selfie with the snake: ಯುವಕನ ಜೀವಕ್ಕೆ ಕಂಟಕವಾಯ್ತು ಹಾವಿನೊಂದಿಗೆ ತೆಗೆದ ಆ ಒಂದು ಸೆಲ್ಫಿ

ಆಂಧ್ರಪ್ರದೇಶ: (selfie with the snake) ಹಾವು ಎಂದರೇ ಹೆದರಿ ಓಡುವ ಸಂದರ್ಭವೊಂದಿತ್ತು. ಆದರೆ ಈಗಿನ ಕಾಲ ಹೇಗೆಂದರೆ ಹಾವಿನಿಂದ ಅಪಾಯವಿದೆ ಎಂದು ತಿಳಿದಿದ್ದರೂ ಕೂಡ ಅದರ ಜೊತೆ ಸರಸವಾಡಲು ಜನ ಮುಗಿಬೀಳುತ್ತಾರೆ. ಇದು ಕೂಡ ಅಂತಹದೇ ಒಂದು ಘಟನೆ. ಹಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕ ಕಳೆದುಕೊಂಡಿದ್ದು ಮಾತ್ರ ತನ್ನ ಪ್ರಾಣವನ್ನು. ಮೃತ ಯುವಕನನ್ನು ಮಣಿಕಂಠ ರೆಡ್ಡಿ ಎಂದು ಗುರುತಿಸಲಾಗಿದೆ.

ಹಾವಾಡಿಗನೋರ್ವ ಹಾವಿನೊಂದಿಗೆ ಆಟವಾಡುತ್ತಿದ್ದಾನೆ ಎಂಬ ವಿಚಾರ ತಿಳಿದ ಮಣಿಕಂಠ ರೆಡ್ಡಿ ಕುತೂಹಲ ಚಕಿತನಾಗಿ ಅಲ್ಲಿಗೆ ತೆರಳಿದ್ದಾನೆ. ಹಾವಾಡಿಗ ಹಾವಿನೊಂದಿಗೆ ಆಟವಾಡುತ್ತಿದ್ದನ್ನು ನೋಡಿ ಸುಮ್ಮನೆ ಹಿಂದಿರುಗುವುದನ್ನು ಬಿಟ್ಟು ಈತ ಹಾವಾಡಿಗನ ಬಳಿಯಿದ್ದ ಹಾವನ್ನು ಕೇಳಿ ಅದನ್ನು ತನ್ನ ಕುತ್ತಿಗೆಯ ಸುತ್ತಲೂ ಸುತ್ತಿಕೊಂಡಿದ್ದಾನೆ. ನಂತರ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಫೋಟೋ ಕೂಡ ತೆಗೆದುಕೊಂಡಿದ್ದಾನೆ. ಇನ್ನೇನು ಕುತ್ತಿಗೆಯಿಂದ ಹಾವನ್ನು ಬಿಡಿಸಿ ಹಾವಾಡಿಗನಿಗೆ ಕೊಡಬೇಕು ಎನ್ನುವಷ್ಟರಲ್ಲಿ ಹಾವು ಆತನಿಗೆ ಕಚ್ಚಿದೆ.

ಕೂಡಲೇ ಸ್ಥಳಿಯರು ಆತನನ್ನು ರೀಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವಿಷಪೂರಿತ ಹಾವು ಕಚ್ಚಿದ ಪರಿಣಾಮ ವಿಷವೇರಿ ಆತ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ. ಸಾಮಾನ್ಯವಾಗಿ ಹಾವುಗಳು ಯಾರಿಗೂ ತೊಂದರೆ ಮಾಡುವುದಿಲ್ಲ. ತಮಗೆ ಅಪಾಯವಾಗುತ್ತದೆ ಎನ್ನುವ ಸಂದರ್ಭವಿದ್ದಾಗ ಮಾತ್ರವೇ ಅವು ದಾಳಿಗೆ ಮುಂದಾಗುತ್ತವೆ. ಇದು ಪ್ರತಿಯೊಬ್ಬರಿಗೂ ತಿಳಿದ ವಿಚಾರವೇ ಆದರೂ ಕೆಲವೊಬ್ಬರು ಹಾವಿನೊಂದಿಗೆ ಸರಸವಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಅಂತಹ ಉದಾಹರಣೆಗಳು ಕೂಡ ತುಂಬಾನೇ ಇವೆ.

ಇದನ್ನೂ ಓದಿ : Heart attack- nurse dead: ಗಣರಾಜ್ಯೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಹೃದಯಾಘಾತ: ವ್ಯಕ್ತಿ ಸಾವು

ಇದನ್ನೂ ಓದಿ : Karkala Suicide case: ಡೆತ್‌ ನೋಟ್‌ ಬರೆದಿಟ್ಟು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಚಾಲಕ ಆತ್ಮಹತ್ಯೆ

ಇದನ್ನೂ ಓದಿ : Agra Building collapse: ಉತ್ಖನನ ಕಾರ್ಯಕ್ಕೆ ನೆಲಸಮವಾದ 6 ಮನೆ : 4 ವರ್ಷದ ಬಾಲಕಿ ಸಾವು

ಸದ್ಯ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

selfie with the snake: That one selfie taken with a snake became a thorn in the life of a young man.

Comments are closed.