Shocking Video :ಮೊಬೈಲ್​ ಆಸೆಗಾಗಿ ಮಹಿಳೆ ಮೇಲೆ ದೌರ್ಜನ್ಯ..! ನಡುರಸ್ತೆಯಲ್ಲಿ ಮಹಿಳೆಯನ್ನು ಎಳೆದಾಡಿದ ಪಾಪಿಗಳು..!

Shocking Video : ದೇಶದಲ್ಲಿ ಮಹಿಳೆಯರ ಸುರಕ್ಷತೆಯನ್ನೇ ಗಮನದಲ್ಲಿಟ್ಟುಕ್ಕೊಂಡು ಸಾಕಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಆದರೆ ಈ ಎಲ್ಲಾ ಕಾನೂನುಗಳು ಇದ್ದರೂ ಸಹ ಮಹಿಳೆಯರು ದೇಶದಲ್ಲಿ ಸಂಪೂರ್ಣ ಸುರಕ್ಷಿತರಾಗಿ ಇದ್ದಾರಾ ಎಂದು ಕೇಳಿದರೆ ಇದಕ್ಕೆ ಹೌದು ಎಂದು ಉತ್ತರ ನೀಡುವುದು ತುಂಬಾನೇ ಕಷ್ಟ. ಇದೇ ಮಾತಿಗೆ ಪುಷ್ಠಿ ನೀಡುವಂತಹ ಬೆಚ್ಚಿ ಬೀಳಿಸುವ ಘಟನೆಯೊಂದು ( Snatchers Dragging Woman )ರಾಷ್ಟ್ರ ರಾಜಧಾನಿ ದೆಹಲಿಯ ಶಾಲಿಮಾರ್ ಬಾಗ್​ ಪ್ರದೇಶದಲ್ಲಿ ನಡೆದಿದೆ.

ಈಗಂತೂ ಎಲ್ಲೆಂದರಲ್ಲಿ ಮೊಬೈಲ್​ಕಳ್ಳರು, ಸರಗಳ್ಳರ ಸಂಖ್ಯೆಯೇ ಹೆಚ್ಚಾಗಿದೆ. ಶಾಲಿಮಾರ್​ ಬಾಗ್​ ಎಂಬಲ್ಲಿ ಸಹ ಮಹಿಳೆಯ ಕೈನಿಂದ ಮೊಬೈಲ್​ ಕಸಿದುಕೊಳ್ಳಲು ಮುಂದಾದ ಇಬ್ಬರು ಕಳ್ಳರು ಆಕೆಯನ್ನು ಎಳೆದಾಡಿದ ಅಮಾನವೀಯ ಘಟನೆ ವರದಿಯಾಗಿದೆ. ಸ್ಕೂಟಿ ಮೇಲೆ ಬಂದ ಇಬ್ಬರು ಕಳ್ಳರು ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯಿಂದ ಮೊಬೈಲ್​ ಕಸಿಯಲು ಮುಂದಾಗಿದ್ದಾರೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಸ್ಕೂಟಿ ಸವಾರಿ ಮಾಡುತ್ತಿದ್ದ ಆರೋಪಿಯು ಆಕೆಯನ್ನು 200 ಮೀಟರ್​ವರೆಗೆ ಎಳೆದಿದ್ದಾನೆ.

ಸ್ಕೂಟಿ ಜೊತೆಯಲ್ಲಿ ಬಂದ ಮಹಿಳೆಯನ್ನು ನಡುರಸ್ತೆಯಲ್ಲಿ ಬಿಸಾಡಿ ಕಳ್ಳರು ಎಸ್ಕೇಪ್​ ಆಗಿದ್ದಾರೆ. ಸ್ಕೂಟಿಯಿಂದ ಮಹಿಳೆ ಬೀಳುವುದು ಗಮನಕ್ಕೆ ಬರುತ್ತಿದ್ದಂತೆಯೇ ಸಾರ್ವಜನಿಕರು ಜಮಾಯಿಸಿದ್ದಾರೆ. ರಸ್ತೆಯಲ್ಲಿ ವಾಹನ ಸವಾರಿ ಮಾಡುತ್ತಿದ್ದವರೂ ಸಹ ವಾಹನವನ್ನು ನಿಲ್ಲಿಸಿ ಮಹಿಳೆಯತ್ತ ಬಂದಿದ್ದಾರೆ. ಈ ಶಾಕಿಂಗ್​ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದ್ದು ಜನತೆ ಆಘಾತ ಹೊರಹಾಕ್ತಿದ್ದಾರೆ. ಗಾಯಗೊಂಡ ಮಹಿಳೆಯು ದೆಹಲಿ ಫೋರ್ಟಿಸ್​ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು ಇದೀಗ ಅದೇ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

ಪ್ರೀತಿಯಲ್ಲಿ ಹೆಚ್ಚಿದ ಅಂತರ; ಪ್ರಿಯತಮೆಯಿಂದಲೇ ಪ್ರಿಯತಮನ ಮೇಲೆ ಫೈರಿಂಗ್​..!

ಪ್ರೀತಿ ಮಾಯೆ ಹುಷಾರು ಅಂತಾರೆ. ಈ ಮಾತು ನಿಜ ಕೂಡ ಹೌದು. ಪ್ರೀತಿಯಲ್ಲಿ ಕೊಂಚ ಯಾಮಾರಿದ್ರೂ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿರುವ ಪ್ರಕರಣವೊಂದರಲ್ಲಿ ಸ್ವತಃ ಪ್ರಿಯತಮೆಯೇ ತನ್ನ ಪ್ರಿಯತಮನನ್ನು ಕೊಲೆ ಮಾಡಲು ಮುಂದಾಗಿದ್ದಾಳೆ.

ಹೌದು..! ಬಾಯ್​ಫ್ರೆಂಡ್​ ತನ್ನನ್ನು ಮೊದಲಿನಂತೆ ಪ್ರೀತಿಸುತ್ತಿಲ್ಲ ಎಂದು ಮನನೊಂದ ಯುವತಿಯು ಆತನ ಫೈರಿಂಗ್​ ನಡೆಸಿದ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ಕಾಟ್ವಾ ಪೊಲೀಸ್​ ಠಾಣಾ ವ್ಯಾಪ್ತಿ ಕೇಶಿಯಾ ಎಂಬಲ್ಲಿ ನಡೆದಿದೆ. ಅಂದಹಾಗೆ ಇವರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಇಬ್ಬರಿಗೂ ಈಗ 22 ವರ್ಷ ವಯಸ್ಸು. ಬಾಯ್​ಫ್ರೆಂಡ್​ ತನ್ನ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದಾನೆ ಎಂಬ ಕೊರಗು ಪ್ರಿಯತಮೆಗಿತ್ತು ಎನ್ನಲಾಗಿದೆ.

ಒಂದು ದಿನ ತನ್ನ ಪ್ರಿಯತಮನನ್ನು ಭೇಟಿಯಾಗಲೆಂದು ಆತನನ್ನು ಹತ್ತಿರದ ಸರ್ಕಸ್​ ಮೈದಾನಕ್ಕೆ ಬರುವಂತೆ ಹೇಳಿದ್ದಾಳೆ. ಪ್ರಿಯತಮೆ ಹೇಳಿದ ಮಾತಿಗೆ ಬೆಲೆ ಕೊಟ್ಟು ಆತ ಕೂಡ ಸ್ಥಳಕ್ಕೆ ಆಗಮಿಸಿದ್ದಾನೆ. ಪ್ರಿಯತಮನನ್ನು ಜೋರಾಗಿ ತಬ್ಬಿಕೊಂಡ ಈಕೆ ಬಳಿಕ ಆತನಿಗೆ ಚುಂಬಿಸಿದ್ದಾಳೆ. ಇಷ್ಟು ಸಾಲದು ಎಂಬಂತೆ ಆತನ ಜೊತೆ ಸಿಗರೇಟ್​ ಕೂಡ ಸೇದಿದ್ದಾಳೆ.

ಆದರೆ ಇಷ್ಟಕ್ಕೆ ಕತೆ ಮುಗಿಯಲಿಲ್ಲ. ಆತನಿಗೆ ಚುಂಬಿಸಿದ ಬಳಿಕ ಬ್ಯಾಗಿನಿಂದ ಪಿಸ್ತೂಲ್​ ಹೊರತೆಗೆದ ಪ್ರಿಯತಮೆ ಆತನ ಮೇಲೆ ಫೈರಿಂಗ್​ ನಡೆಸಿದ್ದಾಳೆ. ಅದೃಷ್ಟವಶಾತ್​ ಗುಂಡು ಯುವಕನ ಹೊಟ್ಟೆ ತರುಚಿಕೊಂಡು ಹೋಗಲಷ್ಟೇ ಶಕ್ತವಾಗಿದೆ. ಹೀಗಾಗಿ ಆತನ ಬದುಕುಳಿದಿದ್ದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾನೆ. ಯುವಕನ ಮೇಲೆ ಫೈರಿಂಗ್​ ನಡೆಸಿ ಎಸ್ಕೇಪ್​ ಆಗಿದ್ದ ಯುವತಿಯ ಹುಡುಕಾಟ ಆರಂಭಿಸಿದ ಪೊಲೀಸರು ಕೊನೆಗೂ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆಯ ವೇಳೆ ಯುವತಿಯು ಕೊಲೆ ಪ್ರಯತ್ನದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾಳೆ. ತನಿಖೆಗೆ ಚುರುಕು ನೀಡಲಾಗಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : woman shoots at boyfriend : ಪ್ರೀತಿಯಲ್ಲಿ ಹೆಚ್ಚಿದ ಅಂತರ; ಪ್ರಿಯತಮೆಯಿಂದಲೇ ಪ್ರಿಯತಮನ ಮೇಲೆ ಫೈರಿಂಗ್​..!

ಇದನ್ನೂ ಓದಿ : Woman consumes sanitiser : ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನ: ಮಹಿಳೆಯನ್ನು ಖಾಕಿ ರಕ್ಷಿಸಿದ ಪರಿಯೇ ರೋಚಕ

Shocking Video Shows Snatchers Dragging Woman 200 Metres in Delhi’s Shalimar Bagh

Comments are closed.