Race Bike accident: ರಸ್ತೆ ದಾಟುತ್ತಿದ್ದ ಮಹಿಳೆಗೆ ರೇಸಿಂಗ್‌ ಬೈಕ್‌ ಢಿಕ್ಕಿ: ಮಹಿಳೆ ಸಾವು, ಬೈಕ್‌ ಸವಾರ ಗಂಭೀರ ಗಾಯ

ತಿರುವನಂತಪುರಂ: (Race Bike accident) ಅಕ್ರಮ ಬೈಕ್ ರೇಸಿಂಗ್‌ನಲ್ಲಿ ತೊಡಗಿದ್ದ ದ್ವಿಚಕ್ರ ವಾಹನವೊಂದು ರಸ್ತೆ ದಾಟುತ್ತಿದ್ದ ಮಹಿಳೆಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋವಲಂ ಬೈಪಾಸ್‌ನಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್‌ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯೋರ್ವರು ಕೋವಲಂ ಬೈಪಾಸ್‌ ನಲ್ಲಿ ರಸ್ತೆ ದಾಟುತ್ತಿದ್ದಾಗ ಅಕ್ರಮ ಬೈಕ್‌ ರೇಸಿಂಗ್‌ ನಲ್ಲಿದ್ದ ಬೈಕ್‌ ಒಂದು ಮಹಿಳೆಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಬೈಕ್‌ ಸವಾರ ಕೂಡ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ತಿರುವನಂತಪುರಂ ನ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ನಡೆದ ಪ್ರದೇಶದಲ್ಲಿನ ಭೀಕರ ಶಬ್ದಕ್ಕೆ ಸ್ಥಳೀಯರು ರಸ್ತೆ ಬದಿಗೆ ಬಂದು ಪರಿಶೀಲಿಸಿದ್ದು, ಅಲ್ಲಿ ಮಹಿಳೆ ಶವವಾಗಿ ಬಿದ್ದಿದ್ದರು, ಇನ್ನೂ ಬೈಕ್‌ ಸವಾರ ಸುಮಾರು 100 ಮೀಟರ್ ದೂರದಲ್ಲಿ ರಸ್ತೆಬದಿಯ ಹಳ್ಳದಲ್ಲಿ ಪತ್ತೆಯಾಗಿದ್ದಾನೆ ಎಂದು ಸ್ಥಳೀಯ ನಿವಾಸಿಗಳು ವರದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸದ್ಯ ಅಪಘಾತದ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ಮತ್ತು 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Car accident-constable death: ಅಪರಿಚಿತ ವಾಹನಕ್ಕೆ ಕಾರು ಢಿಕ್ಕಿ: ಪೊಲೀಸ್ ಪೇದೆ ಸಾವು, 3 ಮಂದಿಗೆ ಗಾಯ

ಇದನ್ನೂ ಓದಿ : Dead body found in toilet: ಮನೆಯ ಶೌಚಾಲಯದಲ್ಲಿ ಶವವಾಗಿ ಪತ್ತೆಯಾದ ಬಾಲಕಿ: ಹೃದಯಾಘಾತದ ಶಂಕೆ

ಇದನ್ನೂ ಓದಿ : ಔಷಧಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಬೆಂಕಿ; ಸಂಚಾರ ಅಸ್ತವ್ಯಸ್ತ

ಮುಂಜಾನೆ ಸಮಯದಲ್ಲಿ ಈ ಪ್ರದೇಶದಲ್ಲಿ ಪೊಲೀಸ್ ಉಪಸ್ಥಿತಿ ಇಲ್ಲದೆ ಬೈಕ್ ರೇಸಿಂಗ್ ಆಗಾಗ್ಗೆ ನಡೆಯುತ್ತವೆ ಎಂದು ಇನ್ನೊಬ್ಬ ನಿವಾಸಿ ಹೇಳಿದ್ದು, ಮತ್ತೊಂದೆಡೆ, ಆ ಪ್ರದೇಶದಲ್ಲಿ ಆಗಾಗ್ಗೆ ಬೈಕ್ ರೇಸಿಂಗ್ ಘಟನೆಗಳು ನಡೆಯುತ್ತಿದ್ದು, ಈ ಕುರಿತು ಯಾವುದೇ ದೂರುಗಳು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Race Bike accident: Racing bike hits a woman crossing the road: Woman dies, biker seriously injured

Comments are closed.