drugs at Gobhi Manchurian shop :ನಡೆಸುತ್ತಿದ್ದುದು ಗೋಬಿ ಅಂಗಡಿ, ಮಾರಾಟವಾಗಿದ್ದು ಡ್ರಗ್ಸ್​ : ಕೊನೆಗೂ ಖಾಕಿ ಬಲೆಗೆ ಬಿದ್ದ ಐನಾತಿ

ಕೊಡಗು : drugs at Gobhi Manchurian shop : ಕರ್ನಾಟಕ ಪೊಲೀಸರು ‌ಮಾದಕ‌ದ್ರವ್ಯದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲಲ್ಲಿ‌ ಡ್ರಗ್ಸ್ ಸಾಗಾಟ ಸೇರಿದಂತೆ ಸೇವನೆ ಮಾಡುತ್ತಿರುವವರನ್ನು ಪೊಲೀಸರು ಹೆಡೆಮುರಿ ಕಟ್ಟುತ್ತಿರುತ್ತಾರೆ. ಒರಿಸ್ಸಾದಿಂದ ಗಾಂಜಾ ತಂದು ಕೊಡಗಿನಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ವಿರಾಜಪೇಟೆ ಮೂಲದ ಸೂರ್ಯಕಾಂತ ಮೊಹಂತಿ ಎಂದು ಹೆಸರಿಸಲಾಗಿದೆ.

ಈತ ಒರಿಸ್ಸಾದಿಂದಲೇ ಗಾಂಜಾ ತಂದು ಮಾರಾಟ ಮಾಡುತ್ತಿದ್ದ. ಕೊಡಗಿನಿಂದ ಕೇರಳಕ್ಕೆ ಗಾಂಜಾ ಸಾಗಿಸುತ್ತಿದ್ದಾಗ ಪೆರುಂಬಾಡಿಯಲ್ಲಿ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಹುಂಡೈ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ. ಸದ್ಯ ಆರೋಪಿಯಿಂದ 6.50 ಕೆ.ಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಸೂರ್ಯಕಾಂತ ಮೊಹಂತಿ ವಿರಾಜಪೇಟೆ ಮತ್ತು ಹಳ್ಳಿಗಟ್ಟುವಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಕ್ಯಾಂಟೀನ್ ಗುತ್ತಿಗೆಯನ್ನು ಪಡೆದಿದ್ದ. ಈ ಕ್ಯಾಂಟೀನ್ ನಡೆಸುತ್ತಾ ಗಾಂಜಾ ಗ್ರಾಹಕರಾಗಿ ವಿದ್ಯಾರ್ಥಿಗಳನ್ನೆ ಟಾರ್ಗೆಟ್ ಮಾಡುತ್ತಿದ್ದ ಎಂಬ ಮಾಹಿತಿಯು ಪೊಲೀಸರಿಗೆ ಲಭಿಸಿದೆ. ಕಾಲೇಜುಗಳಲ್ಲಿ ಕ್ಯಾಂಟೀನ್ ನಡೆಸುವುದರ ಜೊತೆಗೆ ವಿರಾಜಪೇಟೆಯಲ್ಲಿ ಗೋಬಿ‌ ಮಂಚೂರಿ ವ್ಯಾಪಾರವನ್ನು ನಡೆಸುತ್ತಿದ್ದ. ಆದ್ರೆ ಈ ಗೋಬಿ ಮಂಚೂರಿ ವ್ಯಾಪಕ ಹೆಸರಿಗಷ್ಟೇ ನಡೆಸುತ್ತಿದ್ದ. ವಿರಾಜಪೇಟೆ ಡಿ.ವೈ.ಎಸ್ಪಿ ಮಾರ್ಗದರ್ಶನದಲ್ಲಿ ಆರೋಪಿ ಸೂರ್ಯಕಾಂತ ನ ಹೆಡೆಮುರಿ ಕಟ್ಟಿರುವ ಪೊಲೀಸರು ಈತನ ಮತ್ತಷ್ಟು ಅಕ್ರಮವನ್ನು ಬಯಲು ಮಾಡುತ್ತಿದ್ದಾರೆ.

ಈ ಡ್ರಗ್ಸ್ ಜಾಲದ ಹಿಂದೆ‌ ಮತ್ತಷ್ಟು ಮಂದಿ ಇರುವ ಶಂಕೆ ಇದೆ. ಹೀಗಾಗಿ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಗಾಂಜಾ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ನಡುವೆಯೇ ಗಾಂಜಾ ಸಪ್ಲೈ ಮಾಡುವುದಕ್ಕೆ ವಿದ್ಯಾರ್ಥಿಗಳನ್ನು ರೆಡಿ ಮಾಡಿದ್ದ. ಸದ್ಯ ಈತ ಗಾಂಜಾ ಮಾತ್ರವಲ್ಲದೇ ಇನ್ನಿತರ ಮಾದಕ ದ್ರವ್ಯ ಸಪ್ಲೈ ಮತ್ತು‌ ಮಾರಾಟ ಮಾಡುತ್ತಿದ್ದ ಎಂಬ ಸಂಶಯವೂ ಪೊಲೀಸರಿಗಿದೆ. ಈತ ಕೇವಲ ಕೊಡಗು ಮಾತ್ರವಲ್ಲದೆ ಪಕ್ಕದ ಕೇರಳ ರಾಜ್ಯಕ್ಕೂ ನಿರಂತರವಾಗಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ.

ಇದನ್ನು ಓದಿ : KL Rahul Record in T20 : ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆ.ಎಲ್ ರಾಹುಲ್

ಇದನ್ನೂ ಓದಿ : Temple For Yogi Adityanath : ಅಯೋಧ್ಯೆಯಲ್ಲಿ ನಿರ್ಮಾಣವಾಗಿದೆ ಯೋಗಿ ಆದಿತ್ಯನಾಥ್​ ಮಂದಿರ : ಥೇಟ್​ ರಾಮನಂತೆ ಬಿಲ್ಲು-ಬಾಣ ಹಿಡಿದ ಯುಪಿ ಸಿಎಂ

Selling drugs at Gobhi Manchurian shop

Comments are closed.