Kabaddi Players :ಕಬ್ಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ : ವೈರಲ್​ ಆಯ್ತು ಅಮಾನವೀಯ ವಿಡಿಯೋ

ಉತ್ತರ ಪ್ರದೇಶ : Kabaddi Players : ದೇಶದಲ್ಲಿ ಕ್ರೀಡೆ ಅಂತಾ ಬಂದಾಗ ಮೊದಲು ನೆನಪಾಗೋದೇ ಕ್ರಿಕೆಟ್​. ನಮ್ಮ ದೇಶದಲ್ಲಿ ಕ್ರಿಕೆಟಿಗರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತೆ. ಆದರೆ ಬೇರೆ ಕ್ರೀಡೆಗಳ ವಿಚಾರಕ್ಕೆ ಬಂದರೆ ಕ್ರಿಕೆಟಿಗರಿಗೆ ಸಿಕ್ಕ ಈ ಮರ್ಯಾದೆ, ಗೌರವಗಳು ಉಳಿದ ಕ್ರೀಡಾಪಟುಗಳಿಗೆ ಸಿಗುತ್ತಿಲ್ಲ ಎಂಬುದು ಕಹಿ ಸತ್ಯ. ಗೌರವ, ಮರ್ಯಾದೆಗಳು ಹಾಗಿರಲಿ ಉಳಿದ ಕ್ರೀಡಾಪಟುಗಳಿಗೆ ಸರಿಯಾಗಿ ಮೂಲಭೂತ ಸೌಕರ್ಯ ಕೂಡ ಸಿಗ್ತಿಲ್ಲ ಎಂಬ ಬೆಚ್ಚಿ ಬೀಳಿಸುವ ವಿಚಾರ ಕೂಡ ಇದೀಗ ಹೊರ ಬಿದ್ದಿದೆ.


ಡ್ಯುರಾಂಡ್​ ಕಪ್​​ನ ಸಂದರ್ಭದಲ್ಲಿ ತನ್ನ ರಾಷ್ಟ್ರೀಯ ಫುಟ್​ಬಾಲ್ ನಾಯಕನಿಗೆ ಆದ ಅವಮಾನವನ್ನು ನಾವು ಕಂಡಿದ್ದೇವೆ. ಭಾರತದ ಫುಟ್ಬಾಲ್​ ತಂಡದ ನಾಯಕ ಸುನಿಲ್​ ಛೆಟ್ರಿಗೆ ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಅವರನ್ನು ತಳ್ಳಿ ಅವಮಾನ ಮಾಡಿದ್ದರು. ಈ ವಿಡಿಯೋ ವೈರಲ್​ ಕೂಡ ಆಗಿತ್ತು. ಇದೀಗ ಇದನ್ನೂ ಮೀರಿದ ಮತ್ತೊಂದು ಇಡೀ ಭಾರತವೇ ತಲೆ ತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಸ್ಥಳದ ಕೊರತೆಯಿಂದಾಗಿ ಜ್ಯೂನಿಯರ್​ ಕಬ್ಬಡ್ಡಿ ಆಟಗಾರರಿಗೆ ಶೌಚಾಲಯದ ಒಳಗೆ ಆಹಾರವನ್ನು ನೀಡಲಾಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಇದು ಉತ್ತರ ಪ್ರದೇಶದ ಸಹರಾನ್​ಪುರ ಜಿಲ್ಲೆಯಲ್ಲಿ ನಡೆದ ಘಟನೆಯಾಗಿದೆ. ಇಲ್ಲಿ ರಾಜ್ಯ ಮಟ್ಟದ ಅಂಡರ್​ 17 ಬಾಲಕಿಯರ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಸಹರಾನ್​ಪುರದ ಕ್ರೀಡಾಧಿಕಾರಿ ಅನಿಮೇಶ್​ ಸಕ್ಸೇನಾ ಈ ವಿಚಾರವಾಗಿ ಮಾತನಾಡಿದ್ದು ಈ ಎಲ್ಲಾ ಆರೋಪಗಳು ಆಧಾರ ರಹಿತವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ನಾವು ಕಬ್ಬಡ್ಡಿ ಆಟಗಾರರಿಗೆ ಗುಣಮಟ್ಟದ ಆಹಾರವನ್ನು ನೀಡಿದ್ದೇವೆ ಎಂದು ವಾದಿಸಿದ್ದಾರೆ. ಆದರೆ ಈ ಸಂಬಂಧ ಆಟಗಾರರು ದೂರು ನೀಡಿದ ಬಳಿಕ ಅಡುಗೆಗಾರರಿಗೆ ಛೀಮಾರಿ ಹಾಕಿದ ಸಕ್ಸೇನಾ, ಜಾಗದ ಕೊರತೆಯಿಂದಾಗಿ ಸ್ಟೇಡಿಯಂ ಪೂಲ್​ನಲ್ಲಿ ಈ ರೀತಿ ಅಡುಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.


ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯುತ್ತಿತ್ತು. ಹಾಗೂ ಆಟಗಾರರಿಗೆ ಊಟವನ್ನೂ ಬಡಿಸಲಾಗುತ್ತಿತ್ತು. ಶೌಚಾಲಯದಲ್ಲಿ ಕೆಲವು ಸಮಸ್ಯೆಗಳು ಕಂಡು ಬಂದಿದೆ. ಈ ಸಂಬಂಧ ಡಿಎಂ ಸಾಹಿಬ್​ ನನ್ನನ್ನು ತನಿಖೆ ನಡೆಸುವಂತೆ ನಿಯೋಜಿಸಿದ್ದಾರೆ. ಒಂದು ದಿನದಲ್ಲಿ ಈ ಸಂಬಂಧ ವರದಿ ನೀಡುವಂತೆ ಕೇಳಲಾಗಿದೆ. ನಾನು ಈ ಸಂಬಂಧ ಸೂಕ್ತ ತನಿಖೆ ನಡೆಸಲಿದ್ದೇನೆ. ಯಾವುದೇ ಸತ್ಯ ಬೆಳಕಿಗೆ ಬಂದರೂ ನಾನು ಕೂಡಲೇ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತೇನೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್​​ ರಜನೀಶ್​ ಕುಮಾರ್ ಮಿಶ್ರಾ ಹೇಳಿದ್ದಾರೆ.

ಇದನ್ನು ಓದಿ : Shivamogga police:ಶಿವಮೊಗ್ಗದಲ್ಲಿ ಐಸಿಸ್​ ಚಟುವಟಿಕೆ : ಇಬ್ಬರು ಶಂಕಿತ ಉಗ್ರರ ಬಂಧನ, ಮತ್ತೋರ್ವನಿಗಾಗಿ ಶೋಧ

ಇದನ್ನೂ ಓದಿ : KSP Constable Recruitment 2022 : ಕರ್ನಾಟಕ ರಾಜ್ಯ ಪೋಲೀಸ್‌ ಇಲಾಖೆ; 3000ಕ್ಕೂ ಹೆಚ್ಚು ಕಾನಸ್ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Kabaddi Players Served Food in Toilet; SHOCKING Video Goes Viral

Comments are closed.