ಪಿಎಮ್‌ ಕಿಸಾನ್‌ ಯೋಜನೆ : 2023ರ ಬಜೆಟ್‌ನಲ್ಲಿ ಸಿಗಲಿದೆ ಭರ್ಜರಿ ಗಿಫ್ಟ್

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Prime Minister Kisan Samman Nidhi) 13 ನೇ ಕಂತಿಗಾಗಿ ದೇಶದಾದ್ಯಂತ ಕೋಟಿಗಟ್ಟಲೆ ರೈತರು ಕೆಲವು ತಿಂಗಳುಗಳಿಂದ ಕಾಯುತ್ತಿದ್ದಾರೆ. ಕೋಟಿಗಟ್ಟಲೆ ರೈತರು ಕಾಯುತ್ತಿರುವ ಕಾರಣ, ಕೇಂದ್ರ ಸರಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಈ ಯೋಜನೆಯ ಭಾಗವಾಗಿ, ಎಲ್ಲಾ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ ರೂ 6,000 ಆದಾಯ ಬೆಂಬಲವನ್ನು ನೀಡಲಾಗುತ್ತದೆ. ಹಾಗೆಯೇ ಸಂಪೂರ್ಣ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ, ಮುಂಬರುವ ಬಜೆಟ್ 2023 ರಿಂದ ಫಲಾನುಭವಿ ರೈತರಿಗೆ ಸಿಹಿ ಸುದ್ದಿವೊಂದು ಕಾದಿದೆ. ಕೇಂದ್ರ ಸರಕಾರ ಈ ಬಾರಿಯ ಬಜೆಟ್ 2023 ರಲ್ಲಿ ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಬಹುದು. ವರದಿ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತು ಮೊತ್ತವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಈಗಾಗಲೇ ರೈತ ಕುಟುಂಬಗಳಿಗೆ ಮೂರು ಸಮಾನ ಕಂತಿನಲ್ಲಿ ರೂ.6,000 ನೀಡಲಾಗುತ್ತಿದ್ದು, ಈ ಕಂತಿನ ಮೊತ್ತವನ್ನು 8,000 ರೂ.ಗೆ ಹೆಚ್ಚಿಸುವ ಸಾಧ್ಯತೆ ಇದ್ದು, ರೈತರಿಗೆ ನೀಡುವ ಹಣವನ್ನು ತಲಾ 2,000 ರೂ.ಗಳಂತೆ 4 ಕಂತುಗಳಾಗಿ ವಿಂಗಡಿಸುವ ಸಾಧ್ಯತೆಯಿದೆ. ಹೀಗಾಗಿ ಪ್ರಸ್ತುತ ಪ್ರತಿ 4 ತಿಂಗಳಿಗೊಮ್ಮೆ ಕಂತಿನ ಮೊತ್ತವನ್ನು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ : Kisan Credit Card : ಕೇಂದ್ರ ಬಜೆಟ್‌ಗೂ ಮೊದಲು ಸರಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್

ಇದನ್ನೂ ಓದಿ : Pradhan Mantri Fasal Bima Yojana : ರೈತರಿಗೆ ಸಿಹಿ ಸುದ್ದಿ : ಬೆಳೆ ಹಾನಿಗೆ ಕೇಂದ್ರದಿಂದ ಸಿಗಲಿದೆ ಆರ್ಥಿಕ ನೆರವು

ಇದನ್ನೂ ಓದಿ : ಪಿಎಂ ಕಿಸಾನ್‌ ಯೋಜನೆಯ 4 ನಿಯಮಗಳಲ್ಲಿ ಬದಲಾವಣೆ : ಶೀಘ್ರದಲ್ಲೇ ಕೈ ಸೇರಲಿದೆ 13 ನೇ ಕಂತಿನ ಹಣ

13ನೇ ಕಂತಿನ ಬಿಡುಗಡೆ ಯಾವಾಗ?
ಪಿಎಂ ಕಿಸಾನ್ ಯೋಜನೆಯ 13 ನೇ ಕಂತು ಜನವರಿ ಅಂತ್ಯದಲ್ಲಿ ಬರುವ ಸಾಧ್ಯತೆಯಿದೆ. ಆದರೆ, ನಿಖರವಾದ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ. 13 ನೇ ಕಂತಿನ ದಿನಾಂಕವನ್ನು ಘೋಷಿಸಿದ ನಂತರ, ಪ್ರಧಾನಿ ಮೋದಿ ನೇರವಾಗಿ ರೈತರ ಖಾತೆಗೆ 13 ನೇ ಕಂತು (ಪಿಎಂ ಕಿಸಾನ್ 13 ನೇ ಕಂತು) ಬಿಡುಗಡೆ ಮಾಡುತ್ತಾರೆ. ಒಟ್ಟು 13 ಕೋಟಿ ರೈತ ಕುಟುಂಬಗಳು ಈ ಬಾರಿ ಹಣ ಪಡೆಯಬೇಕಿದೆ. ಆದರೆ, ಇದರಲ್ಲಿ ಇ-ಕೆವೈಸಿ ಮತ್ತು ಇತರ ಮಾನದಂಡಗಳ ನಿಯಮಗಳನ್ನು ಪೂರೈಸುವ ರೈತರು ಮಾತ್ರ ಈ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.

Prime Minister Kisan Samman Nidhi: PM Kisan Yojana: Huge gift to be received in 2023 budget

Comments are closed.