Stampede at Roadshow: ಆಂಧ್ರದ ನೆಲ್ಲೂರಿನಲ್ಲಿ ರೋಡ್‌ ಶೋ ವೇಳೆ ಕಾಲ್ತುಳಿತ: 7 ಸಾವು, ಹಲವರಿಗೆ ಗಾಯ

ಹೈದರಾಬಾದ್:‌ (Stampede at Roadshow) ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಬುಧವಾರ ಚಂದ್ರಬಾಬು ನಾಯ್ಡು ಅವರ ರೋಡ್‌ ಶೋನಲ್ಲಿ ಕನಿಷ್ಠ ಏಳು ಮಂದಿ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ನಾಯ್ಡು ಅವರ ಬೆಂಗಾವಲು ಪಡೆ ನೆಲ್ಲೂರು ಪ್ರದೇಶವನ್ನು ಹಾದುಹೋಗುತ್ತಿರುವ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ (Stampede at Roadshow) ರನ್ನು ಡಿ ರವೀಂದ್ರಬಾಬು, ಕೆ ಯಾನಾಡಿ, ವೈ ವಿಜಯಾ, ಕೆ ರಾಜಾ, ಎಂ ಚಿನಕೊಂಡಯ್ಯ ಮತ್ತು ಪುರುಷೋತ್ತಮ್ ಎಂದು ಗುರುತಿಸಲಾಗಿದೆ. ರೋಡ್‌ ಶೋ ವೇಳೆ ಅತಿಯಾದ ಜನಸಂದಣಿಯಿಂದ ಉಸಿರುಗಟ್ಟಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಹಾಗೇ ಇಬ್ಬರು ಟಿಡಿಪಿ ಕಾರ್ಯಕರ್ತರು ಚಿಕಿತ್ಸೆ ಪಡೆಯುತ್ತಿರುವ ವೇಳೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ನೆಲ್ಲೂರು ಜಿಲ್ಲೆಯ ಕಂದುಕೂರಿನಲ್ಲಿ ಟಿಡಿಪಿ ನಾಯಕ ಎನ್‌ ಚಂದ್ರಬಾಬು ನಾಯ್ಡು ಅವರು ನಡೆಸುತ್ತಿದ್ದ ಸಾರ್ವಜನಿಕ ಸಭೆಯಲ್ಲಿ ಜನಸಂದಣಿ ಹೆಚ್ಚಾಗಿದ್ದು, ಉಸಿರುಗಟ್ಟುವಿಕೆ ಹಾಗೂ ಕಾಲ್ತುಳಿತಕ್ಕೆ ಒಳಗಾಗಿ ಏಳು ಮಂದಿ ಟಿಡಿಪಿ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ವರದಿಗಳ ಪ್ರಕಾರ ಹೆಚ್ಚು ಜನಸಂದಣಿಯಿಂದಾಗಿ ಬಹಳಷ್ಟು ಜನರು ಚರಂಡಿಗೆ ಬಿದ್ದಿದ್ದಾರೆ. ಇದರಿಂದಾಗಿ ಸಾವು ನೋವುಗಳು ಹೆಚ್ಚಾಗಿವೆ. ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಸಂತ್ರಸ್ತರ ಸಾವಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ : 17 year old girl murdered: ಮನೆಯ ಮುಂಭಾಗದಲ್ಲೇ ಕತ್ತು ಸೀಳಿ 17 ವರ್ಷದ ಬಾಲಕಿಯ ಹತ್ಯೆ; ಪ್ರಿಯಕರ ಅರೆಸ್ಟ್

ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು, ” ಟಿಡಿಪಿ ಕಾರ್ಯಕರ್ತರ ಸಾವು ನಮ್ಮ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.” ಎಂದು ಟ್ವಿಟ್ಟರ್‌ ನಲ್ಲಿ ಬರೆದುಕೊಂಡಿದ್ದಾರೆ.

At least seven people were trampled to death during Chandrababu Naidu’s road show in Andhra Pradesh’s Nellore district on Wednesday. While Naidu’s convoy was passing through Nellore area, a stampede took place in which seven people lost their lives and many others were injured.

Comments are closed.