Student Mysterious murder: ಮೂರನೇ ತರಗತಿ ವಿದ್ಯಾರ್ಥಿನಿಯ ನಿಗೂಢ ಹತ್ಯೆ: ಓರ್ವ ಅರೆಸ್ಟ್

ಹೊಸದಿಲ್ಲಿ: (Student Mysterious murder) ಒಂಬತ್ತು ವರ್ಷದ ಬಾಲಕಿಯನ್ನು ಅಮಾನುಷವಾಗಿ ಹತ್ಯೆ ಮಾಡಲಾದ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿನ ಗೋಧಿ ಗದ್ದೆಯಲ್ಲಿ ನಡೆದಿದೆ. ಪಿಲಿಭಿತ್‌ನ ಅಮರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಈ ಘಟನೆ ನಡೆದಿದೆ.

ವರದಿಯ ಪ್ರಕಾರ, ಮೂರನೇ ತರಗತಿ ವಿದ್ಯಾರ್ಥಿನಿಯನ್ನು ಹತ್ಯೆ (Student Mysterious murder) ಮಾಡಿ ಆಕೆಯ ಹೊಟ್ಟೆಯನ್ನು ಕತ್ತರಿಸಿ, ಒಳಾಂಗಗಳನ್ನು ಸುತ್ತಲೂ ಹರಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಂದೆ ಅನಿಸ್ ಅಹ್ಮದ್ ಮಾತನಾಡಿ, ಶುಕ್ರವಾರ ರಾತ್ರಿ ತನ್ನ ಮಗಳು ತನ್ನ ಚಿಕ್ಕಪ್ಪನೊಂದಿಗೆ ಹತ್ತಿರದ ಹಳ್ಳಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿದ್ದಳು. ನಂತರ ಆಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ಆಕೆಯ ಮನೆಯವರು ಬಾಲಕಿಯ ಹುಡುಕಾಟ ನಡೆಸಿದ್ದು, ಶನಿವಾರ ಬೆಳಿಗ್ಗೆ 6 ಗಂಟೆಗೆ ಗೋಧಿ ಫೀಲ್ಡ್‌ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದಿದ್ದಾರೆ. ಬಾಲಕಿ ಪತ್ತೆಯಾದ ಸಮಯದಲ್ಲಿ ಆಕೆ ಉಸಿರಾಡುತ್ತಿದ್ದನ್ನು ಕಂಡು ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದೇನೆ ಎಂದು ಅನಿಸ್ ಅಹ್ಮದ್ ಹೇಳಿದ್ದಾರೆ. ಆದರೆ, ಆಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ.

ಆಂಬ್ಯುಲೆನ್ಸ್‌ ನಲ್ಲಿ ಆಕೆಯನ್ನು ಕರೆದೊಯ್ಯುತ್ತಿರುವ ವೇಳೆ ಆಕೆಯ ಮೇಲೆ ಹಲ್ಲೆ ಮಾಡಿದವರ ಬಗ್ಗೆ ಹೇಳಲು ಆಕೆ ಪ್ರಯತ್ನಪಟ್ಟಿದ್ದಳು. ಆದರೆ ಅಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ಮೃತ ಬಾಲಕಿಯ ತಂದೆ ವರದಿಯಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ ಐಆರ್‌ ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮದ ಶಂಕಿತ ಆರೋಪಿ ಶಕಿಲ್‌ ವೈಸ್ತವ್‌ ನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ : Current shock: ಪಾರಿವಾಳ ಹಿಡಿಯಲು ಹೋದವರಿಗೆ ಕರೆಂಟ್‌ ಶಾಕ್‌: ಬಾಲಕ ಸಾವು

ಇದನ್ನೂ ಓದಿ : Murder mystery: ಸೊಸೆಯ ಮೇಲೆ ಕಣ್ಣು ಹಾಕಿದ್ದ ಮಾವ ಹೆಣವಾದ; ಸುಪಾರಿ ಕೊಟ್ಟು ಬೀಗರಿಂದಲೇ ಮರ್ಡರ್..!

ಇದನ್ನೂ ಓದಿ : Gang war: ದರೋಡೆಕೋರ ರಾಜು ಥೇತ್ ಗೆ ಗುಂಡಿಕ್ಕಿ ಹತ್ಯೆ

ಇದನ್ನೂ ಓದಿ : Wall writing: ಶಿವಮೊಗ್ಗದಲ್ಲಿ ವಿವಾದಾತ್ಮಕ ಗೋಡೆಬರಹ ಪತ್ತೆ

“ಕೊಲೆಯಾದ ಸ್ಥಳದಿಂದ 500 ಸುಮಾರು 500 ಮೀಟರ್ ದೂರದಲ್ಲಿರುವ ಹೊಲದಿಂದ ರಕ್ತದ ಕಲೆಯ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಫೋರೆನ್ಸಿಕ್ ತಂಡವು ಎಲ್ಲಾ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಪ್ರಭು ಹೇಳಿದ್ದಾರೆ.

(Student Mysterious murder) The brutal murder of a nine-year-old girl took place in a wheat field in Pilibhit, Uttar Pradesh. The incident took place on Saturday under Amaria police station in Pilibhit.

Comments are closed.