ಗುಂಪು ಘರ್ಷಣೆ ಕಲ್ಲು ತೂರಾಟ : 14 ಮಂದಿಗೆ ಗಾಯ, ನಿಷೇಧಾಜ್ಞೆ ಜಾರಿ

ನಳಂದಾ: (Prohibition enforcement) ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ಕನಿಷ್ಠ 14 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ. ಲಾಹೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಗನ್ ದಿವಾನ್ ಬಳಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪ್ರದೇಶದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದೆ.

ರಾಮನವಮಿ ಆಚರಣೆಯ ನಂತರ ಸಸಾರಾಮ್‌ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಕೂಡ ಸಂಭವಿಸಿದೆ. ವರದಿಗಳ ಪ್ರಕಾರ ಕಲ್ಲು ತೂರಾಟ, ಗುಂಡಿನ ದಾಳಿ ಕೂಡ ನಡೆದಿದೆ. ಈ ವೇಳೆ 14 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 4 ಮಂದಿಗೆ ಬುಲೆಟ್ ಗಾಯಗಳಾಗಿದ್ದು, ಓರ್ವ ವ್ಯಕ್ತಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಮೂವರನ್ನು ಪಾಟ್ನಾ ವೈಧ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು,

“14 ಜನರನ್ನು ಇಲ್ಲಿಗೆ ಕರೆತರಲಾಗಿದೆ. ಅವರಲ್ಲಿ 4 ಮಂದಿಗೆ ಬುಲೆಟ್ ಗಾಯಗಳಾಗಿದ್ದು, 3 ಮಂದಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ವ್ಯಕ್ತಿಯನ್ನು ಐಸಿಯುಗೆ ದಾಖಲಿಸಲಾಗಿದೆ. ಎಲ್ಲರೂ ಸ್ಥಿರವಾಗಿದ್ದಾರೆ ಎಂದು ನಳಂದದ ಸದರ್ ಆಸ್ಪತ್ರೆಯ ಡಾ ವಿಶ್ವಜೀತ್ ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ. ಸೆಕ್ಷನ್‌ 144 ಜಾರಿ ಮಾಡಲಾಗಿದೆ.

“ನಾವು ಘಟನೆಯ ವಿವರಗಳನ್ನು ಸಿಸಿಟಿವಿ ಫೂಟೇಜ್, ಡ್ರೋನ್ ಕ್ಯಾಮೆರಾ ಮತ್ತು ವೀಡಿಯೋಗ್ರಫಿ ಮೂಲಕ ಪಡೆಯುತ್ತಿದ್ದೇವೆ. ಸಾಕ್ಷ್ಯದ ಆಧಾರದ ಮೇಲೆ, ದುಷ್ಕರ್ಮಿಗಳನ್ನು ಗುರುತಿಸಲಾಗುವುದು. ಅವರನ್ನು ಬಿಡುವುದಿಲ್ಲ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಳಂದ ಡಿಎಂ ಶಶಾಂಕ್ ಶುಭಂಕರ್ ಹೇಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಸೆಕ್ಷನ್ 144 ಸಿಆರ್‌ಪಿಸಿಯನ್ನು ವಿಧಿಸಲಾಗಿದೆ ಎಂದು ನಳಂದಾ ಡಿಎಂ ತಿಳಿಸಿದ್ದಾರೆ. ಎಎನ್‌ಐ ಜೊತೆ ಮಾತನಾಡಿದ ನಳಂದ ಎಸ್‌ಪಿ ಅಶೋಕ್ ಮಿಶ್ರಾ, ನಾವು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದೇವೆ. ಈಗ ಪರಿಸ್ಥಿತಿ ಶಾಂತವಾಗಿದೆ. ಸೆಕ್ಷನ್ 144 CrPC ಅನ್ನು ವಿಧಿಸಲಾಗಿದೆ ಮತ್ತು ಇಂಟರ್ನೆಟ್ ಅನ್ನು ಅಮಾನತುಗೊಳಿಸುವಂತೆ ವಿನಂತಿಸಲಾಗಿದೆ.

ಪಶ್ಚಿಮ ಬಂಗಾಳದ ಹೌರಾದಲ್ಲಿ ಘರ್ಷಣೆ
ಏತನ್ಮಧ್ಯೆ, ಹಿಂಸಾಚಾರ ಪೀಡಿತ ಹೌರಾದಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಹೌರಾ ಟೌನ್, ಅಸನ್ಸೋಲ್-ದುರ್ಗಾಪುರ ಪೊಲೀಸ್ ಕಮಿಷನರೇಟ್ ಮತ್ತು ಬ್ಯಾರಕ್‌ಪೋರ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಶನಿವಾರ ಮಧ್ಯರಾತ್ರಿ 2 ಗಂಟೆಯವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಹೌರಾ ಹಿಂಸಾಚಾರದ ಬಗ್ಗೆ ಎನ್‌ಐಎ ತನಿಖೆಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Fire broke out in factory: ದೆಹಲಿಯ ಕಾರ್ಖಾನೆಯೊಂದರಲ್ಲಿ ಭಾರೀ ಬೆಂಕಿ ಅವಘಡ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

“ಈ ಸಂಪೂರ್ಣ ಹಿಂಸಾಚಾರವನ್ನು ಮಮತಾ ಬ್ಯಾನರ್ಜಿಯವರು ಆಯೋಜಿಸಿದ್ದಾರೆ. ಉಪಚುನಾವಣೆಯಲ್ಲಿ ಮುಸ್ಲಿಂ ಮತಬ್ಯಾಂಕ್ ಕಡಿಮೆಯಾದ ಕಾರಣ ತನ್ನ ಮುಸ್ಲಿಂ ಮತಗಳನ್ನು ಉಳಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ. ಹೌರಾದಲ್ಲಿ ರಾಮನವಮಿ ಹಿಂಸಾಚಾರದ ಬಗ್ಗೆ ಎನ್‌ಐಎ ತನಿಖೆಗೆ ಒತ್ತಾಯಿಸಿ ಎಚ್‌ಎಂ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ. ಅಮಿತ್ ಶಾ ಅವರು ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಈ ಸಂಪೂರ್ಣ ಹಿಂಸಾಚಾರದ ಕಾರಣಗಳ ಮೇಲೆ ನಿಗಾ ಇಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಜುಂದಾರ್ ಹೇಳಿದ್ದಾರೆ.

Prohibition enforcement: Group clash Stone pelting: 14 injured, Prohibition enforced

Comments are closed.