Spooky College Movie : ಟ್ರೈಲರ್‌ನಿಂದಲೇ ಕಿಕ್‌ ಕೊಟ್ಟ ‘ಸ್ಪೂಕಿ ಕಾಲೇಜ್’ ಸಿನಿಮಾ ರಿಲೀಸ್‌ಗೆ ರೆಡಿ

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಹೊಸಬರ ಸಿನಿಮಾಗಳು ಭಿನ್ನ ವಿಭಿನ್ನ ಟೈಟಲ್ ಮೂಲಕ ಪ್ರೇಕ್ಷಕರನ್ನು ಗಮನ ಸೆಳೆಯುತ್ತಿದೆ. ಅದರಲ್ಲೊಂದು ‘ಸ್ಪೂಕಿ ಕಾಲೇಜ್’ ಸಿನಿಮಾ (Spooky College Movie) ಆಗಿದೆ. ಇದೀಗ ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾ ಹಾರರ್ ಟಚ್ ಕೊಟ್ಟಿರುವ ಪೋಸ್ಟರ್‌ ಹಾಗೂ ಟ್ರೈಲರ್‌ನಿಂದ ಸಿನಿಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಈಗಾಗಲೇ ‘ಸ್ಪೂಕಿ ಕಾಲೇಜ್’ ಟೀಸರ್ ಹಾಗೂ ಹಾಡುಗಳ ಮೂಲಕ ಜನಮನ ಗೆದ್ದಿತ್ತು. ಇದೀಗ ‘ಸ್ಪೂಕಿ ಕಾಲೇಜ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಪ್ರೇಕ್ಷಕರಲ್ಲಿ ಕುತೂಹಲವನ್ನು ಇನ್ನಷ್ಟು ಕೆರಳಿಸಿದೆ.

ಅಂದ ಹಾಗೆ ‘ಸ್ಪೂಕಿ’ ಅಂದ್ರೆ ಏನು? ಎನ್ನುವ ಅನ್ನುವ ಕುತೂಹಲವಂತೂ ಹೆಚ್ಚಿನ ಸಿನಿಪ್ರಿಯರಲ್ಲಿ ಇದ್ದೇ ಇರುತ್ತದೆ. ಹಾಗಾಗಿ ಇಲ್ಲಿ ‘ಸ್ಪೂಕಿ’ ಎಂದರೆ ಎಂದರೆ ಭಯ ಎಂದರ್ಥ. ಈ ಭಯವನ್ನೇ ‘ಸ್ಪೂಕಿ ಕಾಲೇಜ್’ ಸಿನಿಮಾದಲ್ಲಿ ಸ್ವಲ್ಪ ಭಿನ್ನವಾಗಿ ತೋರಿಸಲಾಗಿದೆ ಎಂದು ಸಿನಿತಂಡ ಹಂಚಿಕೊಂಡಿದ್ದಾರೆ. ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರೋ ಧಾರವಾಡದ ಕಾಲೇಜ್‌ನಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ.

ಅಷ್ಟೇ ಅಲ್ಲದೆ ದಾಂಡೇಲಿಯ ಅಭಯಾರಣ್ಯದಲ್ಲೂ ‘ಸ್ಪೂಕಿ ಕಾಲೇಜ್’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ‘ಸ್ಪೂಕಿ ಕಾಲೇಜ್’ ಸಿನಿಮಾವನ್ನು ಯುವ ನಿರ್ದೇಶಕ ಭರತ್ ನಿರ್ದೇಶಿಸಿದ್ದಾರೆ. “ವೀರ ಕೇಸರಿ” ಸಿನಿಮಾದ ಮೆಲ್ಲುಸಿರೆ ಸವಿಗಾನ ಹಾಡನ್ನು ಈ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ‌. ರೀಷ್ಮಾ ನಾಣಯ್ಯ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಾಯಕ ವಿವೇಕ್ ಸಿಂಹ ಹಾಗೂ ನಾಯಕಿ ಖುಷಿ ರವಿ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಬಹಳ ಚೆನ್ನಾಗಿ ಮೂಡಿ ಬಂದಿರುವುದಾಗಿ ಸಿನಿತಂಡ ಹೇಳಿಕೊಂಡಿದ್ದಾರೆ.

ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಈ ಸಿನಿಮಾದ ಮತ್ತೊಂದು ಹೈಲೈಟ್ ಎನ್ನಬಹುದು ಎಂದು ನಿರ್ದೇಶಕ ಭರತ್ ಹೇಳಿದ್ದಾರೆ. “ಸ್ಪೂಕಿ ಕಾಲೇಜ್” ಸಿನಿಮಾವನ್ನು ಕೋವಿಡ್ ಸಮಯದಲ್ಲೇ ಹೆಚ್ಚಿನ ಭಾಗ ಚಿತ್ರೀಕರಣ ಮಾಡಲಾಗಿದ್ದು, ಹೀಗಾಗಿ ಬಜೆಟ್ ಹೆಚ್ಚಾಗಿದೆ ಎಂದು ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರು ಒಪ್ಪಿಕೊಂಡಿದ್ದಾರೆ. 2023ರ ಮೊದಲ ವಾರ ಜನವರಿ 6 ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ : Animal Movie : ಅನಿಮಲ್‌ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ : ಕಿಲ್ಲರ್‌ ಅವತಾರದಲ್ಲಿ ರಣಬೀರ್‌ ಕಪೂರ್‌

ಇದನ್ನೂ ಓದಿ : Tunisha Sharma death case : ಶೀಜಾನ್ ಖಾನ್ 14 ದಿನಗಳ ನ್ಯಾಯಾಂಗ ಬಂಧನ : ಖಾನ್‌ ಷರತ್ತುಗಳು ಏನು ಗೊತ್ತಾ ?

ಇದನ್ನೂ ಓದಿ : Swati Muttina Male Haniye Movie : ಪ್ರಬುದ್ಧ ಪ್ರೇಮಕಥೆಯ ಭಾವನಾತ್ಮಕ ಜರ್ನಿ ‘ಸ್ವಾತಿ ಮುತ್ತಿನ ಮಳೆ ಹನಿ’

‘ಚೂರಿಕಟ್ಟೆ’ ಸಿನಿಮಾದಿಂದ ಸಿನಿ ಜರ್ನಿ ಆರಂಭಿಸಿದ ವಿವೇಕ್ ಸಿಂಹ ಈ ಸಿನಿಮಾದ ಹೀರೊ ಆಗಿ ನಟಿಸಿದ್ದಾರೆ. ಆ ಬಳಿಕ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾದಲ್ಲೂ ವಿವೇಕ್‌ ಸಿಂಹ ನಟಿಸಿದ್ದರು. ಈಗ ‘ಸ್ಪೂಕಿ ಕಾಲೇಜ್’ ಮೂಲಕ ವಿವೇಕ್ ಸಿಂಹ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ‘ದಿಯಾ’ ಸಿನಿಮಾ ಖ್ಯಾತಿಯ ಖುಷಿ ರವಿ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ರಘು ರಮಣಕೊಪ್ಪ, ವಿಜಯ್ ಚೆಂಡೂರ್ ಶೃತಿ ರಾವ್ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ಮನೋಹರ್ ಜೋಶಿ ಸೇರಿದಂತೆ ಅನೇಕ ತಂತ್ರಜ್ಞರು ‘ಸ್ಪೂಕಿ ಕಾಲೇಜ್’ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ.

‘Spooky College’ Movie Kicked From The Trailer Is Ready For Release

Comments are closed.