Aishwarya Upendra : ಉಪ್ಪಿ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ : ದೊಡ್ಮನೆ ಯುವರಾಜ್‌ಗೆ ಐಶ್ವರ್ಯಾ ನಾಯಕಿ

ಕನ್ನಡ ಸಿನಿರಂಗಕ್ಕೆ ಸೂಪರ್‌ ಸ್ಟಾರ್‌ ಮಕ್ಕಳು ಕಾಲಿಡುತ್ತಿದ್ದಾರೆ. ಮೊನ್ನೆ ತಾನೇ ಲವ್ಲಿ ಸ್ಟಾರ್‌ ಪ್ರೇಮ್‌ ಮಗಳು ನಟನೆಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ ರಿಯಲ್‌ ಸ್ಟಾರ್‌ ಉಪೇಂದ್ರ ಮಗಳು ಐಶ್ವರ್ಯ (Aishwarya Upendra) ಸಿನಿರಂಗಕ್ಕೆ ಕಾಲಿಡುವ ಬಗ್ಗೆ ವದಂತಿಗಳು ಹರಿದಾಡುತ್ತಿದೆ.

ಕೆಲವು ತಿಂಗಳಗಳ ಹಿಂದೆ ನಟಿ ಮಾಲಾಶ್ರೀ ಪುತ್ರಿ ಅನನ್ಯ ದರ್ಶನ ಅಭಿನಯದ ” ಕ್ರಾಂತಿ” ಸಿನಿಮಾದಲ್ಲಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಕಳೆದ ವಾರ ಡಾಲಿ ಪಿಕ್ಚರ್ಸ್‌ ನಿರ್ಮಾಣದ “ಟಗರು ಪಲ್ಯ” ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಅದರ ಬೆನ್ನೆಲ್ಲೇ ಮತ್ತೊಬ್ಬ ಸ್ಟಾರ್‌ ನಟ ಉಪೇಂದ್ರ ಮಗಳ ಬರುವಿಕೆಗಾಗಿ ಕೌಂಟ್‌ಡೌನ್‌ ಶುರುವಾಗಿದೆ. ಹೀಗೆ ಸ್ಯಾಂಡಲ್‌ವುಡ್‌ನ ನಟ – ನಟಿಯರ ಮಕ್ಕಳು ಸಿನಿಮಾರಂಗಕ್ಕೆ ಹೆಜ್ಜೆ ಇಡುತ್ತಿರುವುದು ಪ್ರೇಕ್ಷಕರಿಗೆ ಸಂತಸದ ವಿಷಯವಾಗಿದೆ.

ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ “ಹೊಂಬಾಳೆ ಫಿಲ್ಮ್ಸ್”‌ ಬ್ಯಾನರ್‌ನಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ಯುವರಾಜ್‌ಕುಮಾರ್‌ ಅವರನ್ನು ಲಾಂಚ್‌ ಮಾಡುತ್ತಿರುವ ವಿಷಯ ಎಲ್ಲರಿಗೂ ಗೊತ್ತೆ ಇದೆ. ಖ್ಯಾತ ನಿರ್ದೇಶಕ ಸಂತೋಷ್‌ ಆನಂದರಾಮ್‌ ಹೊಸ ಸಿನಿಮಾದಲ್ಲಿ ಯುವನಿಗೆ ನಾಯಕಿಯಾಗಿ ಐಶ್ವರ್ಯ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Krishna G Rao Health Update : ಕೆಜಿಎಫ್ ಹಿರಿಯ ನಟನ ಆರೋಗ್ಯ ಸ್ಥಿತಿ ಗಂಭೀರ : ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Khasagi Putagalu : ಪ್ರೇಕ್ಷಕರ ಮನಗೆದ್ದ “ಖಾಸಗಿ ಪುಟಗಳು” ಮೆಚ್ಚುಗೆ ಸೂಚಿಸಿದ ಸ್ಯಾಂಡಲ್‌ವುಡ್‌ ಸೆಲೆಬ್ರೆಟಿಗಳು

ಇದನ್ನೂ ಓದಿ : Vijay Devarakonda: ‘ಲೈಗರ್’ ಚಿತ್ರತಂಡಕ್ಕೆ ಸೋಲಿನ ನಡುವೆಯೇ ಇಡಿ ಶಾಕ್; ವಿಚಾರಣೆಗೆ ಹಾಜರಾದ ವಿಜಯ ದೇವರಕೊಂಡ

ಬ್ಯಾಕ್‌ ಟೂ ಬ್ಯಾಕ್‌ ಹಿಟ್‌ ಸಿನಿಮಾಗಳನ್ನು ನಿರ್ಮಾಣ ಮಾಡಿದ ಸಂಸ್ಥೆಯಾದ ಹೊಂಬಾಳೆ ಬ್ಯಾನರ್‌ಯಡಿಯಲ್ಲಿ ನಾಯಕಿಯಾಗಿ ನಟಿಸುವಂತೆ ಉಪೇಂದ್ರ ಮಗಳಿಗೆ ಆಫರ್‌ ನೀಡಲಾಗಿದ್ದು, ಮಗಳ ಸಿನಿ ಪಯಣಕ್ಕೆ ತಂದೆ ಗ್ರೀನ್‌ ಸಿಗ್ನಲ್‌ ಕೊಡುತ್ತಾರ ಎನ್ನುವುದನ್ನು ಕಾದುನೋಡಬೇಕಿದೆ. ಇಲ್ಲಿಯವರೆಗೆ ತೆರೆ ಮೇಲೆ ತಂದೆ – ತಾಯಿಯ ನಟನೆಯನ್ನು ಮೆಚ್ಚಿಗೊಂಡ ಸಿನಿಪ್ರೇಕ್ಷಕರು ಅವರ ಮಗಳ ಅಭಿನಯಕ್ಕಾಗಿ ಕಾತರದಿಂದ ಕಾದಿದ್ದಾರೆ. ನಟ ಉಪೇಂದ್ರ ಮಗಳ ನಟನೆಗೆ ಗ್ರೀನ್‌ ಸಿಗ್ನಲ್‌ ಕೊಡುವುದರ ಮೂಲಕ ಸಿನಿ ಪ್ರೇಕ್ಷಕರಿಗೆ ಸಿಹಿ ಸುದ್ದಿ ಕೊಡಬಹುದು ಎನ್ನುವುದನ್ನು ಕಾದು ನೋಡಬೇಕಿದೆ.

Aishwarya Upendra: Uppi Daughter Enters Sandalwood: Dodmane Yuvraj’s Aishwarya as Heroine

Comments are closed.