Students tour bus overturned: ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಪಲ್ಟಿ: ಓರ್ವ ಸಾವು, 43 ಮಂದಿಗೆ ಗಾಯ

ಕೇರಳ: (Students tour bus overturned) ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಕರೆದೊಯ್ಯುತಿದ್ದ ಬಸ್‌ ಕಮರಿಗೆ ಉರಳಿದ್ದು, ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾರೆ ಹಾಗೂ ನಲವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಮುನಿಯಾರ ಬಳಿಯಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮಿಲ್ಹಾಜ್‌ ಎಂದು ಗುರುತಿಸಲಾಗಿದೆ.

ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಕರೆದೊಯ್ದಿದ್ದ ಬಸ್‌ ಮಲಪ್ಪುರಂನಿಂದ ಹಿಂತಿರುಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದಿದೆ(Students tour bus overturned). ಮಧ್ಯರಾತ್ರಿ ಸರಿಸುಮಾರು 1:15ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಕಾರಣ ಈ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಮೃತ ವ್ಯಕ್ತಿ ಮಿಲ್ಹಾಜ್‌ ಅಪಘಾತದ ನಂತರದಲ್ಲಿ ಕಮರಿಗೆ ಉರುಳಿದ್ದ ಬಸ್‌ ಅಡಿಯಲ್ಲಿ ದೀರ್ಘಕಾಲದ ವರೆಗೂ ಸಿಲುಕಿಕೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎನ್ನಲಾಗಿದೆ. ಇನ್ನೂ ಅಪಘಾತದಲ್ಲಿ ಗಾಯಗೊಂಡ ನಲವತ್ತಮೂರು ಮಂದಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿಗಳ ಪ್ರಕಾರ, ಅಪಘಾತ ಸಂಭವಿಸಿದ ಬಸ್‌ ನಲ್ಲಿ ಒಟ್ಟು 41 ವಿದ್ಯಾರ್ಥಿಗಳು ಮತ್ತು 3 ಬಸ್ ಸಿಬ್ಬಂದಿಗಳು ಇದ್ದರು ಎಂದು ಎಂದು ವರದಿಗಳು ತಿಳಿಸಿವೆ.

ನಾಗರಹೊಳೆ ಉದ್ಯಾನವನದಲ್ಲಿ ಕಾಡಾನೆ ದಾಳಿ: ವಾಚರ್‌ ಸಾವು

ಮೈಸೂರು: ಈಗಾಗಲೇ ಮೈಸೂರು ಕಾಡಾನೆಗಳ ದಾಳಿಗೆ ತತ್ತರಿಸಿ ಹೋಗಿದೆ. ಈಗಾಗಲೇ ಕಾಡಾನೆ ದಾಳಿಗೆ ಹಲವರು ಪ್ರಾಣ ಕಳೆದುಕೊಂಡಿದ್ದು, ಕೆಲವು ಕಡೆ ರೈತರು ಬೆಳೆದ ಬೆಳೆ ಪೂರ್ತಿಯಾಗಿ ಕಾಡಾನೆಗಳ ಹಾವಳಿಗೆ ನಾಶವಾಗಿದೆ. ಈ ಮಧ್ಯೆ ಕಾಡಾನೆ ದಾಳಿಗೆ ಹಂಗಾಮಿ ವಾಚರ್‌ ಓರ್ವ ಸಾವನ್ನಪ್ಪಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸೊಳ್ಳಾಪುರ ಗ್ರಾಮದ ಬಳಿ ನಡೆದಿದೆ. ಮಹದೇವಸ್ವಾಮಿ ಎನ್ನುವಾತ ಮೃತ ವ್ಯಕ್ತಿ.

ಮೃತ ವ್ಯಕ್ತಿ ಮಹದೇವಸ್ವಾಮಿ ಕಳೆದ ಹತ್ತು ವರ್ಷಗಳಿಂದ ಹಂಗಾಮಿ ವಾಚರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದಿನನಿತ್ಯದಂತೆ ರಾತ್ರಿ ವೇಳೆ ಹೆಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ಅರಣ್ಯದಲ್ಲಿ ತನ್ನ ಕಾರ್ಯದಲ್ಲಿ ತೊಡಗಿದ್ದಾಗ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಕಾಡಾನೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರಲ್ಲಿ ಮಹದೇವಸ್ವಾಮಿ ಮೃತರಾಗಿದ್ದಾರೆ.

ಇದನ್ನೂ ಓದಿ : Elephant attack-1 dead: ಒಂಟಿ ಸಲಗದ ದಾಳಿ : ಮಗನನ್ನು ರಕ್ಷಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ ತಂದೆ

ಇದನ್ನೂ ಓದಿ : Gurugram : ತಾಯಿ, ಪತ್ನಿಯ ಚಿಕಿತ್ಸೆಗೆ 24 ಕ್ಷ ರೂಪಾಯಿ ದರೋಡೆ : ಐವರು ಅರೆಸ್ಟ್‌

ಇದನ್ನೂ ಓದಿ : Dehli fire accident: ಖಾಸಗಿ ನರ್ಸಿಂಗ್‌ ಹೋಮ್‌ ನಲ್ಲಿ ಅಗ್ನಿ ಅವಘಡದಲ್ಲಿ ಇಬ್ಬರು ಸಾವು

ಇದನ್ನೂ ಓದಿ : Karwar bus accident: ಶಾಪಿಂಗ್‌ ಗೆ ತೆರಳುತ್ತಿದ್ದ ವೇಳೆ ಬಸ್‌ ಢಿಕ್ಕಿ: ತಂದೆಯ ಕಣ್ಣೆದುರೇ ಕೊನೆಯುಸಿರೆಳೆದ ಮಗಳು

ಘಟನೆಯಲ್ಲಿ ಇನ್ನೋರ್ವ ವಾಚರ್‌ ರಾಜೇಶ್‌ ಗೂ ಕೂಡ ಗಂಭೀರವಾದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಮೃತ ಮಹದೇವಸ್ವಾಮಿ ಅವರ ಕುಟುಂಬದವರು ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯ ಆವರಣದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

A bus carrying students of a regional industrial training institute on a trip was returning from Malappuram when the driver lost control and fell into a gorge.

Comments are closed.