Mayank Agarwal – Manish Pandey : ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಮೂಲ ಬೆಲೆ ರೂ. 1 ಕೋಟಿ

ಬೆಂಗಳೂರು : ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಮಾಜಿ ನಾಯಕ ಮನೀಶ್ ಪಾಂಡೆ (Mayank Agarwal – Manish Pandey) ಐಪಿಎಲ್ ಹರಾಜಿನಲ್ಲಿ (IPL Auction) 1 ಕೋಟಿ ರೂ.ಗಳ ಮೂಲ ಬೆಲೆ ನಿಗದಿ ಪಡಿಸಿಕೊಂಡಿದ್ದಾರೆ.

ಐಪಿಎಲ್-2023ರ ಟೂರ್ನಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಕಳೆದ ಸಾಲಿನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಫ್ರಾಂಚೈಸಿ ತಂಡದಿಂದ ಕೈ ಬಿಟ್ಟಿದೆ. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಮನೀಶ್ ಪಾಂಡೆಯವರನ್ನು ತಂಡದಿಂದ ರಿಲೀಸ್ ಮಾಡಿದ್ದು, ಇಬ್ಬರೂ ಈ ಬಾರಿಯ ಹರಾಜಿಗೆ ಲಭ್ಯರಿದ್ದಾರೆ. ಇಬ್ಬರೂ 1 ಕೋಟಿ ಮೂಲ ಬೆಲೆಯನ್ನು ನಿಗದಿ ಪಡಿಸಿಕೊಂಡು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇಂಗ್ಲೆಂಡ್’ನ ಸ್ಟಾರ್ ಆಲ್ರೌಂಡರ್’ಗಳಾದ ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರನ್ ಐಪಿಎಲ್ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆ ನಿಗದಿ ಪಡಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿದ್ದ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಇಂಗ್ಲೆಂಡ್ ಚಾಂಪಿಯನ್ ಆಗಲು ಕಾರಣರಾಗಿದ್ದರು. ಟಿ20 ವಿಶ್ವಕಪ್’ನಲ್ಲಿ ಸ್ಯಾಮ್ ಕರನ್ ಸರಣಿಶ್ರೇಷ್ಠರಾಗಿ ಮೂಡಿ ಬಂದಿದ್ದರು.

ಐಪಿಎಲ್ ಹರಾಜಿನಲ್ಲಿ ₹2 ಕೋಟಿ ಮೂಲ ಬೆಲೆ:
ಬೆನ್ ಸ್ಟೋಕ್ಸ್, ಸ್ಯಾಮ್ ಕರನ್, ಟಾಮ್ ಬ್ಯಾಂಟನ್, ಕ್ರಿಸ್ ಜೋರ್ಡನ್, ತೈಮಾಲ್ ಮಿಲ್ಸ್, ಫಿಲ್ ಸಾಲ್ಟ್, ಜೇಮಿ ಓವರ್ಟನ್, ಕ್ರೇಗ್ ಓವರ್ಟನ್, ಆದಿಲ್ ರಶೀದ್, ನೇಥನ್ ಕುಲ್ಟರ್’ನೈಲ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಕ್ರಿಸ್ ಲಿನ್, ಕೇನ್ ವಿಲಿಯಮ್ಸನ್, ಆ್ಯಡಂ ಮಿಲ್ನ್, ಜೇಮ್ಸ್ ನೀಶಮ್, ರಾಲೀ ರೊಸೋ, ರಾಸೀ ವಾನ್ ಡರ್ ಡ್ಯುಸೆನ್, ಏಂಜಲೊ ಮ್ಯಾಥ್ಯೂಸ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್.

ಐಪಿಎಲ್ ಹರಾಜಿನಲ್ಲಿ ₹1.5 ಕೋಟಿ ಮೂಲ ಬೆಲೆ:
ಶಾನ್ ಅಬಾಟ್, ರೀಲೀ ಮೆರಿಡಿತ್, ಝಾಯ್ ರಿಚರ್ಡ್ಸನ್, ಆ್ಯಡಂ ಜಾಂಪ, ಶಾಕಿಬ್ ಅಲ್ ಹಸನ್, ಹ್ಯಾರಿ ಬ್ರೂಕ್, ವಿಲ್ ಜೇಕ್ಸ್, ಡಾವಿಡ್ ಮಲಾನ್, ಜೇಸನ್ ರಾಯ್, ಶೆರ್ಫಾನ್ ರುದರ್’ಫೋರ್ಡ್.

ಇದನ್ನೂ ಓದಿ : Mitchell Starc : ಅಪ್ಪ-ಮಗನನ್ನು ಔಟ್ ಮಾಡಿ ವಿಶಿಷ್ಠ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್

ಇದನ್ನೂ ಓದಿ : Ricky Ponting: ‘ನನ್ನ ಜೀವನದ ಅತ್ಯಂತ ಭಯಾನಕ ಕ್ಷಣ’; ಎದೆನೋವಿನಿಂದ ಚೇತರಿಸಿಕೊಂಡ ಬಳಿಕ ರಿಕಿ ಪಾಂಟಿಂಗ್ ಅನುಭವ ಬಿಚ್ಚಿಟ್ಟಿದ್ದು ಹೀಗೆ ..

ಇದನ್ನೂ ಓದಿ : India tour of Banglaesh: ನಾಳೆ ಭಾರತ Vs ಬಾಂಗ್ಲಾ ಮೊದಲ ಏಕದಿನ: ಶಮಿ ಔಟ್, ಉಮ್ರಾನ್ ಇನ್; ಇಲ್ಲಿದೆ ಮ್ಯಾಚ್ ಡೀಟೇಲ್ಸ್

ಐಪಿಎಲ್ ಹರಾಜಿನಲ್ಲಿ ₹1 ಕೋಟಿ ಮೂಲ ಬೆಲೆ:
ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕೇದಾರ್ ಜಾಧವ್, ಮೊಹಮ್ಮದ್ ನಬಿ, ಮುಜೀಬ್ ಉರ್ ರಹ್ಮಾನ್, ಮೊಯ್ಸೆಸ್ ಹೆನ್ರಿಕ್ಸ್, ಆಂಡ್ರ್ಯೂ ಟೈ, ಜೋ ರೂಟ್, ಲೂಕ್ ವುಡ್, ಮಿಚೆಲ್ ಬ್ರೇಸ್’ವೆಲ್, ಮಾರ್ಕ್ ಚಾಪ್ನನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡ್ಯಾರಿಲ್ ಮಿಚೆಲ್, ಹೆನ್ರಿಕ್ ಕ್ಲಾಸೆನ್, ತಬ್ರೈಜ್ ಶಮ್ಸಿ, ಕುಶಾಲ್ ಪೆರೇರ, ರಾಸ್ಟನ್ ಚೇಸ್, ರಖೀಮ್ ಕಾರ್ನ್’ವಾಲ್, ಶಾಯ್ ಹೋಪ್, ಅಕೀಲ್ ಹೊಸೇನ್, ಡೇವಿಡ್ ವೀಸ್.

Mayank Agarwal, Manish Pandey Base Price Rs.1 Crore

Comments are closed.