Retired officer murdered : ಇಂಟಲಿಜೆನ್ಸ್‌ ಬ್ಯೂರೊದ ನಿವೃತ್ತ ಅಧಿಕಾರಿ ಕೊಲೆ ; ಕಾರು ಗುದ್ದಿಸಿ ಹಂತಕರು ಎಸ್ಕೇಪ್‌

ಮೈಸೂರು : (Retired officer murdered) ಮೈಸೂರು ಕೇಂದ್ರ ಇಂಟಲಿಜೆನ್ಸ್‌ ಬ್ಯೂರೊದ ನಿವೃತ್ತ ಅಧಿಕಾರಿಯೋರ್ವರನ್ನು ಅಪಘಾತದ ರೀತಿಯಲ್ಲಿ ಕೊಲೆ ಮಾಡಿರುವ ಘಟನೆ ಅರಮನೆ ನಗರಿ ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನ ಪಕ್ಕದ ರಸ್ತೆಯಲ್ಲಿ ನಡೆದಿದೆ . ಆರ್‌. ಎಸ್‌. ಕುಲಕರ್ಣಿ(83 ವರ್ಷ) ಎನ್ನುವವರೇ ಕೊಲೆಯಾದವರು (Retired officer murdered).

ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ ನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪಕ್ಕದ ರಸ್ತೆಯಲ್ಲಿ ಕುಲಕರ್ಣಿ ವಾಕಿಂಗ್‌ ಮಾಡುತ್ತಿರುವ ಸಂದರ್ಭದಲ್ಲಿ ಈ ಅಪಘಾತವನ್ನು ಎಸಗಲಾಗಿದೆ . ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕುಲಕರ್ಣಿಯವರನ್ನು ಆಸ್ಪತ್ರೆಗೆ ಕರದೊಯ್ಯಲಾಯಿತಾದರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕುಲಕರ್ಣಿ ಮೃತಪಟ್ಟಿದ್ದರು . ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೋಲೀಸ್‌ ಅಧಿಕಾರಿಗಳು ಮೇಲ್ನೋಟಕ್ಕೆ ಇದೊಂದು ಅಪಘಾತದಂತೆ ಕಂಡರೂ ಕೂಡ ಇದು ಕೊಲೆ(Retired officer murdered)ಯಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ . ಮೇಲ್ನೋಟಕ್ಕೆ ಇದನ್ನು ಹಿಟ್‌ ಆಂಡ್‌ ರನ್‌ ಪ್ರಕರಣವೆಂದು ಭಾವಿಸಿದ್ದರೂ ಕೂಡ ಪರಿಶೀಲನೆ ನಡೆಸಿದ ವೇಳೆಯಲ್ಲಿ ಪ್ರಕರಣದ ಕುರಿತು ಆಘಾತಕಾರಿ ಮಾಹಿತಿಯೊಂದು ತಿಳಿದು ಬಂದಿದೆ .

ಇದನ್ನೂ ಓದಿ : Fire accident : ರಷ್ಯಾ ಕೆಫೆಯಲ್ಲಿ ಬೆಂಕಿ ಅವಘಡ ; 15 ಸಾವು ,250 ಮಂದಿ ಸ್ಥಳಾಂತರ

ಘಟನೆ ನಡೆದ ಸ್ಥಳದ ಅಕ್ಕಪಕ್ಕದಲ್ಲಿ ಅಳವಡಿಸಿದ ಸಿಸಿ ಕ್ಯಾಮೇರಾಗಳನ್ನು ಪರಿಶೀಲಿಸಿದ ನಂತರ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದ್ದು , ರಸ್ತೆ ಬದಿಯಲ್ಲಿ ನಿಂತಿದ್ದ ಕುಲಕರ್ಣಿಯವರ ಮೇಲೆ ಅಪಘಾತವೆಸಗಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ . ನಂಬರ್‌ ಪ್ಲೇಟ್‌ ಇಲ್ಲದ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಈ ಕೃತ್ಯವನ್ನು ಎಸಗಿರುವುದು ತಿಳಿದು ಬಂದಿದೆ . ಪರಿಶೀಲನೆಯ ಬಳಿಕ ಘಟನೆ ನಡೆದ ಸ್ಥಳದಲ್ಲಿ ಅಪಘಾತವೆಸಗಿದ ಕಾರಿನ ಮಿರರ್‌ ಪತ್ತೆಯಾಗಿದ್ದು , ಈ ಪ್ರಕರಣದ ಕುಳಿತು ಎಲ್ಲಾ ರೀತಿಯಲ್ಲೂ ಪೋಲೀಸರು ತನಿಖೆಯನ್ನು ಕೈಗೊಂಡಿದ್ದಾರೆ .

ಇದನ್ನೂ ಓದಿ : Road Accident : ಕಾಂಕ್ರೀಟ್ ರೇಲಿಂಗ್‌ಗೆ ಬೈಕ್‌ ಡಿಕ್ಕಿ ; 1 ಸಾವು, ಇಬ್ಬರಿಗೆ ಗಾಯ

ಎಸಿಪಿ ನೇತ್ರತ್ವದಲ್ಲಿ ಮೂವರು ಪೋಲೀಸ್‌ ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು , ಪ್ರಕರಣದ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆಯನ್ನು ಆರಂಭಿಸಿದ್ದೇವೆ . ಶಿಘ್ರವೇ ಈ ಪ್ರಕರಣವನ್ನು ಭೇದಿಸಲಿದ್ದೇವೆ ಎಂದು ಕಮಿಷನರ್‌ ಚಂದ್ರಗುಪ್ತ ಅವರು ತಿಳಿಸಿದ್ದಾರೆ .

ಇದನ್ನೂ ಓದಿ : The big twist : ಚಂದ್ರಶೇಖರ್‌ ನಿಗೂಢ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಕೊನೆಯ ಆ ಕರೆಯಲ್ಲಿತ್ತಾ ಸಾವಿನ ಸೀಕ್ರೆಟ್

ಘಟನೆ ನಡೆದ ಸ್ಥಳವನ್ನು ಪರಿಶೀಲನೆ ನಡೆಸಿದ ವೇಳೆಯಲ್ಲಿ ಪ್ರಕರಣದ ಕುರಿತು ಅನುಮಾನಗಳು ಹೆಚ್ಚಾಗಿದ್ದು , ಹಳೇ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ . ಕುಲಕರ್ಣಿ ಅವರ ಕುಟುಂಬದವರಲ್ಲಿ ಮಾಹಿತಿಯನ್ನು ಪಡೆಯಲಾಗಿದ್ದು ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಳ್ಳಲಾಗುತ್ತಿದೆ .ಇದಕ್ಕೆ ಸಂಬಂಧಿಸಿದಂತೆ ಜಯಲಕ್ಷ್ಮಿಪುರಂ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ .
23 ವರ್ಷದ ಹಿಂದೆ ನಿವೃತ್ತಿಯಾದ ಕುಲಕರ್ಣಿಯವರ ಕೊಲೆಗೆ ವೃತ್ತಿಯಲ್ಲಿರುವ ದ್ವೇಷವೇ ಕಾರಣವಾ.. ? ಅಥವಾ ವೈಯಕ್ತಿಕ ದ್ವೇಷ ಕಾರಣವಾ..? ಎನ್ನುವುದು ಇನ್ನೂ ತಿಳಿದು ಬಂದಿಲ್ಲ . ಪೋಲೀಸ್‌ ಠಾಣೆಯಲ್ಲಿ ಈ ಕುರಿತು ಕೊಲೆ ಎಂದು ಪ್ರಕರಣ ದಾಖಲಾಗಿದ್ದು , ತನಿಖೆಯ ನಂತರವಷ್ಟೇ ಪ್ರಕರಣದ ಕುರಿತಾಗಿ ಪೂರ್ಣ ಮಾಹಿತಿ ಹೊರಬೀಳಲಿದೆ .

(Retired officer murdered) A retired officer of the Mysore Central Intelligence Bureau was accidentally murdered on the road next to the Manasa Gangotri campus in Palace City, Mysore. R. S. Kulkarni (83 years old) is the one who was murdered (Retired officer murdered).

Comments are closed.