ICC Women’s T20 World Cup : ಐಸಿಸಿ ಮಹಿಳಾ ಟಿ20 ವಿಶ್ವಕಪ್: ಭಾರತ ತಂಡ ಪ್ರಕಟ, ಟೀಮ್ ಇಂಡಿಯಾದಲ್ಲಿ ಏಕೈಕ ಕನ್ನಡತಿ

ಬೆಂಗಳೂರು: ಮುಂಬರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ (ICC Women’s T20 World Cup) ಟೂರ್ನಿಗೆ ಹರ್ಮನ್ ಪ್ರೀತ್ ಕೌರ್ ಸಾರಥ್ಯದ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ತಂಡದಲ್ಲಿ ಕರ್ನಾಟಕದ ಏಕೈಕ ಆಟಗಾರ್ತಿಯಾಗಿ ರಾಜೇಶ್ವರಿ ಗಾಯಕ್ವಾಡ್ ಸ್ಥಾನ ಪಡೆದಿದ್ದಾರೆ.ಮಹಿಳಾ ಟಿ20 ವಿಶ್ವಕಪ್ ಮುಂದಿನ ಜನವರಿ 10ರಂದು ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿದ್ದು, ಜನವರಿ 12ರಂದು ಕೇಪ್’ಟೌನ್’ನಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಟೂರ್ನಿಯಲ್ಲಿ ಭಾರತ ತಂಡ ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್-2ರಲ್ಲಿ ಸ್ಥಾನ ಪಡೆದಿದೆ. ಎರಡು ಗ್ರೂಪ್’ಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಫೈನಲ್ ಪಂದ್ಯ ಫೆಬ್ರವರಿ 26ರಂದು ನಡೆಯಲಿದೆ.ವಿಶ್ವಕಪ್ ಟೂರ್ನಿಗೂ ಮುನ್ನ ಜನವರಿ 19ರಂದಿಂದ ಫೆಬ್ರವರಿ 2ರವರೆಗೆ ದಕ್ಷಿಣ ಆಫ್ರಿಕಾದಲ್ಲೇ ನಡೆಯಲಿರುವ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ವೆಸ್ಚ್ ಇಂಡೀಸ್ ತಂಡಗಳನ್ನೊಳಗೊಂಡ ತ್ರಿಕೋನ ಟಿ20 ಸರಣಿಗೂ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ (India’s squad for ICC Women’s T20 World Cup 2023):
ಹರ್ಮನ್’ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶೆಫಾಲಿ ವರ್ಮಾ, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ಜೆಮೈಮಾ ರಾಡ್ರಿಗ್ಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾನಿ, ಪೂಜಾ ವಸ್ತ್ರಕಾರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.

ಮೀಸಲು ಆಟಗಾರ್ತಿಯರು: ಸಬ್ಬಿನೇನಿ ಮೇಘನಾ, ಸ್ನೇಹ್ ರಾಣಾ, ಮೇಘನಾ ಸಿಂಗ್

ICC Women’s T20 World Cup : ಐಸಿಸಿ ಮಹಿಳಾ ಟಿ20 ವಿಶ್ವಕಪ್: ಭಾರತದ ಲೀಗ್ ಪಂದ್ಯಗಳ ವೇಳಾಪಟ್ಟಿ :

  • ಫೆಬ್ರವರಿ 12 Vs ಪಾಕಿಸ್ತಾನ (ಕೇಪ್ ಟೌನ್)
  • ಫೆಬ್ರವರಿ 15 Vs ವೆಸ್ಟ್ ಇಂಡೀಸ್ (ಕೇಪ್ ಟೌನ್)
  • ಫೆಬ್ರವರಿ 18 Vs ಇಂಗ್ಲೆಂಡ್ (ಪೋರ್ಟ್ ಎಲಿಜಬೆತ್)
  • ಫೆಬ್ರವರಿ 10 Vs ಐರ್ಲೆಂಡ್ (ಪೋರ್ಟ್ ಎಲಿಜಬೆತ್)

ಇದನ್ನೂ ಓದಿ : Manish Pandey double century: ನಾಯಕ್ವತರಿಂದ ಕೆಳಗಿಳಿದ ನಂತರ ಪವರ್ ತೋರಿಸಿದ ಪಾಂಡೆ, ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬರದ ದ್ವಿಶತಕ

ಇದನ್ನೂ ಓದಿ : Ziva Dhoni : ತನ್ನ ಪುಟ್ಟ ಅಭಿಮಾನಿ ಜೀವಾ ಧೋನಿಗೆ ಮೆಸ್ಸಿ ನೀಡಿದ್ರು ಅತ್ಯಂತ ಅಮೂಲ್ಯವಾದ ಗಿಫ್ಟ್: ಏನದು ಗೊತ್ತಾ?

ಇದನ್ನೂ ಓದಿ : Rohit Rahul Kohli out of T20 team: ಟಿ20 ತಂಡಕ್ಕೆ ಮೇಜರ್ ಸರ್ಜರಿ; ತ್ರಿಮೂರ್ತಿಗಳು ಇನ್ನು ಟಿ20ಯಲ್ಲಿ ಕಾಣಿಸಿಕೊಳ್ಳುವುದು ಡೌಟ್!

ತ್ರಿಕೋನ ಟಿ20 ಸರಣಿಗೆ ಭಾರತ ಮಹಿಳಾ ತಂಡ (India’s squad for Tri-series):
ಹರ್ಮನ್’ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಜೆಮೈಮಾ ರಾಡ್ರಿಗ್ಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಠಾಕೂರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಅಮನ್’ಜೋತ್ ಕೌರ್, ಪೂಜಾ ವಸ್ತ್ರಕಾರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ಸಬ್ಬಿನೇನಿ ಮೇಘನಾ, ಸ್ನೇಹ್ ರಾಣಾ.

ICC Women’s T20 World Cup: India Team Announced, Team India’s only spectacle

Comments are closed.