Women murder: ಮಹಿಳೆಯ ಕೊಲೆಗೈದು ಫೇಸ್ ಬುಕ್ ಲೈವ್ ಬಂದ ಪಾಗಲ್ ಪ್ರೇಮಿ

ಚಾಮರಾಜನಗರ: (Women murder) ಮಹಿಳೆಯೊಬ್ಬಳನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ನಂತರ ಫೇಸ್‌ ಬುಕ್‌ ಲೈವ್‌ ಬಂದು ಗೋಳಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಗಮಲೆ ಎಂಬಲ್ಲಿ ನಡೆದಿದೆ. ಫೇಸ್‌ ಬುಕ್‌ ಲೈವ್‌ ಮಾಡಿ ಗೋಳಾಡಿದ ನಂತರ ತಾನೂ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಈತ ಮಾಡಿದ ಆ ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಹನೂರು ತಾಲೂಕಿನ ನಾಗಮಲೆ ಗ್ರಾಮದ ಲಕ್ಷ್ಮೀ (35 ವರ್ಷ) ಮೃತ ದುರ್ದೈವಿ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮುನಿರಾಜ್‌ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಮೃತ ಮಹಿಳೆ ಲಕ್ಷ್ಮಿ ಮೂಲತಃ ತಮಿಳುನಾಡಿನ ಪೆನ್ನಾಗರಂ ನಿವಾಸಿ. ಕಳೆದ ಏಳು ತಿಂಗಳ ಹಿಂದೆ ನಾಗಮಲೆ ಗ್ರಾಮದ ನಿವಾಸಿ ರಮೇಶ್‌ ಎಂಬಾತ ಮಹಿಳೆಯನ್ನು ವಿವಾಹವಾಗಿ ನಂತರ ಲಕ್ಷ್ಮೀ ಜೊತೆ ನಾಗಮಲೆಯಲ್ಲಿ ವಾಸವಾಗಿದ್ದಾನೆ.

ರಮೇಶ್‌ ಬೇರೆ ಊರಿಗೆ ಹೋಗಿದ್ದ ವೇಳೆ ಬಂದಿದ್ದ ಆರೋಪಿ ಮುನಿರಾಜು ಲಕ್ಷ್ಮಿಯನ್ನು ಕೊಂದು ನಂತರ ತಾನೂ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮೊದಲೇ ಲಕ್ಷ್ಮೀಯನ್ನು ಕೊಲೆ ಮಾಡಿ ನಂತರ ಫೇಸ್‌ ಬುಕ್‌ ಲೈವ್‌ ಮಾಡಿದ ಪಾಗಲ್‌ ಪ್ರೇಮಿ ” ನನ್ನನ್ನು ಕೊಲೆಗಾರನಾಗಿಸಿದೆಯಲ್ಲ ಲಕ್ಷ್ಮೀ, ತಾನೇ ನಿನ್ನನ್ನ ಕೊಲೆ ಮಾಡಿದೆನಲ್ಲಾ, ನಿನ್ನ ರಕ್ತವನ್ನು ಕಾಣಲು ನನಗಾಗುತ್ತಿಲ್ಲ” ಎಂದು ಗೋಳಾಡುತ್ತಾ ವಿಡಿಯೋ ಮಾಡಿದ್ದಾನೆ.

ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಸದ್ಯ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಮೇಲ್ನೋಟಕ್ಕೆ ಈ ಕೃತ್ಯಕ್ಕೆ ಕಾಎಣ ವಿವಾಹೇತರ ಸಂಬಂಧವೇ ಕಾರಣ ಎಂದು ತಿಳಿದುಬಂದಿದೆ.

ಇದನ್ನೂ ಓದಿ : Raping Woman Cop: ಮಹಿಳಾ ಪೋಲೀಸ್ ಮೇಲೆ ಅತ್ಯಾಚಾರ ಆರೋಪ: ಗಡಿ ಪಡೆ ಇನ್ಸ್ ಪೆಕ್ಟರ್ ಅಮಾನತು

ಇದನ್ನೂ ಓದಿ : Couple died: ಆರತಕ್ಷತೆಗೂ ಮೊದಲೇ ಹೆಣವಾದ ನವದಂಪತಿಗಳು

ಇದನ್ನೂ ಓದಿ : Car-truck Accident: ಛತ್ತೀಸ್‌ಗಢದಲ್ಲಿ ಕಾರು-ಟ್ರಕ್ ಢಿಕ್ಕಿ: ತಾಯಿ, ಮಗ ಸೇರಿ ನಾಲ್ವರು ಸಾವು

Women murder: A woman’s killer is a crazy lover who went live on Facebook

Comments are closed.