April Pool Day 2023: ಮೂರ್ಖರ ದಿನದ ಇತಿಹಾಸ ಹಾಗೂ ಆಚರಣೆಯ ಬಗ್ಗೆ ನಿಮಗೆಷ್ಟು ಗೊತ್ತು ?

(April Pool Day 2023) ಮಾರ್ಚ್‌ ತಿಂಗಳು ಕಳೆದು ಇದೀಗ ನಾವು ಏಪ್ರಿಲ್ ತಿಂಗಳನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ. ಏಪ್ರಿಲ್‌ ಮೊದಲ ದಿನವೆಂದರೆ ನೆನಪಾಗುವುದೇ ಸ್ನೇಹಿತರನ್ನು ಮೂರ್ಖರನ್ನಾಗಿಸುವುದು. ಏಪ್ರಿಲ್ 1 ಅನ್ನು ವಿಶ್ವದಾದ್ಯಂತ ವಿಶ್ವ ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ವಿವಿಧ ಸಂಸ್ಕೃತಿಗಳಿಂದ ಹಲವಾರು ಶತಮಾನಗಳಿಂದ ಆಚರಿಸಲಾಗುತ್ತದೆ. ಏಪ್ರಿಲ್‌ ಮೊದಲ ದಿನ ಬಂತೆಂದರೆ ಸಾಕು ಸ್ನೇಹಿತರು, ಕುಟುಂಬಸ್ಥರೊಂದಿಗೆ ಕುಚೇಷ್ಟೆಗಳನ್ನು ಮಾಡುವುದು, ಮೂರ್ಖರನ್ನಾಗಿ ಮಾಡುವುದು ಹೀಗೆ ಅದರಲ್ಲೇ ಖುಷಿ ಕಾಣುತ್ತೇವೆ. ಆನಂದಿಸುತ್ತೇವೆ.

History.com ಪ್ರಕಾರ, ಕೆಲವು ಇತಿಹಾಸಕಾರರು ಏಪ್ರಿಲ್ ಮೂರ್ಖರ ದಿನವನ್ನು 1582 ರಲ್ಲಿ ಪ್ರಾರಂಭಿಸಲಾಗಿದೆ ಎಂದು ಊಹಿಸುತ್ತಾರೆ. ಫ್ರಾನ್ಸ್ ಜೂಲಿಯನ್ ಕ್ಯಾಲೆಂಡರ್‌ನಿಂದ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಬದಲಾಯಿಸಿ ನೋಡಿದಾಗ, 1563 ರಲ್ಲಿ ಕೌನ್ಸಿಲ್ ಆಫ್ ಟ್ರೆಂಟ್ ಮೂರ್ಖರ ದಿನಕ್ಕೆ ಕರೆ ನೀಡಿತು ಎಂದು ಹೇಳಲಾಗುತ್ತದೆ. ಈ ದಿನ ಸಾಮಾನ್ಯವಾಗಿ ಜನರು ಪರಸ್ಪರ ಕಾಲುಗಳನ್ನು ಎಳೆದುಕೊಂಡು, ತಮಾಷೆ ಮಾಡಿಕೊಂಡು ಎಂಜಾಯ್ ಮಾಡುತ್ತಾರೆ. ಭಾರತ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ದೇಶಗಳಲ್ಲಿ ಏಪ್ರಿಲ್ ಫೂಲ್ ದಿನವನ್ನು ಆಚರಣೆ ಮಾಡಲಾಗುತ್ತದೆ.

ಏಪ್ರಿಲ್ ಮೂರ್ಖರ ದಿನದ ಇತಿಹಾಸ :
ಏಪ್ರಿಲ್ ಫೂಲ್ ದಿನವನ್ನು ಮೊದಲು ಯಾವಾಗ ಆಚರಣೆ ಮಾಡಲಾಯಿತು ಎನ್ನುವುದು ಇನ್ನೂ ನಿಗೂಢವಾಗಿ ಉಳಿದಿದೆ. ಇದನ್ನು ಯಾರು ನಿಖರವಾಗಿ ಪ್ರಾರಂಭಿಸಿದರು ಅಥವಾ ಕಂಡುಹಿಡಿದರು ಎಂದು ಯಾರಿಗೂ ತಿಳಿದಿಲ್ಲ. ಆದರೆ ಕೆಲವು ಮಾಹಿತಿಗಳ ಪ್ರಕಾರ, ಫ್ರಾನ್ಸ್‌ನಲ್ಲಿ ಮೊದಲು ಜೂಲಿಯನ್ ಕ್ಯಾಲೆಂಡರ್ ಅನ್ನು ಬಳಕೆ ಮಾಡಲಾಗುತ್ತಿತ್ತು. ಈ ಜೂಲಿಯನ್ ಕ್ಯಾಲೆಂಡರ್‌ನಲ್ಲಿ ಹೊಸ ವರ್ಷವನ್ನು ಏಪ್ರಿಲ್ 1 ರಂದು ಆಚರಿಸಲಾಗುತ್ತದೆ. ಹಲವು ದಶಕಗಳ ಹಿಂದೆ ಇಡೀ ಜಗತ್ತೆ ಏಪ್ರಿಲ್ 1 ರಂದು ಹೊಸ ವರ್ಷವನ್ನು ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಆಚರಿಸುತ್ತಿತ್ತು. ಆದರೆ ಫ್ರಾನ್ಸ್ ದೇಶವೂ ಪೋಪ್ XIIIನೇ ಗ್ರೆಗೊರಿ ಸೂಚನೆ ಪ್ರಕಾರ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆ ಮಾಡಲು ಆರಂಭಿಸಿತು. ಈ ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಹೊಸ ವರ್ಷವನ್ನು ಜನವರಿ 1 ರಂದು ಆಚರಿಸಲಾಗುತ್ತಿದೆ. ಹೀಗಾಗಿ ಜನವರಿ 1 ಬದಲು ಎಪ್ರಿಲ್ 1 ರಂದು ನಾವು ಹೊಸ ವರ್ಷ ಆಚರಿಸುತ್ತಿದ್ದವು ಎಂಬುವುದನ್ನು ಮನಗಂಡ ಫ್ರಾನ್ಸ್ ದೇಶ, ಇಷ್ಟು ದಿನ ನಾವು ಮೂರ್ಖರಾದೆವು ಎಂದು ಹೇಳಿಕೊಂಡಿತು. ಏಪ್ರಿಲ್ 1 ನ್ನು ಹೊಸ ವರ್ಷ ಎಂದು ನಂಬಿದವರು ಹಾಗೂ ಈಗಲೂ ಏಪ್ರಿಲ್ 1 ರಂದು ಹೊಸ ವರ್ಷ ಆಚರಣೆ ಮಾಡುತ್ತಿರುವ ಹಿನ್ನಲೆ ಈ ದಿನವನ್ನು ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇದನ್ನೂ ಓದಿ : April Fools Day 2023 : ಮೂರ್ಖರ ದಿನ ಏಪ್ರಿಲ್‌ ಒಂದಕ್ಕೆ ಏಕೆ? ಮೂರ್ಖರನ್ನಾಗಿಸುವ ಹಿಂದಿನ ಕಥೆ ನಿಮಗೆ ಗೊತ್ತಾ…

ಹಿಸ್ಟರಿ ಡಾಟ್ ಕಾಮ್ ಪ್ರಕಾರ, ಏಪ್ರಿಲ್ 1 ರಂದು ಹೊಸ ವರ್ಷವನ್ನು ಆಚರಿಸಲು ಮರೆತ ಆ ಜನರನ್ನು ಅಪಹಾಸ್ಯ ಮಾಡಲಾಯಿತು. ಏಪ್ರಿಲ್ ಫೂಲ್ ಮೊದಲು ಹುಟ್ಟಿದ್ದು ಫ್ರಾನ್ಸ್ ದೇಶದಲ್ಲಿ ಎಂಬುದಾಗಿ ಇತಿಹಾಸಕಾರರು ಹೇಳುತ್ತಾರೆ. ಬಳಿಕ ಇದು ಯುರೋಪ್ ದೇಶಗಳಲ್ಲೂ ಆಚರಿಸಲು ಆರಂಭಿಸಿದರು. ನಂತರ ಅಲ್ಲಿಂದ ಹಲವು ದೇಶಗಳಿಗೆ ವ್ಯಾಪಿಸಿದೆ. ಈ ದಿನವನ್ನು ಹಾಸ್ಯ ಮತ್ತು ನಗುವಿನೊಂದಿಗೆ ಆಚರಿಸಲಾಗುತ್ತದೆ ಮತ್ತು ಜನರು ಈ ದಿನವನ್ನು ಎದುರು ನೋಡುತ್ತಾರೆ ಏಕೆಂದರೆಇದು ಸಂತೋಷವನ್ನು ತರುತ್ತದೆ.

April Pool Day 2023: How much do you know about the history and celebration of Stupid Day

Comments are closed.