Muruga Math: ನ್ಯಾಯ ಕೊಡಿಸಿ ಇಲ್ಲ ದಯಾಮರಣ ನೀಡಿ : ಸಂತ್ರಸ್ತ ಬಾಲಕಿಯರ ತಾಯಿಯರಿಂದ ರಾಷ್ಟ್ರಪತಿಗೆ ಪತ್ರ

ಚಿತ್ರದುರ್ಗ: (Muruga Math) ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರಿಗೆ ಬಾಲಕಿಯರ ತಾಯಿ ಪತ್ರ ಬರೆದಿದ್ದಾರೆ. ‘ನ್ಯಾಯ ಕೊಡಿಸಿ ಇಲ್ಲಾ ದಯಾಮರಣ ನೀಡಿ, ತಳಮಟ್ಟದ ಸಮುದಾಯಗಳ ಮಹಿಳಾ ಪ್ರತಿನಿಧಿ ನೀವಾಗಿದ್ದೀರಿ, ನಮ್ಮಂತವರ ತಾಯಿ ಸ್ಥಾನದಲ್ಲಿರುವ ನೀವು ನಮಗೆ ನ್ಯಾಯ ಕೊಡಿಸಿʼ ಎಂದು ಬರೆದಿದ್ದಾರೆ.

ಮುರುಘಾಶ್ರೀ (Muruga Math) ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರಸ್ತ ಬಾಲಕಿಯರ ತಾಯಿ ನ್ಯಾಯ ಕೊಡಿಸಿ ಇಲ್ಲಾ ದಯಾ ಮರಣ ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ತಳಮಟ್ಟದ ಸಮುದಾಯಗಳ ಮಹಿಳಾ ಪ್ರತಿನಿಧಿ ನೀವಾಗಿದ್ದೀರಿ, ನಮ್ಮಂತವರ ತಾಯಿ ಸ್ಥಾನದಲ್ಲಿರುವ ನೀವು ನಮಗೆ ನ್ಯಾಯ ಕೊಡಿಸಿ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸ್ವಾಮೀಜಿಯಿಂದ ಯಾವ ಕೆಟ್ಟ ಕೃತ್ಯ ನಡೆದಿಲ್ಲ, ಎಲ್ಲಾ ನಿಮ್ಮ ಹಾಗೂ ನಿಮ್ಮ ಮಕ್ಕಳ ಷಡ್ಯಂತ್ರ ಕೆಲವು ಅಧಿಕಾರಿಗಳು ಈ ರೀತಿ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಕರಣ ದಾಖಲಾದ ನಂತರ ನಾನು ನನ್ನ ಮಕ್ಕಳು ಆಶ್ರಯ ಕಳೆದುಕೊಂಡಿದ್ದೇವೆ. ಊಟ ಆಶ್ರಯ ಇಲ್ಲದಂತಾಗಿದೆ ಎಂದು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಅಲ್ಲದೇ ಆಶ್ರಯ ಕೊಡುವವರನ್ನು ಅನುಮಾನದಿಂದ ನೋಡಲಾಗುತ್ತಿದೆ. ಭೇಟಿ ಪಡಾವೋ ಭೇಟಿ ಬಚಾವೋ ನಗೆಪಾಟಲಿಗೀಡಾಗುತ್ತಿದೆ. ನಮಗೆ ನ್ಯಾಯ ಕೊಡಿಸಿ ಎಂದೂ ಸಂತ್ರಸ್ತ ಬಾಲಕಿಯ ಹೆತ್ತವರು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

ಮುರುಘಾ ಮಠ ಎಸ್‌ಜೆಎಮ್‌ ವಿದ್ಯಾಪೀಠಕ್ಕೆ ನೂತನ ಸಿಇಒ
ಮುರುಘಾ ಮಠ ಎಸ್‌ ಜೆಎಮ್‌ ವಿದ್ಯಾಪೀಠಕ್ಕೆ ನೂತನ ಸಿಇಒ ಆಗಿ ಚಿತ್ರದುರ್ಗ ಮೂಲದ ಖ್ಯಾತ ಉದ್ಯಮಿ ಭರತ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ : Bus facility for government school : ಶಾಲೆಗಳಿಗೆ ಸರಕಾರದಿಂದಲೇ ಬಸ್‌ ಸೌಲಭ್ಯ : ಸಿಎಂ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : Sankirtana Yatra: ಕೇಸರಿಮಯವಾಯ್ತು ಶ್ರೀರಂಗಪಟ್ಟಣ : ಹಿಂದೂ ಜಾಗರಣಾ ವೇದಿಕೆಯಿಂದ ಸಂಕೀರ್ತನಾ ಯಾತ್ರೆ

ಇದನ್ನೂ ಓದಿ : Wall writing: ಶಿವಮೊಗ್ಗದಲ್ಲಿ ವಿವಾದಾತ್ಮಕ ಗೋಡೆಬರಹ ಪತ್ತೆ

ವರದಿ ಮಾಧ್ಯಮದವರೊಂದಿಗೆ ಮಾತನಾಡಿರುವ ನೂತನ ಸಿಇಒ ಭರತ್‌ ಕುಮಾರ್‌ ” ಸಿಇಒ ಅಗಿರೋದಕ್ಕೆ ಖುಷಿ ಇದೆ ಹಾಗೂ ಇದೊಂದು ಮಹತ್ವದ ಜವಬ್ಧಾರಿಯಾಗಿದೆ. ಶಾಲಾ ಕಾಲೇಜುಗಳ ಅಭಿವೃದ್ದಿ ಮಾತ್ರ ನನ್ನ ಉದ್ದೇಶ” ಎಂದು ಹೇಳಿದ್ದಾರೆ.

(Muruga Math) The mother of the girls has written a letter to President Draupadi Murmu regarding the sexual assault case against Muruga Shri. He wrote, ‘Give justice or euthanasia, you are the women’s representative of grassroots communities, you are the mother of people like us, give us justice’.

Comments are closed.