PSI Exams Scam : ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ : ಕಾನ್ಸ್ ಟೇಬಲ್ ಹರೀಶ್ ಬಂಧನ

ಬೆಂಗಳೂರು : (PSI Exams Scam)ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದೀಗ ಪೊಲೀಸರು ಮತ್ತೊಂದು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಸಿಐಡಿ ಡಿವೈಎಸ್‌ಪಿ ಶಿವಕುಮಾರ್‌ ಅವರು ನೀಡಿದ ದೂರಿನ ಆಧಾರದ ಮೇಲೆ ಕಲಾಸಿಪಾಳ್ಯ ಕಾನ್ಸ್ ಟೇಬಲ್ ಹರೀಶ್ (Constable Harish Arrest) ಬಂಧಿಸಲಾಗಿದೆ.

(PSI Exams Scam)ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ದಿನಕ್ಕೊಂದು ತಿರುವುದು ಪಡೆಯುತ್ತಿದೆ. ಇದೀಗ ಕಲಾಸಿಪಾಳ್ಯ ಕಾನ್ಸ್ ಟೇಬಲ್ ಹರೀಶ್, ಎಫ್ ಡಿಎ ಹರ್ಷ ಹಾಗೂ ಖಾಸಗಿ ವ್ಯಕ್ತಿ ಮನೋಜ್ ಎಂಬವರ ವಿರುದ್ದ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಾಸಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದ ಹರೀಶ್, ಪಿಎಸ್ ಐ ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿದ್ದ. ಪರೀಕ್ಷಾ ಅಕ್ರಮ ನಡೆಸುವ ಸಲುವಾಗಿ ಹರೀಶ್‌ 50 ಲಕ್ಷ ರೂಪಾಯಿಗೆ ಡೀಲ್‌ ಮಾಡಿಕೊಂಡಿದ್ದ. ಅಲ್ಲದೇ ಮನೋಜ್‌ಗೆ 30 ಲಕ್ಷ ಹಣ ರೂಪಾಯಿ ಹಣವನ್ನು ನೀಡಿದ್ದ. ಎಕ್ಸಾಂ ವೇಳೆಯಲ್ಲಿ ಹರೀಶ್‌ ತನ್ನ ಓಎಂಆರ್‌ ಶೀಟ್‌ ತಿದ್ದುವ ಸಲುವಾಗಿ ಡೀಲ್‌ ಮಾಡಿಕೊಂಡಿದ್ದ. ಅಲ್ಲದೇ ಎಕ್ಸಾಂನಲ್ಲಿ ತನ್ನ ಉತ್ತರ ಪತ್ರಿಕೆಯನ್ನು ಖಾಲಿ ಬಿಟ್ಟು ಬಂದಿದ್ದ. ನಂತರ ಎಫ್‌ಡಿಎ ಹರ್ಷ ಸಹಾಯದಿಂದ ಓಎಂಆರ್‌ ಶೀಟ್‌ ತಿದ್ದಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಹರೀಶ್‌ನನ್ನು ವಿಚಾರಣೆಗೆ ಒಳಪಡಿಸಿತ್ತು. ಈ ಚೇಳೆಯಲ್ಲಿ ಓಎಂಆರ್‌ ಶೀಟ್‌ನಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಡಿವೈಎಸ್ಪಿ ಶಿವಕುಮಾರ್ ದೂರಿನ ಮೇರೆಗೆ ಆರೋಪಿ ಹರೀಶ್‌ ವಿರುದ್ದ ಎಫ್‌ಐಆರ್‌ ದಾಖಲಿಸಿಕೊಂಡು ಬಂಧಿಸಲಾಗಿದೆ.

ಇದನ್ನೂ ಓದಿ : Norovirus : ಕೇರಳಕ್ಕೆ ಎಂಟ್ರಿಕೊಟ್ಟ ನೊರಾ ವೈರಸ್​ : ಪ್ರಾಥಮಿಕ ಶಾಲೆಯ ಇಬ್ಬರು ಮಕ್ಕಳಿಗೆ ಸೋಂಕು

ಇದನ್ನೂ ಓದಿ : ಕಮರಿಗೆ ಉರುಳಿದ ಬಸ್ : 22 ಸಾವು, 6 ಮಂದಿಗೆ ಗಾಯ

PSI Exams Scam Constable Harish Arrest

Comments are closed.