ಕಲ್ಬುರ್ಗಿ : (Rape incident)ಅಪ್ರಾಪ್ತ ಬಾಲಕೀಯ ಮೇಲಿನ ಅತ್ಯಾಚಾರ ಪ್ರಕರಣದ ಕಹಿನೆನಪು ಮಾಸುವ ಮೊದಲೇ ಮತ್ತೊಂದು ಅತ್ಯಾಚಾರ ಘಟನೆ ನಡೆದಿದ್ದು, ಘಟನೆಯಿಂದ ಜನರನ್ನು ಬೆಚ್ಚಿಬೀಳಿಸಿದೆ . 70 ವರ್ಷದ ವೃದ್ದೆಯ ಮೇಲೆ 28 ರ ಯುವಕನಿಂದ ಅತ್ಯಾಚಾರ (Rape incident) ನಡೆದಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಅಣ್ಣೂರು ಗ್ರಾಮದಲ್ಲಿ ನಡೆದಿದೆ .
ಕಳೆದ ಕೆಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ದೆ ತನ್ನ ಮೊಮ್ಮಗಳ ಮನೆಯಲ್ಲಿ ವಾಸವಾಗಿದ್ದರು . ಈ ವೇಳೆಯಲ್ಲಿ ಆಳಂದ ತಾಲೂಕಿನ ಗ್ರಾಮವೊಂದರ ಸಂತೋಷ್ ಎಂಬ 28 ರ ಯುವಕ 70 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ(Rape incident) ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ .
ಭಾನುವಾರ ಮಧ್ಯಾಹ್ನ ವೃದ್ದೆಯ ಮೊಮ್ಮಗಳು ಮನೆಯ ಬಾಗಿಲನ್ನು ಮುಚ್ಚಿಕೊಂಡು ಹೊರಹೋಗಿದ್ದಳು . ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ ಸಂತೋಷ್ ಸಮಯವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ . ಇದೇ ಸಮಯದಲ್ಲಿ ಮನೆಗೆ ಬಂದು ವೃದ್ದೆಯ ಮೇಲೆ ಅತ್ಯಾಚಾರವೆಸಗಿದ್ದಾನೆ .
ಇದನ್ನೂ ಓದಿ : The secret of Chandrasekhar’s death : ಪೊಲೀಸರ ಕೈ ಸೇರಿದ ಡಯಾಟಮ್ ವರದಿ : ಬಯಲಾಗುತ್ತಾ ಹೊನ್ನಾಳಿ ಚಂದ್ರಶೇಖರ್ ಸಾವಿನ ರಹಸ್ಯ ?
ಇದನ್ನೂ ಓದಿ : Bus accident: 40 ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದ ಖಾಸಗಿ ಬಸ್ ಡಿಕ್ಕಿ; ಚಾಲಕನ ನಿಯಂತ್ರಣ ತಪ್ಪಿ ಅವಘಡ
ಇದನ್ನೂ ಓದಿ : POCSO Case : ಮುರುಘಾ ಶ್ರೀ ಮತ್ತು ಇಬ್ಬರ ವಿರುದ್ಧ ಆರೋಪ ದೃಢ : ಚಿತ್ರದುರ್ಗ ಎಸ್ಪಿ
ಅತ್ಯಾಚಾರ ಪ್ರಕರಣದಿಂದ ತೀವ್ರ ಅಸ್ತವ್ಯಸ್ತವಾಗಿದ್ದ ವೃದ್ದೆಯನ್ನು ಕಲ್ಬುರ್ಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಈ ಕುರಿತು ಆಳಂದ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಕುರಿತು ಆಳಂದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಆರೋಪಿ ಸಂತೋಷ್ ನನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.
Before the bitter memory of the rape case of a minor girl was erased, another rape incident took place and the incident shocked people. A 70-year-old woman was raped by a 28-year-old man in Annanur village of Aland Taluk in Kalburgi district.