Stunt Master death: ಸಿನಿಮಾ ಶೂಟಿಂಗ್ ವೇಳೆ ಮತ್ತೊಂದು ದುರಂತ; ಕ್ರೇನ್ ನಿಂದ 20 ಅಡಿ ಕೆಳಗೆ ಬಿದ್ದು ಸಾಹಸ ನಿರ್ದೇಶಕ ದುರ್ಮರಣ

ಚೆನ್ನೈ: Stunt Master death: ವೆಟ್ರಿಮಾರನ್ ನಿರ್ದೇಶನದ ವಿಡುತಲೈ ಸಿನಿಮಾ ಶೂಟಿಂಗ್ ವೇಳೆ ಅವಘಡವೊಂದು ನಡೆದಿದೆ. ಕ್ರೇನ್ ನಿಂದ 20 ಅಡಿ ಎತ್ತರದಿಂದ ಕೆಳಗೆ ಬಿದ್ದು ತಮಿಳು ಸಾಹಸ ನಿದೇಶಕ ಸುರೇಶ್ (54) ಎಂಬುವವರು ಮೃತಪಟ್ಟಿದ್ದಾರೆ. ಕಳೆದ 25 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಅವರು ಸಾಹಸ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಕರ್ತವ್ಯದಲ್ಲಿದ್ದಾಗಲೇ ನಡೆದ ದುರಂತದಿಂದ ಸಾವನ್ನಪ್ಪಿದ್ದಾರೆ.

ವಿಡುತಲೈ ಸೂರಿ ಅವರು ಈ ಚಿತ್ರದಲ್ಲಿ ನಾಯನಕಾಗಿ ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ ಕೂಡಾ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚೆನ್ನೈನ ಕೇಲಂಬಕ್ಕಂ ಸೆಟ್ ಹಾಕಿ ವಿಡುತಲೇ ಸಿನಿಮಾದ ಶೂಟಿಂಗ್ ನಡೆಸಲಾಗುತ್ತಿತ್ತು. ರೈಲು ಅಪಘಾತ ಸಂಭವಿಸುವಂಥ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಅದಕ್ಕಾಗಿ ಸ್ಟಂಟ್ ಮ್ಯಾನ್ ಸುರೇಶ್ ಸೇರಿದಂತೆ ಕೆಲವರು ಕ್ರೇನ್ ಗೆ ಹಗ್ಗ ಕಟ್ಟಿ 20 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು. ಈ ವೇಳೆ ಏಕಾಏಕಿ ಹಗ್ಗ ತುಂಡಾಗಿ ಸುರೇಶ್ ಅವರು ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಡಿಸೆಂಬರ್ 3ರ ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಇನ್ನು ಘಟನೆಯಲ್ಲಿ ಇನ್ನೋರ್ವ ಸ್ಟಂಟ್ ಮ್ಯಾನ್ ಕೂಡಾ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Shivamma movie: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡ ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಚಿತ್ರ..

ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅವಘಡಕ್ಕೆ ಯಾರ ನಿರ್ಲಕ್ಷ್ಯ ಕಾರಣ ಅನ್ನೋದು ಇನ್ನಷ್ಟೆ ತಿಳಿಯಬೇಕಿದೆ. ಕಳೆದ 2 ವರ್ಷಗಳ ಹಿಂದೆಯೂ ಇಂಥ ದುರ್ಘಟನೆ ನಡೆದಿತ್ತು. ಇಂಡಿಯನ್- 2 ಸಿನಿಮಾ ಶೂಟಿಂಗ್ ವೇಳೆ ಕ್ರೇನ್ ಉರುಳಿಬಿದ್ದು, ಮೂವರು ಮೃತಪಟ್ಟಿದ್ದರು. ಅಲ್ಲದೇ ಕನ್ನಡದ ಲವ್ ಯೂ ರಚ್ಚು, ಮಾಸ್ತಿಗುಡಿ ಸಿನಿಮಾ ಶೂಟಿಂಗ್ ವೇಳೆಯಲ್ಲೂ ಇಂಥ ದುರ್ಘಟನೆ ಸಂಭವಿಸಿತ್ತು.

ಇದನ್ನೂ ಓದಿ: Hansika Motwani-Sohael Khaturiya Wedding : ಹನ್ಸಿಕಾ ಸೊಹೈಲ್‌ ಕಥುರಿಯಾ ವಿವಾಹ ಸಂಭ್ರಮ : ದಂಪತಿಗಳ ಮೊದಲ ಫೋಟೋ ವೈರಲ್

Stunt Master death: Another tragedy during movie shooting; Stunt director dies after falling 20 feet from crane

Comments are closed.