Suicide Case took turn: ಗೋಳಗುಮ್ಮಟದಿಂದ ಜಿಗಿದು ವ್ಯಕ್ತಿ ಸಾವು: ತಿರುವು ಪಡೆದ ಪ್ರಕರಣ

ವಿಜಯನಗರ: (Suicide Case took turn) ನಿನ್ನೆಯ ದಿನ ವ್ಯಕ್ತಿಯೋರ್ವ ಪ್ರವಾಸಿಗರಂತೆ ಬಂದು ಗೋಳಗುಮ್ಮಟ ಸ್ಮಾರಕದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ತಿರುವೊಂದು ಸಿಕ್ಕಿದ್ದು, ಮೃತ ವ್ಯಕ್ತಿ ಸಾಕಷ್ಟು ಮಂದಿಗೆ ನೌಕರಿ ಕೊಡಿಸುವುದಾಗಿ ಹಣ ಸುಲಿಗೆ ಮಾಡಿದ್ದು, ನಂತರದಲ್ಲಿ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ವಿಜಯಪುರದ ಗಾಂಧಿಚೌಕದ ನಿವಾಸಿ ಸಲೀಂ ತಿಕೋಟ್ಟರ್‌ ಗೋಳಗುಮ್ಮಟದ ಮೇಲ್ಬಾಗಕ್ಕೆ ಹತ್ತಿ ಸೆಕ್ಯೂರಿಟಿ ಸಂಚಾರ ನಡೆಸುತ್ತಿದ್ದ ವೇಳೆ ಮೇಲಿಂದ ಜಿಗಿದು ಸಾವನ್ನಪ್ಪಿದ್ದಾನೆ(Suicide Case took turn). ಸ್ಥಳಕ್ಕೆ ಬಂದಿದ್ದ ಪೊಲೀಸರು ಸಲೀಂ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ಪ್ರವಾಸಿಗರಂತೆ ಬಂದಿದ್ದ ಸಲೀಂ;
ಸಾಮಾನ್ಯವಾಗಿ ಗೋಳಗುಮ್ಮಟ ಒಂದು ಪ್ರವಾಸಿ ತಾಣವಾಗಿದ್ದು, ಬೆಳಿಗ್ಗೆ ಆರು ಗಂಟೆಗೆ ಬಾಗಿಲು ತೆರೆದು ಸಂಜೆ ಆರು ಗಂಟೆಗೆ ಮುಚ್ಚಲಾಗುತ್ತದೆ. ಸಲೀಂ ಕೂಡ ಪ್ರವಾಸಿಗರಂತೆ ಸುಮಾರು ಎಂಟು ಗಂಟೆಯ ಹೊತ್ತಿಗೆ ಸ್ಮಾರಕದ ಬಳಿಗೆ ಬಂದಿದ್ದ. ಟಿಕೇಟ್‌ ಇಲ್ಲದೆ ಒಳಗೆ ಪ್ರವೇಶ ಇಲ್ಲದ ಕಾರಣ ತಾನು ಒಂದು ಟಿಕೇಟ್‌ ಪಡೆದು ಒಳಗೆ ಹೋಗಿದ್ದಾನೆ. ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದು, ತಾನೊಬ್ಬನೇ ಸ್ಮಾರಕದ ಮೇಲ್ಬಾಗಕ್ಕೆ ಹೋಗಿದ್ದು, ಅಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಲೀಂ ದೇಹದ ಎಲುಬುಗಳು ಪುಡಿ ಪುಡಿ;
ಸುಮಾರು 198 ಅಡಿಗಳಷ್ಟು ಎತ್ತರದಿಂದ ಸಲೀಂ ಜಿಗಿದಿದ್ದು, ಕೆಳಗೆ ಬಿದ್ದ ರಭಸಕ್ಕೆ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ದೇಹದ ಎಲುಬುಗಳು ಪುಡಿ ಪುಡಿಯಾಗಿವೆ. ಜೊತೆಗೆ ಕೈ ಕಾಲುಗಳ ಮೂಳೆಗಳು ಮುರಿದಿವೆ.

ಇದನ್ನೂ ಓದಿ : Suicide Attempt Case : ಶಾಲೆಯಲ್ಲಿ ಪೋಷಕರ ಸಭೆ ತಪ್ಪಿಸಲು ವಿದ್ಯಾರ್ಥಿಯಿಂದ ಆತ್ಮಹತ್ಯೆ ಯತ್ನ

ಇದನ್ನೂ ಓದಿ : A six-year-old boy died: ಕಾರು ಢಿಕ್ಕಿ : ಆರು ವರ್ಷದ ಬಾಲಕ ಸಾವು

ಇದನ್ನೂ ಓದಿ : Suicide Case Baby died: ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ತಂದೆ

ಸಲೀಂ ಆತ್ಮಹತ್ಯೆಗೆ ಪ್ರಕರಣಕ್ಕೆ ತಿರುವು;
ಸಲೀಂ ಆತ್ಮಹತ್ಯೆಗೆ ಪ್ರಮುಖ ತಿರುವೊಂದು ಸಿಕ್ಕಿದ್ದು, ಯುವಕರಿಗೆ ನೌಕರಿ ಕೊಡಿಸುವುದಾಗಿ ಯಾಮಾರಿಸಿದ್ದು ಅದರ ಒತ್ತಡಕ್ಕೆ ಸಿಲುಕಿದ ಸಲೀಂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತನ ಸಾವಿನ ಬೆನ್ನಲ್ಲೇ ಹಲವು ವಿಷಯಗಳು ಬೆಳಕಿಗೆ ಬಂದಿದ್ದು, ಸುಮಾರು ಯುವಕರಿಗೆ ಅಲ್‌ ಅಮೀನ್‌ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುವುದಾಗಿ ಆಮೀಷ ಒಡ್ಡಿದ್ದನು. ಅಲ್ಲದೇ ಅವರಿಂದ ಹಣವನ್ನೂ ಕೂಡ ವಸೂಲಿ ಮಾಡಿದ್ದನು. ಮೊದಲಿಗೆ ಹದಿನೈದರಿಂದ ಇಪ್ಪತ್ತು ಸಾವಿರ ರೂ ವಸೂಲಿ ಮಾಡಿಕೊಂಡಿದ್ದು, ಕೆಲಸ ಕೊಡಿಸಿದ ನಂತರದಲ್ಲಿ ನಾಲ್ಕು ಲಕ್ಷ ನೀಡುವಂತೆ ಮಾತಾಗಿತ್ತು ಎಂಬ ಮಾಹಿತಿಗಳು ಯುವಕರಿಂದ ಕೇಳಿ ಬರುತ್ತಿದೆ. ಹಣ ವಸೂಲಿ ಮಾಡಿಕೊಂಡ ಬಗ್ಗೆ ಯುವಕರು ಪೊಲೀಸರಿಗೆ ದೂರು ಕೊಡುವುದಾಗಿ ತಿಳಿಸಿದ್ದರು. ಆದರೆ ನಿನ್ನೆ ಬೆಳಿಗ್ಗೆ ಹನ್ನೊಂದು ಗಂಟೆಯ ಒಳಗೆ ಹಣ ಹಿಂತಿರುಗಿಸುವುದಾಗಿ ಯುವಕರ ಮನವೊಲಿಸಿದ್ದನು. ಒಬ್ಬ ಹುಡುಗ ಹಣ ಕೇಳಲು ಮುಂಚಿತವಾಗಿ ಕಾಲ್‌ ಮಾಡಿದಾಗ ರಿಂಗಾದ ಪೋನ್‌ ಎತ್ತಿದವರು ನಾನು ಗೋಳಗುಮ್ಮಟ ಎಎಸ್‌ಐ (ASI), ಈ ಪೋನ್‌ ಇರುವ ವ್ಯಕ್ತಿ ಗೋಳಗುಮ್ಮಟ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದರು ಎನ್ನಲಾಗಿದೆ.

ನೌಕರಿ ಕೊಡಿಸೋದಾಗಿ ಹೇಳಿ ಹಣ ಪಡೆದಿದ್ದು, ನಂತರ ಹಣ ಹಿಂತಿರುಗಿಸಲು ಒತ್ತಡ ಹೆಚ್ಚಾಗಿದ್ದರ ಕಾರಣವೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಎನ್ನುವ ಸಂಶಯಗಳು ಬರುತ್ತಿವೆ.

(Suicide Case took turn) It is said that the case of a person who came as a tourist and committed suicide by jumping from the Golagummata Memorial took a turn.

Comments are closed.