Richard Kettleborough : ಅಬ್ಬಾ.. ಭಾರತ Vs ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕಿಲ್ಲ ಅಪಶಕುನದ ಅಂಪೈರ್

ಅಡಿಲೇಡ್ : (Richard Kettleborough) ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿರುವ ಭಾರತ ತಂಡ ಸೆಮೀಸ್ ಪಂದ್ಯಕ್ಕೂ ಮುನ್ನವೇ ದೊಡ್ಡ ನಿಟ್ಟುಸಿರೊಂದನ್ನು ಬಿಟ್ಟಿದೆ. ಕಾರಣ ತಂಡದ ಪಾಲಿಗೆ ಅಪಶಕುನದ ಅಂಪೈರ್(Richard Kettleborough) ಸೆಮಿಫೈನಲ್’ನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. 2007ರ ಚಾಂಪಿಯನ್ ಭಾರತ ಗುರುವಾರ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಕದನದಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ (India vs England Semifinal) ತಂಡವನ್ನು ಎದುರಿಸಲಿದೆ.

ಭಾರತ Vs ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಕುಮಾರ ಧರ್ಮಸೇನಾ ಮತ್ತು ಆಸ್ಟ್ರೇಲಿಯಾದ ಪಾಲ್ ರೈಫಲ್ ಆನ್-ಫೀಲ್ಡ್ ಅಂಪೈರ್’ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. 3ನೇ ಅಂಪೈರ್ ಆಗಿ ಕ್ರಿಸ್ ಗೆಫಾನಿ, 4th ಅಂಪೈರ್ ಆಗಿ ಟಾಡ್ ಟಕ್ಕರ್ ಮತ್ತು ಮ್ಯಾಚ್ ರೆಫ್ರಿಯಾಗಿ ಡೇವಿಡ್ ಬೂನ್ ಕಾರ್ಯ ನಿರ್ವಹಿಸಲಿದ್ದಾರೆ. ಇಂಗ್ಲೆಂಡ್’ನ ರಿಚರ್ಡ್ ಕೆಟಲ್’ಬೋರೋ (Richard Kettleborough) ಸೆಮಿಫೈನಲ್’ನಲ್ಲಿ ಅಂಪೈರ್ ಆಗಿರಲ್ಲ ಎಂಬುದು ಭಾರತಕ್ಕೆ ಸಮಾಧಾನಕರ ಸಂಗತಿ. ಇದಕ್ಕೆ ಕಾರಣವೂ ಇದೆ.

2014ರಿಂದ ಭಾರತ ತಂಡ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಸೋಲು ಕಂಡಾಗಲೆಲ್ಲಾ ಆ ಪಂದ್ಯಗಳಲ್ಲಿ ರಿಚರ್ಡ್ ಕೆಟಲ್’ಬೋರೋ ಅವರೇ ಅಂಪೈರ್ ಆಗಿದ್ದರು. 2014ರ ಐಸಿಸಿ ಟಿ20 ವಿಶ್ವಕಪ್ ಫೈನಲ್’ನಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಸೋತಾಗ ಆ ಪಂದ್ಯದಲ್ಲಿ ಕೆಟಲ್’ಬೋರೋ ಫೀಲ್ಡ್ ಅಂಪೈರ್ ಆಗಿದ್ದರು.

ಇದನ್ನೂ ಓದಿ : Captain fails in T20 World Cup : ಟಿ20 ವಿಶ್ವಕಪ್ 2022 : ಸೆಮಿಫೈನಲ್‌ನಲ್ಲಿ ಆಡುತ್ತಿರುವ ನಾಲ್ಕೂ ತಂಡಗಳ ಕ್ಯಾಪ್ಟನ್‌ಗಳು ಫೇಲ್

ಇನ್ನು 2015ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್’ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತಾಗಲೂ ಫೀಲ್ಡ್ ಅಂಪೈರ್ ಆಗಿದ್ದದ್ದು ರಿಚರ್ಡ್ ಕೆಟಲ್’ಬೋರೋ.

2016ರ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋಲು ಕಂಡಾಗಲೂ ರಿಚರ್ಡ್ ಕೆಟಲ್’ಬೋರೋ ಅವರೇ ಫೀಲ್ಡ್ ಅಂಪೈರ್.

ಇದನ್ನೂ ಓದಿ : Rohit Injured : ರೋಹಿತ್ ಶರ್ಮಾ ಬಲಗೈಗೆ ಗಾಯ, ವಿಶ್ವಕಪ್ ಸೆಮಿಫೈನಲ್‌ಗೂ ಮುನ್ನ ಟೀಮ್ ಇಂಡಿಯಾಗೆ ಆಘಾತ!

2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್’ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಾಗ ಆ ಪಂದ್ಯದಲ್ಲೂ ಕೆಟಲ್’ಬೋರೋ ಫೀಲ್ಡ್ ಅಂಪೈರ್ ಆಗಿದ್ದರು.

ಇನ್ನು 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಕಂಡಿತ್ತು. ವಿಶೇಷ ಏನಂದ್ರೆ ಆ ಪಂದ್ಯದಲ್ಲೂ ಇಂಗ್ಲೆಂಡ್’ನ ರಿಚರ್ಡ್ ಕೆಟಲ್’ಬೋರೋ ಅವರೇ ಫೀಲ್ಡ್ ಅಂಪೈರ್.

ಇದನ್ನೂ ಓದಿ : Abu Dhabi T10 : ಅಬುಧಾಬಿ T10 ಟೂರ್ನಿಯಲ್ಲಿ ಆಡಲಿದ್ದಾರೆ ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ

ಭಾರತ ತಂಡ 2021ರ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಆ ಪಂದ್ಯದಲ್ಲಿ ರಿಚರ್ಡ್ ಕೆಟಲ್’ಬೋರೋ ಟಿವಿ ಅಂಪೈರ್ ಆಗಿದ್ದರು.

ಹೀಗೆ 2014ರಿಂದ ಆಡಿದ ಪ್ರತೀ ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಭಾರತ ಸೋತಾಗ ಅಂಪೈರ್ ಆಗಿದ್ದ ಕೆಟಲ್’ಬೋರೋ, ಈ ಬಾರಿಯ ವಿಶ್ವಕಪ್ ಸೆಮಿಫೈನಲ್’ನಲ್ಲಿ ಫೀಲ್ಡ್ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿಲ್ಲ. ಭಾರತದ ಪಾಲಿಗೆ ಅಪಶಕುನದ ಅಂಪೈರ್ ಎಂದೇ ಕರೆಯಲ್ಪಡುತ್ತಿರುವ ಕೆಟಲ್’ಬೋರೋ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್’ನಲ್ಲಿ ಇಲ್ಲದಿರುವುದಕ್ಕೆ ಭಾರತದ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯದ ಧಾಟಿಯಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

https://twitter.com/ajay71845/status/1589520800734117889?s=20&t=aXC6UQsOpePe4iLvOriJsw

Comments are closed.