Rahul Kohli Drinks Tender Coconut : ಬಾಂಗ್ಲಾದೇಶದಲ್ಲಿ ಎಳನೀರು ಕುಡಿದ ಟೀಮ್ ಇಂಡಿಯಾ ಕ್ಯಾಪ್ಟನ್ ರಾಹುಲ್, ಕಿಂಗ್ ಕೊಹ್ಲಿ

ಮೀರ್’ಪುರ್: ಎಳನೀರು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಭೂಲೋಕದ ಕಲ್ಪವೃಕ್ಷ ಎಂದೇ ಖ್ಯಾತಿ ಪಡೆದಿರುವ ತೆಂಗಿನಮರದಿಂದ ಸಿಗುವ ಎಳನೀರನ್ನು ಅಮೃತಕ್ಕೆ ಹೋಲಿಸುತ್ತಾರೆ. ಸುಸ್ತಾಗಿ ಬಂದಾಗ ಕೈಗೆ ಒಂದು ಎಳನೀರು ಸಿಕ್ಕಿದ್ರೆ ಸಾಕು, ಅದ್ರ ಮಜಾವೇ ಬೇರೆ.ಬಾಂಗ್ಲಾದೇಶ ಪ್ರವಾಸದಲ್ಲಿರುವ (India tour off Bangladesh) ಟೀಮ್ ಇಂಡಿಯಾ ಆಟಗಾರರು ಮೀರ್’ಪುರ್’ನಲ್ಲಿ ಎಳನೀರು ಕುಡಿಯುವ (Rahul Kohli Drinks Tender Coconut) ಮೂಲಕ ಗಮನ ಸೆಳೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ (India Vs Bangladesh 2nd test matc) ಪಂದ್ಯಕ್ಕಾಗಿ ಭಾರತ ತಂಡ ಮೀರ್’ಪುರ್’ನಲ್ಲಿರುವ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ ಕಠಿಣ ಅಭ್ಯಾಸ ನಡೆಸಿತು. ಅಭ್ಯಾಸದಿಂದ ಬಳಲಿದ್ದ ನಾಯಕ ಕೆ.ಎಲ್ ರಾಹುಲ್ (KL Rahul) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಮೈದಾನದ ಸಿಬ್ಬಂದಿಯಿಂದ ಎಳನೀರು ತರಿಸಿಕೊಂಡು ಕುಡಿದರು. ಅಷ್ಟೇ ಅಲ್ಲ, ನೀರು ಕುಡಿದ ನಂತರ ಎಳನೀರು ಒಳಗಿದ್ದ ‘ಗಂಜಿ’ಯನ್ನು ಇಬ್ಬರೂ ಚಪ್ಪರಿಸಿಕೊಂಡು ತಿಂದರು. ರಾಹುಲ್ ಮತ್ತು ಕೊಹ್ಲಿ ಎಳನೀರು ಸವಿಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಪ್ರವಾಸಿ ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮೀರ್’ಪುರ್’ನಲ್ಲಿರುವ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಟಾಸ್ ಗೆದ್ದಿರುವ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲ 15 ಓವರ್’ಗಳಲ್ಲಿ ಬಾಂಗ್ಲಾದೇಶ ಒಂದು ವಿಕೆಟ್ ಕಳೆದುಕೊಂಡು 39 ರನ್ ಗಳಿಸಿತು.

2ನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಗಿದ್ದು, ಸೌರಾಷ್ಟ್ರ ತಂಡದ ನಾಯಕ ಜೈದೇವ್ ಉನಾದ್ಕಟ್ 12 ವರ್ಷಗಳ ನಂತರ ಭಾರತ ಪರ ಮತ್ತೆ ಟೆಸ್ಟ್ ಆಡುವ ಅವಕಾಶ ಪಡೆದಿದ್ದಾರೆ. 31 ವರ್ಷದ ಉನಾದ್ಕಟ್ ತಮ್ಮ ಕಂಬ್ಯಾಕ್ ಟೆಸ್ಟ್ ಪಂದ್ಯದಲ್ಲಿ 4ನೇ ಓವರ್’ನಲ್ಲಿ ಬಾಂಗ್ಲಾ ಓಪನರ್ ಜಾಕಿರ್ ಹೊಸೇನ್ ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು.

ಇದನ್ನೂ ಓದಿ : Suryakumar Yadav: ರಣಜಿ ಪಂದ್ಯದಲ್ಲೂ ಮುಂದುವರಿದ “ಸೂರ್ಯ” ಶಿಕಾರಿ, ಹತ್ತೇ ರನ್ನಿಂದ ಸೆಂಚುರಿ ಮಿಸ್, ಸಿಗಲಿದ್ಯಾ ಟೆಸ್ಟ್ ಕ್ಯಾಪ್..?

ಇದನ್ನೂ ಓದಿ : India Vs Bangladesh 2nd test : ನಾಳೆಯಿಂದ 2ನೇ ಟೆಸ್ಟ್, ಸೇಡಿನ ಬೆಂಕಿಯಲ್ಲಿ ಧಗ ಧಗಿಸುತ್ತಿದೆ ಟೀಮ್ ಇಂಡಿಯಾ

ಇದನ್ನೂ ಓದಿ : Newsnext special: Manish Pandey IPL 2023 : ಐಪಿಎಲ್‌ನಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ, ಯಾರ ಪಾಲಾಗಲಿದ್ದಾರೆ ಮನೀಶ್ ಪಾಂಡೆ ?

ಜೈದೇವ್ ಉನಾದ್ಕಟ್ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡಿರುವ ಕಾರಣ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಭಾರತದ ಗೆಲುವಿಗೆ ಕಾರಣರಾಗಿದ್ದರು. ಛಟ್ಟೋಗ್ರಾಮ್’ನಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪ್ರಥಮ ಟೆಸ್ಟ್’ನಲ್ಲಿ ಬ್ಯಾಟಿಂಗ್’ನಲ್ಲಿ 40 ರನ್ ಗಳಿಸಿದ್ದ ಕುಲ್ದೀಪ್, ಬೌಲಿಂಗ್’ನಲ್ಲಿ 8 ವಿಕೆಟ್ ಪಡೆದು ಮಿಂಚಿದ್ದರು.

Rahul Kohli Drinks Tender Coconut: Team India captain Rahul, King Kohli drank fresh water in Bangladesh.

Comments are closed.