Danushka Gunathilaka : ಅತ್ಯಾಚಾರ ಆರೋಪ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅರೆಸ್ಟ್

ಸಿಡ್ನಿ : ಶ್ರೀಲಂಕಾ ಸ್ಟಾರ್‌ ಬ್ಯಾಟ್ಸ್‌ಮನ್‌ ಧನುಷ್ಕಾ ಗುಣತಿಲಕ (Danushka Gunathilak) ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಸಿಡ್ನಿಯಲ್ಲಿ ಬಂಧಿಸಲಾಗಿದೆ.ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗಿದ್ದರು. ಆದರೆ ಧನುಷ್ಕಾ ಗುಣತಿಲಕ ಇಲ್ಲದೇ ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ ಎಂದು ವರದಿಯಾಗಿದೆ.

ಕಳೆದ ವಾರ ಸಿಡ್ನಿಯಲ್ಲಿ ಮಹಿಳೆ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಭಾನುವಾರ 1 ಗಂಟೆ ವೇಳೆಗೆ ಧನುಷ್ಕಾ ಗುಣತಿಲಕ ತಂಗಿದ್ದ ಹೋಟೆಲ್‌ನಿಂದ ಬಂಧಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿರುತ್ತಾರೆ. ರೋಸ್‌ ಬೇಯಲ್ಲಿರುವ ಮನೆಯಲ್ಲಿ 29 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೊಳಗಾದ ಕುರಿತು ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಅಪರಾಧ ಕಮಾಂಡ್‌ನ ಲೈಂಗಿಕ ಅಪರಾಧಗಳ ಸ್ಕಾಡ್‌ ಮತ್ತು ಪೂರ್ವ ಉಪನಗರ ಪೊಲೀಸ್‌ ಏರಿಯಾ ಕಮಾಂಡ್‌ನ ಡಿಟೆಕ್ಟಿವ್‌ಗಳು ಜಂಟಿ ತನಿಖೆ ಆರಂಭಿಸಿದೆ.

ಮಹಿಳೆಯು ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಶನ್‌ ಮೂಲಕ ದನುಷ್ಕಾ ಗುಣತಿಲಕನೊಂದಿಗೆ ಹಲವಾರು ದಿನಗಳವರೆಗೆ ಮೇಸೆಜ್ ವಿನಿಮಯ ಮಾಡಿಕೊಂಡಿದ್ದರು. ಅಲ್ಲದೇ ನವೆಂಬರ್‌ 2ರಂದು ಇಬ್ಬರು ಭೇಟಿಯಾಗಿದ್ದು. ಆ ಸಂದರ್ಭದಲ್ಲಿ ಧನುಷ್ಕಾ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಶನಿವಾರ ರೋಸ್‌ ಬೇದಲ್ಲಿನ ವಿಶೇಷ ಪೊಲೀಸರು ಅಪರಾಧ ನಡೆದ ಸ್ಥಳ ಪರಿಶೀಲಿಸಲಾಗಿದ್ದು, ಹೆಚ್ಚಿನ ವಿಚಾರಣೆಯ ನಂತರ ಇಂದು ಭಾನುವಾರ 1 ಗಂಟೆಯ ಹೊತ್ತಿಗೆ ಸಿಡ್ನಿಯ ಸಸೆಕ್ಸ್ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ನಲ್ಲಿರುವ 31 ವರ್ಷದ ಧನುಷ್ಕಾ ಗುಣತಿಲಕರನ್ನು ಬಂಧಿಸಿದ್ದಾರೆ.

ಧನುಷ್ಕಾ ಗುಣತಿಲಕನ್ನು ಸಿಟಿ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು, ವಿಚಾರಣೆ ನಡೆಸಿದಾಗ ಆಕೆಯ ಒಪ್ಪಿಗೆ ಇಲ್ಲದೇ ನಾಲ್ಕು ಬಾರಿ ಲೈಂಗಿಕ ಸಂಭೋಗ ನಡೆಸಿರುವ ಆರೋಪ ಕೇಳಿ ಬಂದಿರುತ್ತದೆ. ಶ್ರೀಲಂಕಾದ ಪ್ರಜೆಯಾಗಿರುವ ಧನುಷ್ಕಾನ್ನು ಪರಮಟ್ಟಾ ಬೈಲ್‌ ಕೋರ್ಟ್‌ನಲ್ಲಿ ಜಾಮೀನಿಗೆ ಹಾಜರು ಪಡಿಸಲಾಗಿತ್ತು, ಆದರೆ ಕೋರ್ಟ್‌ ಜಾಮೀನನ್ನು ನಿರಾಕರಿಸಲಾಗಿದೆ ಎಂದು ವರದಿಯಾಗಿರುತ್ತದೆ.

ಇದನ್ನೂ ಓದಿ : T20 World Cup: ಶ್ರೀಲಂಕಾ ವಿರುದ್ಧ ಗೆದ್ದ ಇಂಗ್ಲೆಂಡ್ ಸೆಮೀಸ್‌ಗೆ, ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕಿಕೌಟ್

ಇದನ್ನೂ ಓದಿ : Virat Kohli Birthday : ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ವಿರಾಟ್

ಇದನ್ನೂ ಓದಿ : T20 World Cup 2022: ನಾಳೆ ಭಾರತ Vs ಜಿಂಬಾಬ್ವೆ ಮ್ಯಾಚ್, ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಹಾಕಲಿದೆ ಟೀಮ್ ಇಂಡಿಯಾ

ಟಿ20 ವಿಶ್ವಕಪ್‌ನ ಮೊದಲ ಸುತ್ತಿನಲ್ಲಿ ಧನುಷ್ಕಾ ಗುಣತಿಲಕ ಮಂಡಿರಜ್ಜು ಗಾಯದಿಂದ ಆಟದಿಂದ ಹೊರಬಿದ್ದಿದ್ದರು. ಅವರ ಬದಲು ತಂಡದಲ್ಲಿ ಬದಲಿ ಆಟಗಾರರನ್ನು ನೇಮಕ ಮಾಡಲಾಗಿತ್ತು. ಆದರೂ ಅವರು ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿ ಉಳಿದರು. ನವೆಂಬರ್‌ 2015ರಲ್ಲಿ ಪಾದಾರ್ಪಣೆ ಮಾಡಿದ ನಂತರ ಅವರು ಶ್ರೀಲಂಕಾ ಪರ ಎಂಟು ಟೆಸ್ಟ್‌, 47 ODI ಮತ್ತು 46 T20I ಗಳಲ್ಲಿ ಆಡಿದ್ದಾರೆ. ತಮ್ಮ ಕೊನೆಯ ಗಂಪಿನ ಪಂದ್ಯದಲ್ಲಿ ಸಿಡ್ನಿ ಕ್ರಕೆಟ್‌ ಮೈದಾನದಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತ ನಂತರ ಶ್ರೀಲಂಕಾ ಭಾನುವಾರ ಪಂದ್ಯಾವಳಿಯಿಂದ ಹೊರ ಉಳಿದಿದ್ದಾರೆ.

Sri Lankan cricketer Danushka Gunathilak arrested on rape charges

Comments are closed.