Student raped by Friends: ನರ್ಸಿಂಗ್‌ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸ್ನೇಹಿತರಿಂದಲೇ ಅತ್ಯಾಚಾರ: ಅರೋಪಿಗಳು ಅರೆಸ್ಟ್‌

ಕೊಜಿಕೋಡ್‌ : (Student raped by Friends) ನರ್ಸಿಂಗ್‌ ವಿದ್ಯಾರ್ಥಿನಿಗೆ ಒತ್ತಾಯ ಪೂರ್ವಕವಾಗಿ ಸಾರಾಯಿ ಕುಡಿಸಿ ಆಕೆಯ ಮೇಲೆ ಸ್ನೇಹಿತರೇ ಅತ್ಯಾಚಾರವೆಸಗಿರುವ ಘಟನೆ ಕೇರಳದ ಕೊಜಿಕೋಡ್‌ ನಲ್ಲಿ ನಡೆದಿದೆ. ಬಳಿಕ ಕೊಜಿಕೋಡ್‌ ಕಸಬಾ ಪೊಲೀಸ್‌ ಠಾಣೆಯಲ್ಲಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಎರ್ನಾಕುಲಂ ಮೂಲದ ನರ್ಸಿಂಗ್‌ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತರು ಅವರಿದ್ದ ಬಾಡಿಗೆ ಮನೆಗೆ ಕರೆದಿದ್ದು ನಂತರ ಆಕೆಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ್ದಾರೆ. ಬಳಿಕ ಅವಳು ಮದ್ಯದ ನಶೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆಯ ಬಳಿಕ ಆರೋಪಿ ನರ್ಸಿಂಗ್‌ ವಿದ್ಯಾರ್ಥಿನಿಯನ್ನು ಬಿಟ್ಟು ಆಕೆಯ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದಾದ ಬಳಿಕ ವಿದ್ಯಾರ್ಥಿಗೆ ಪ್ರಜ್ಞೆ ಬಂದಿದ್ದು, ಆಕೆ ಬಳಿಕ ತನ್ನ ಗೆಳತಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ.

ವಿಷಯ ತಿಳಿದ ಆಕೆಯ ಗೆಳತಿ ಸ್ಥಳಕ್ಕೆ ಬಂದು ಆಕೆಯನ್ನು ಕರೆದೊಯ್ದಿದ್ದಾಳೆ. ಇದಾದ ಬಳಿಮ ಆಕೆ ಖಿನ್ನತೆಗೆ ಜಾರಿದ್ದು, ಕಾಲೇಜಿನಲ್ಲಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಳು. ಇದನ್ನು ಗಮನಿಸಿದ ಕಾಲೇಜು ಮಂಡಳಿ ಆಕೆಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದ್ದು, ಇದಾದ ನಂತರ ಆಕೆ ಕೊಜಿಕೋಡ್‌ ಕಸಬಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಘಟನೆಯ ಬಳಿಕ ಪ್ರಕರಣ ದಾಖಲಿಸಿಕೊಂಡ ಕೊಜಿಕೋಡ್‌ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರನ್ನು ಕಸ್ಟಡಿಯಲ್ಲಿರಿಸಲಾಗಿದೆ.

ಇದನ್ನೂ ಓದಿ : Women murder: ಮಹಿಳೆಯ ಕೊಲೆಗೈದು ಫೇಸ್ ಬುಕ್ ಲೈವ್ ಬಂದ ಪಾಗಲ್ ಪ್ರೇಮಿ

ಮಹಿಳಾ ಪೋಲೀಸ್ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗಡಿ ಪಡೆ ಇನ್ಸ್ ಪೆಕ್ಟರ್ ಅಮಾನತು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಿಶನ್‌ಗಂಜ್ ಪ್ರದೇಶದ ಗಡಿ ಔಟ್‌ಪೋಸ್ಟ್‌ನಲ್ಲಿ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಡಿಯಾ ಜಿಲ್ಲೆಯ ಔಟ್‌ಪೋಸ್ಟ್‌ನ ತುಂಗಿ ಗಡಿಯಲ್ಲಿ ನಿಯೋಜಿಸಲಾದ ಇನ್ಸ್‌ಪೆಕ್ಟರ್ ಆವರಣದೊಳಗೆ ಮಹಿಳಾ ಬಿಎಸ್‌ಎಫ್ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರ ಎಸಗಿದ್ದಾರೆ. ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಅವರು ಟ್ವೀಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ಬಿಜೆಪಿ ಬಂಗಾಳ ಘಟಕವು ಇದಕ್ಕೆ ಪ್ರತಿಕ್ರಿಯಿಸುವಂತೆ ಕೇಳಿದೆ.

ಇದನ್ನೂ ಓದಿ : Raping Woman Cop: ಮಹಿಳಾ ಪೋಲೀಸ್ ಮೇಲೆ ಅತ್ಯಾಚಾರ ಆರೋಪ: ಗಡಿ ಪಡೆ ಇನ್ಸ್ ಪೆಕ್ಟರ್ ಅಮಾನತು

ಇದನ್ನೂ ಓದಿ : Couple died: ಆರತಕ್ಷತೆಗೂ ಮೊದಲೇ ಹೆಣವಾದ ನವದಂಪತಿಗಳು

Student raped by Friends: Nursing student raped by friends after drinking alcohol: Accused arrested

Comments are closed.