Heart attack- nurse dead: ಗಣರಾಜ್ಯೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಹೃದಯಾಘಾತ: ವ್ಯಕ್ತಿ ಸಾವು

ರಾಯಚೂರು: (Heart attack- nurse dead) ದೇಶದಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತವಾಗಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಮಹಾಂತೇಶ್‌ (೪೨ ವರ್ಷ) ಮೃತ ವ್ಯಕ್ತಿ.

ಮೃತ ಮಹಾಂತೇಶ್ ಆರೋಗ್ಯ ಇಲಾಖೆ ಸಿಬ್ಬಂದಿಯಾಗಿದ್ದು, ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಸಿಂಧನೂರು ತಾಲೂಕು ಆಸ್ಪತ್ರೆ ಸಿಬ್ಬಂದಿಯಿಂದ ಕೋಲಾಟ ನೃತ್ಯ ಪ್ರದರ್ಶನ ಮಾಡಲಾಗುತ್ತಿತ್ತು. ಹೀಗೆ ಗಣರಾಜ್ಯೋತ್ಸವದ ಅಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಮಹಾಂತೇಶ್‌ ಕುಸಿದು ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇತ್ತೀಚೆಗೆ ನಿರ್ಮಿಸಲಾದ ನೂತನ ತಾಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಇಲಾಖೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದು, ಆರೋಗ್ಯ ಇಲಾಖೆಯ ವತಿಯಿಂದ ಗ್ರೂಪ್‌ ಡ್ಯಾನ್ಸ್‌ ನಡೆಸಲಾಗಿತ್ತು. ಇಂದು ಮೈದಾನದಲ್ಲಿ ಬಂದು ನೃತ್ಯ ಮಾಡುತ್ತಿದ್ದ ವೇಳೆ ಮಹಾಂತೇಶ್‌ ಏಕಾಏಕಿ ಕುಸಿದು ಬಿದ್ದಿದ್ದಾರೆ. ಮಹಾಂತೇಶ್‌ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಸ್ಥಳದಲ್ಲಿಯೇ ಮ್ಯಾಸಿವ್‌ ಹಾರ್ಟ್‌ ಅಟ್ಯಾಕ್‌ ನಿಂದ ಮೃತಪಟ್ಟಿದ್ದರು.

ಇನ್ನೂ ಕೆಲಸ ಮಾಡಿಕೊಂಡು ಮಹಾಂತೇಶ್‌ ಕುಟುಂಬಕ್ಕೆ ಆಸರೆಯಾಗಿದ್ದರು. ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಮಹಾಂತೇಶ್‌ ಬಲಿಯಾಗಿದ್ದು ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಮಹಾಂತೇಶ್‌ ಅವರ ನೃತ್ಯ ನೋಡಲು ಕುಟುಂಬದವರು ಕೂಡ ಅಗಮಿಸಿದ್ದು, ಕುಟುಂಬದವರ ಕಣ್ಣೆದುರೇ ಮಹಾಂತೇಶ್‌ ಸಾವನ್ನಪ್ಪಿರುವುದು ಬರಸಿಡಿಲು ಬಡಿದಂತಾಗಿದೆ.

ಯುವಕನ ಜೀವಕ್ಕೆ ಕಂಟಕವಾಯ್ತು ಹಾವಿನೊಂದಿಗೆ ತೆಗೆದ ಆ ಒಂದು ಸೆಲ್ಫಿ

ಆಂಧ್ರಪ್ರದೇಶ: ಹಾವು ಎಂದರೇ ಹೆದರಿ ಓಡುವ ಸಂದರ್ಭವೊಂದಿತ್ತು. ಆದರೆ ಈಗಿನ ಕಾಲ ಹೇಗೆಂದರೆ ಹಾವಿನಿಂದ ಅಪಾಯವಿದೆ ಎಂದು ತಿಳಿದಿದ್ದರೂ ಕೂಡ ಅದರ ಜೊತೆ ಸರಸವಾಡಲು ಜನ ಮುಗಿಬೀಳುತ್ತಾರೆ. ಇದು ಕೂಡ ಅಂತಹದೇ ಒಂದು ಘಟನೆ. ಹಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕ ಕಳೆದುಕೊಂಡಿದ್ದು ಮಾತ್ರ ತನ್ನ ಪ್ರಾಣವನ್ನು. ಮೃತ ಯುವಕನನ್ನು ಮಣಿಕಂಠ ರೆಡ್ಡಿ ಎಂದು ಗುರುತಿಸಲಾಗಿದೆ.

ಹಾವಾಡಿಗನೋರ್ವ ಹಾವಿನೊಂದಿಗೆ ಆಟವಾಡುತ್ತಿದ್ದಾನೆ ಎಂಬ ವಿಚಾರ ತಿಳಿದ ಮಣಿಕಂಠ ರೆಡ್ಡಿ ಕುತೂಹಲ ಚಕಿತನಾಗಿ ಅಲ್ಲಿಗೆ ತೆರಳಿದ್ದಾನೆ. ಹಾವಾಡಿಗ ಹಾವಿನೊಂದಿಗೆ ಆಟವಾಡುತ್ತಿದ್ದನ್ನು ನೋಡಿ ಸುಮ್ಮನೆ ಹಿಂದಿರುಗುವುದನ್ನು ಬಿಟ್ಟು ಈತ ಹಾವಾಡಿಗನ ಬಳಿಯಿದ್ದ ಹಾವನ್ನು ಕೇಳಿ ಅದನ್ನು ತನ್ನ ಕುತ್ತಿಗೆಯ ಸುತ್ತಲೂ ಸುತ್ತಿಕೊಂಡಿದ್ದಾನೆ. ನಂತರ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು, ಫೋಟೋ ಕೂಡ ತೆಗೆದುಕೊಂಡಿದ್ದಾನೆ. ಇನ್ನೇನು ಕುತ್ತಿಗೆಯಿಂದ ಹಾವನ್ನು ಬಿಡಿಸಿ ಹಾವಾಡಿಗನಿಗೆ ಕೊಡಬೇಕು ಎನ್ನುವಷ್ಟರಲ್ಲಿ ಹಾವು ಆತನಿಗೆ ಕಚ್ಚಿದೆ.

ಕೂಡಲೇ ಸ್ಥಳಿಯರು ಆತನನ್ನು ರೀಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವಿಷಪೂರಿತ ಹಾವು ಕಚ್ಚಿದ ಪರಿಣಾಮ ವಿಷವೇರಿ ಆತ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ. ಸಾಮಾನ್ಯವಾಗಿ ಹಾವುಗಳು ಯಾರಿಗೂ ತೊಂದರೆ ಮಾಡುವುದಿಲ್ಲ. ತಮಗೆ ಅಪಾಯವಾಗುತ್ತದೆ ಎನ್ನುವ ಸಂದರ್ಭವಿದ್ದಾಗ ಮಾತ್ರವೇ ಅವು ದಾಳಿಗೆ ಮುಂದಾಗುತ್ತವೆ. ಇದು ಪ್ರತಿಯೊಬ್ಬರಿಗೂ ತಿಳಿದ ವಿಚಾರವೇ ಆದರೂ ಕೆಲವೊಬ್ಬರು ಹಾವಿನೊಂದಿಗೆ ಸರಸವಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಅಂತಹ ಉದಾಹರಣೆಗಳು ಕೂಡ ತುಂಬಾನೇ ಇವೆ.

ಸದ್ಯ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Karkala Suicide case: ಡೆತ್‌ ನೋಟ್‌ ಬರೆದಿಟ್ಟು ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಚಾಲಕ ಆತ್ಮಹತ್ಯೆ

ಇದನ್ನೂ ಓದಿ : Agra Building collapse: ಉತ್ಖನನ ಕಾರ್ಯಕ್ಕೆ ನೆಲಸಮವಾದ 6 ಮನೆ : 4 ವರ್ಷದ ಬಾಲಕಿ ಸಾವು

ಇದನ್ನೂ ಓದಿ : Contractor killed the worker: ಹಣದ ವಿಚಾರಕ್ಕೆ ಕಿರಿಕ್ : ಕಾರ್ಮಿಕನ ಕೊಲೆಗೈದು ಪೊದೆಯಲ್ಲಿ ಎಸೆದ ಗುತ್ತಿಗೆದಾರ

Heart attack- nurse dead: Heart attack while dancing on Republic Day: Person dies

Comments are closed.