kerala girl commits suicide : ಅತಿಯಾದ ಮೊಬೈಲ್​ ಚಟದಿಂದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಕೇರಳ : kerala girl commits suicide : ಈಗಿನ ಕಾಲದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್​ ಬೇಕೇ ಬೇಕು. ಮೊಬೈಲ್​ ಚಟ ಒಮ್ಮೆ ಶುರುವಾಯ್ತು ಅಂದರೆ ಮುಗೀತು. ಅದರಿಂದ ಜೀವ ಕಳೆದುಕೊಂಡವರು ಕೂಡ ಇದ್ದಾರೆ. ಇದೇ ರೀತಿ ಮೊಬೈಲ್​ನಲ್ಲಿ ಕೊರಿಯನ್​ ವಿಡಿಯೋಗಳನ್ನು ನೋಡುವ ಅಭ್ಯಾಸವನ್ನು ಹೊಂದಿದ್ದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

16 ವರ್ಷದ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್​ ನೋಟ್​ ಪತ್ತೆಯಾಗಿದೆ. ಈ ಡೆತ್​ ನೋಟ್​ನಲ್ಲಿ ಬಾಲಕಿಯು ನನಗೆ ಯಾರೂ ಗೆಳೆಯರಿಲ್ಲ. ನಾನು ಪರೀಕ್ಷೆಯಲ್ಲಿ ಕೂಡ ಕಡಿಮೆ ಅಂಕ ಗಳಿಸುತ್ತಿದ್ದೇನೆ. ಅಲ್ಲದೇ ಕೊರಿಯನ್​ ಮ್ಯೂಸಿಕ್​ ವಿಡಿಯೋಗಳನ್ನು ಅತಿಯಾಗಿ ನೋಡುತ್ತೇನೆ.ನನಗೆ ಈ ಅಭ್ಯಾಸವನ್ನು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾಳೆ.


ಈ ಸಂಬಂಧ ಕಲ್ಲಂಬಳಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮಾತನಾಡಿದ ಕಲ್ಲಂಬಳಂ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿಯೊಬ್ಬರು, 16 ವರ್ಷದ ಬಾಲಕಿಯು ಅತಿಯಾಗಿ ಕೋರಿಯನ್​ ವಿಡಿಯೋಗಳನ್ನು ನೋಡುತ್ತಿದ್ದಳು.ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ತಾಯಿಯ ಮೊಬೈಲ್​​ನ್ನು ಅತಿಯಾಗಿ ಬಳಸುತ್ತಿದ್ದಳು. ಇದರಿಂದಾಗಿ ಆಕೆ ಸರಿಯಾಗಿ ವ್ಯಾಸಂಗ ಮಾಡದ ಹಿನ್ನೆಲೆಯಲ್ಲಿ ಓದಿನಲ್ಲಿಯೂ ಹಿಂದೆ ಉಳಿದಿದ್ದಳು. ಇದೇ ಕಾರಣಕ್ಕೆ ಮಾನಸಿಕವಾಗಿ ನೊಂದು ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಕಮರಿಗೆ ಉರುಳಿದ ಬಸ್ : 22 ಸಾವು, 6 ಮಂದಿಗೆ ಗಾಯ

ಉತ್ತರಾಖಂಡ್ : ಯಮುನೋತ್ರಿಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಬಸ್ ಉತ್ತರಕಾಶಿ ಜಿಲ್ಲೆಯ ದಮ್ತಾ ಬಳಿ ಕಮರಿಗೆ‌ ಉರುಳಿದ ( bus falls into gorge) ಪರಿಣಾಮ ಕನಿಷ್ಠ 22 ಜನರು (22 dead) ಸಾವನ್ನಪ್ಪಿದ್ದು, 6 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಉತ್ತರಾಖಂಡ್ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಿಂದ ಯಮುನೋತ್ರಿಗೆ 28 ​​ಯಾತ್ರಿಕರ ಚಾರ್ ಧಾಮ್ ಯಾತ್ರೆಯನ್ನು ಹೊತ್ತೊಯ್ಯುತ್ತಿತ್ತು. ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ರುಹೇಲಾ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಗೊಂಡ ಆರು ಮಂದಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದ ಸ್ಥಳಕ್ಕೆ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಭೇಟಿ ನೀಡಿದ್ದು, ರಕ್ಷಣಾ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ. ಯಮುನೋತ್ರಿ ಜೊತೆಗೆ ಬದರಿನಾಥ, ಕೇದಾರನಾಥ, ಗಂಗೋತ್ರಿಯ ಪುಣ್ಯಕ್ಷೇತ್ರಗಳನ್ನು ಸಾಮಾನ್ಯವಾಗಿ ಚಾರ್ ಧಾಮ್ ಎಂದು ಕರೆಯಲಾಗುತ್ತದೆ.

ಉತ್ತರಾಖಂಡ ಮುಖ್ಯಮಂತ್ರಿ ಕಚೇರಿಯ ಪ್ರಕಾರ, ಸಿಎಂ ಪುಷ್ಕರ್ ಸಿಂಗ್ ಧಾಮಿ ಉತ್ತರಕಾಶಿ ಜಿಲ್ಲೆಯಲ್ಲಿ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಡೆಹ್ರಾಡೂನ್‌ನ ವಿಪತ್ತು ನಿಯಂತ್ರಣ ಕೊಠಡಿಯನ್ನು ತಲುಪಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಜತೆಗೆ ಪರಿಹಾರ ಹಾಗೂ ರಕ್ಷಣಾ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಯಮುನೋತ್ರಿಗೆ ತೆರಳುತ್ತಿದ್ದ 28 ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಉತ್ತರಕಾಶಿಯಲ್ಲಿ ಕಮರಿಗೆ ಬಿದ್ದ ಪರಿಣಾಮ 22 ಮಂದಿ ಸಾವನ್ನಪ್ಪಿದ್ದು, ಇದೀಗ ಮೃತರ ಕುಟುಂಬ ಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಪ್ರಧಾನಮಂತ್ರಿಯವರ ಕಚೇರಿ ಭಾನುವಾರ ಘೋಷಿಸಿದೆ.

ಇದನ್ನು ಓದಿ : Cylinder Blast 2 Death : ಸಿಲಿಂಡರ್‌ ಸ್ಪೋಟ : ಬೆಂಕಿ ನಂದಿಸಲು ಬಂದ ಯುವಕರಿಬ್ಬರ ದುರ್ಮರಣ

ಇದನ್ನೂ ಓದಿ : PSI Exams Scam : ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ : ಕಾನ್ಸ್ ಟೇಬಲ್ ಹರೀಶ್ ಬಂಧನ

kerala girl commits suicide after getting addicted to korean videos and backdrop in school

Comments are closed.