರಲ್ಲಿ ಭಾಗವಹಿಸಬೇಕೆಂದು ವಿನಂತಿ ಮಾಡಲಾಯಿತು.

ಈಗಾಗಲೇ ಸುಮಾರು ಹದಿನೆಂಟು ಸಾವಿರ ಸಂಘ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸೇರುವ ಸೂಚನೆಯನ್ನು ನೀಡಿರುತ್ತಾರೆ. ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಸ್ವಸಹಾಯ ಸಂಘಗಳು ಸೇರಿದಂತೆ ಹಲವಾರು ಸಂಸ್ಥೆಗಳು ನೊಂದಾವಣಿಯನ್ನು ಮಾಡಿಕೊಂಡಿರುತ್ತಾರೆ. ಎಲ್ಲರ ಪ್ರಯತ್ನದ ಮೂಲಕ ಕನ್ನಡದ ಹಾಗೂ ಕನ್ನಡಿಗರ ಮನಸ್ಸನ್ನು ಜೋಡಿಸುವ ಉದ್ದೇಶವನ್ನು ಕಾರ್ಯಕ್ರಮದ ಹಿನ್ನಲೆ ಆಗಿರುತ್ತದೆ. ಕಳೆದ ವರ್ಷ “ಮಾತಾಡ್‌ ಮಾತಡ್‌ ಕನ್ನಡ” ಎನ್ನುವಂತಹ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅದರ ಮುಂದುವರೆದ ಭಾಗ “ಕೋಟಿ ಕಂಠ ಗೀತಗಾಯನ” ಕಾರ್ಯಕ್ರಮವಾಗಿದೆ.

ಇದನ್ನೂ ಓದಿ : head bush controversy: ಹೆಡ್​ಬುಷ್​ ಸಿನಿಮಾಗೆ ರಾಜಕೀಯ ಟ್ವಿಸ್ಟ್​ : ವೀರಗಾಸೆ ಬಗ್ಗೆ ಮಾತನಾಡಲು ಹೋಗಿ ಪೇಚಿಗೆ ಸಿಲುಕಿದ ಸಚಿವ ಸುನೀಲ್​ ಕುಮಾರ್​

ಇದನ್ನೂ ಓದಿ : Arvind Kejriwal’s Hindutva plea:‘ಕರ್ನಾಟಕಕ್ಕೆ ಮತ್ತೊಂದು ಬ್ರಾಹ್ಮಣ್ಯ ಪಕ್ಷದ ಅಗತ್ಯವಿಲ್ಲ’ : ಅರವಿಂದ ಕೇಜ್ರಿವಾಲ್​ ಹಿಂದುತ್ವ ಮನವಿಗೆ ಚೇತನ್​ ಅಂಹಿಸಾ ಪ್ರತಿಕ್ರಿಯೆ

ಈ ಕಾರ್ಯಕ್ರಮವು ಅಕ್ಟೋಬರ್‌ 28ರಂದು ಬೆಳಿಗ್ಗೆ 11ಗಂಟೆ ಸಮಯಕ್ಕೆ ಏಕಕಾಲದಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ಹೆಚ್ಚಾಗಿ ರಿಕ್ಷಾ ಸ್ಟಾಂಡ್‌, ಆಸ್ಪತ್ರೆಗಳಲ್ಲಿ, ಕಾಲೇಜುಗಳು ಸೇರಿದಂತೆ ಗರಿಷ್ಟ ನೂರು ಜನ ಸೇರಿರುತ್ತಾರೆ ಅಲ್ಲಿ ನಡೆಸಲಾಗುತ್ತದೆ. ಇನ್ನೂ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿಗಳೊಂದಿಗೆ ಐವತ್ತು ಸಾವಿರ ಜನರು ಭಾಗವಹಿಸುತ್ತಿದ್ದಾರೆ. ಹಾಗೆ ಚಿತ್ರದುರ್ಗ ಕೋಟೆ, ಮೈಸೂರಿನ ಅರಮನೆ, ಬೀದರ್‌ನ ಗುರುದ್ವಾರ, ಬಾದಮಿ ಗುಹೆ, ಸಮುದ್ರದ ಕಿನಾರೆ, ವಿಮಾನದಲ್ಲಿ ಸೇರಿದಂತೆ ನೆಲ, ಜಲ, ವಾಯು ಹಾಗೂ ಆಕಾಶದಲ್ಲಿ ಎಲ್ಲ ಕಡೆ ನಡೆಯುತ್ತದೆ. ಇದರ ಮೂಲಕ ನಾಡಿನಾದ್ಯಂತ ಜನರಲ್ಲಿ ಕನ್ನಡ ಭಾಷೆ ಹಾಗೂ ನೆಲದ ಮೇಲೆ ಅಭಿಮಾನವನ್ನು ಮೂಡಿಸುವ ಉದ್ದೇಶವಾಗಿರುತ್ತದೆ. ಆದರಿಂದ ನಾವು ಕನ್ನಡವನ್ನು ಹೆಚ್ಚು ಹೆಚ್ಚಾಗಿ ಮಾತನಾಡಬೇಕು. ಹಾಗೆ ಕನ್ನಡವನ್ನು ಮನೆಯಲ್ಲಿ, ಕಛೇರಿಗಳಲ್ಲಿ ಹೆಚ್ಚಾಗಿ ಬಳಸಬೇಕಾಗಿದೆ.

Kannada Rajyotsava 2022 “Nanna Nadu Nanna Song” Koti Kantha Gita singing

Comments are closed.