Top 5 OTT films of this week: ಈ ವಾರ ಓಟಿಟಿಯಲ್ಲಿ ರಿಲೀಸ್ ಆದ ಟಾಪ್ 5 ಚಿತ್ರಗಳು; ನೀವು ವೀಕ್ಷಿಸಬೇಕಾದ ಸರಣಿಗಳಿವು

ಕಳೆದ ವಾರ ದಿ ವಿಸಿಲ್ ಬೌಲರ್ (The Whistleblower 2021), ಮರಕ್ಕರ್: ಲಯನ್ ಆಫ್ ಅರೇಬಿಯನ್ ಸೀ (Marakkar: Lion Of Arabian Sea), ಕುರುಪ್ (Kurup), 420 ಐಪಿಸಿ (420 IPC), ಹಾಗೂ ಡಿ ಕಪಲ್ಡ್ (Decoupled) ಮುಂತಾದ ಚಿತ್ರಗಳು ಓಟಿಟಿ ವೇದಿಕೆಗೆ ಲಗ್ಗೆ ಇಟ್ಟಿದ್ದವು. ಕಳೆದ ವಾರದಂತೆ ಈ ವಾರವೂ ಒಂದಷ್ಟು ಮೋಸ್ಟ್ ವೇಯ್ಟೆಡ್ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಗೊಂಡಿವೆ. ಹಾಗಾದರೆ ಈ ವಾರ ಯಾವೆಲ್ಲ ಚಿತ್ರಗಳು ರಿಲೀಸ್ ಆಗಿವೆ ಮತ್ತು(Top 5 OTT films) ಅವುಗಳ ಹೂರಣವೇನು? ನೊಡಲೇಬೇಕಾದ ಸಿನಿಮಾಗಳಿವೆಯಾ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

  1. ಶಾರ್ಕ್ ಟ್ಯಾಂಕ್ ಇಂಡಿಯಾ (Shark Tank India)
    ಇದು ಅಮೆರಿಕದ ಪ್ರೈಮ್ ಟೈಮ್ ಅವಾರ್ಡ್ ವಿನ್ನಿಂಗ್ ಶೋ ಆದ “ಶಾರ್ಕ್ ಟ್ಯಾಂಕ್”ನ ಭಾರತೀಯ ಆವೃತ್ತಿಯಾಗಿದೆ. ಇದು ಪಕ್ಕಾ ಬ್ಯುಸಿನೆಸ್ ರಿಯಾಲಿಟಿ ಶೋ ಆಗಿದೆ. ಇಲ್ಲಿ ಉದ್ಯಮಿಗಳು ತಮ್ಮ ಬ್ಯುಸಿನೆಸ್ ಐಡಿಯಗಳನ್ನು ತಮ್ಮ ಮುಂದಿರುವ ಎಕ್ಸ್ಪರ್ಟ್ ಪನೆಲ್ (ಶಾರ್ಕ್) ಮುಂದೆ ಪ್ರೆಸೆಂಟ್ ಮಾಡಬೇಕು. ಅವರು ಇನ್ವೆಸ್ಟ್ ಮಾಡಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ. ( ಈ ವೆಬ್ ಸರಣಿ ಡಿಸೆಂಬರ್ 20ರಿಂದ ಸೋನಿ ಲಿವ್‌ನಲ್ಲಿ ಪ್ರಸಾರವಾಗುತ್ತಿದೆ.
  2. ಸತ್ಯಮೇವ ಜಯತೆ 2 (Satyameva Jayate 2)
    ಬಾಲಿವುಡ್ ಹಂಕ್ ಜಾನ್ ಅಬ್ರಹಾಂ ಟ್ರಿಪಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರವನ್ನು ಮಿಲನ್ ಲೂಥರಿಯ ನಿರ್ದೇಶಿಸಿದ್ದಾರೆ. ಈ ಚಿತ್ರವು ಒಬ್ಬ ವಿಜಿಲೆಂಟ್ ಕಿಲ್ಲರ್ ಹೇಗೆ ಭ್ರಷ್ಟ ವ್ಯಕ್ತಿಗಳನ್ನು ಕೊಳ್ಳುತ್ತಾನೆ ಹಾಗೂ ಒಬ್ಬ ಟಫ್ ಅಧಿಕಾರಿ ಹೇಗೆ ಆತನನ್ನು ಸೆರೆ ಹಿಡಿಯುತ್ತಾನೆ ಎಂಬುದರ ಕುರಿತಾಗಿದೆ. ಹಾಗಿದ್ರೆ ಇದರಲ್ಲಿ ಗೆಲುವು ಯಾರ ಪರ ಎಂದು ತಿಳಿಯಲು ಸಿನೆಮವನ್ನೇ ನೋಡಬೇಕು. ಅಂದಹಾಗೆ ಸತ್ಯಮೇವ ಜಯತೆ 2 ಡಿಸೆಂಬರ್ 23 ರಿಂದ ಅಮೆಝಾನ್ ಪ್ರೈಮ್‌ನಲ್ಲಿ (Amazon Prime) ಪ್ರಸಾರ ಆರಂಭಿಸಿದೆ.
  3. ಅತ್ರಂಗಿ ರೇ (Atrangi Re)
    ಸಿಂಪಲ್ ಆಗಿರೋ ತಮಿಳ್ ಹುಡುಗ ವಿಷ್ಣು ( ಧನುಷ್ ನಟನೆ) ಫ್ರೀ ಸ್ಪಿರಿಟೆಡ್ ಹುಡುಗಿ ರಿಂಕುವನ್ನು ( ಸಾರ ಅಲಿ ಖಾನ್) ಮದುವೆಯಾಗ ಬಯಸುತ್ತಾನೆ. ಆದರೆ ಮದುವೆ ಬಳಿಕ ತನ್ನ ಪತ್ನಿ ಮಾಜಿಶಿಯನ್ ಸಜ್ಜಡ್ ( ಅಕ್ಷಯ್ ಕುಮಾರ್) ಜೊತೆ ಪ್ರೀತಿಸುತ್ತಾಳೆ ಎಂಬುದಾಗಿ ತಿಳಿಯುತ್ತಾಳೆ. ಆದರೆ ಅಷ್ಟೊತ್ತಿಗಾಗಲೇ ವಿಷ್ಣು ಹಾಗೂ ರಿಂಕು ನಡುವೆ ಕೂಡ ಅನ್ಯೋನ್ಯತೆ ಬೆಸೆದಿರುತ್ತದೆ. ಹಾಗಿದ್ದರೆ ರಿಂಕು ಯಾರ ಜೊತೆ ಹೋಗುತ್ತಾಳೆ ಎಂಬುದೇ ಈ ಚಿತ್ರದ ಟ್ವಿಸ್ಟ್. ಡಿಸೆಂಬರ್ 24ರಿಂದ ಡಿಸ್ನಿ+ಹಾಟ್ ಸ್ಟಾರ್‌ನಲ್ಲಿ ಪ್ರಸಾರ ಆರಂಭಿಸಿದೆ.
  4. ಮಿನ್ನಲ್ ಮುರಳಿ (Minnal Murali)
    ಬಾಸಿಲ್ ಜೋಸೆಫ್ ನಿರ್ದೇಶನದ ಈ ಚಿತ್ರ ಜೇಸನ್ (ಟೊವಿನೋ ಥೋಮಸ್) ಎಂಬ ಸೂಪರ್ ಹೀರೊ ಕುರಿತಾಗಿದೆ. ಒಬ್ಬ ಸಾಧಾರಣ ಹುಡುಗ ಸಿಡಿಲಘಾತ ದಿಂದ ಹೇಗೆ ಅಸಾಧಾರಣ ವ್ಯಕ್ತಿಯಾಗಿ ಬದಲಾಗುತ್ತಾನೆ, ಮತ್ತು ಸೂಪರ್ ಸ್ಪೀಡ್, ಶಕ್ತಿ ಹೇಗೆ ಸಿಗುತ್ತದೆ ಎಂಬುದೇ ಈ ಚಿತ್ರದ ಕಥೆ. ಡಿಸೆಂಬರ್ 24 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆರಂಭವಾಗಿದೆ. ಇದನ್ನು ಪ್ರಿಯಾಂಕಾ ಚೋಪ್ರಾ ಸಹ ವೀಕ್ಷಿಸಿದ್ದಾರೆ.
  5. ಪರಂಪರ (Parampara Season 1)
    ಪಕ್ಕಾ ಫ್ಯಾಮಿಲಿ ಡ್ರಾಮಾ ಸಿರೀಸ್ ಆಗಿದೆ. ನಾಗೇಂದ್ರ ನಾಯ್ಡು ಹಾಗೂ ಮೋಹನ್ ಕುಮಾರ್ ಎಂಬ ಅಣ್ಣ ತಮ್ಮಂದಿರ ಕಥೆಯಾಗಿದೆ ಈ ಚಿತ್ರ. ಅಂದಹಾಗೆ ಡಿಸೆಂಬರ್ 24 ರಿಂದಲೇ ಡಿಸ್ನಿ+ಹಾಟ್ ಸ್ಟಾರ್ ಓಟಿಟಿಯಲ್ಲಿ ಪರಂಪರ ಪ್ರಸಾರವಾಗಲಾರಂಭಿಸಿದೆ.

    ಇದನ್ನೂ ಓದಿ: Paytm Fake App Alert : ನೀವು ಪೇಟಿಎಂ ಬಳಸುತ್ತೀರಾ ? ಫೇಕ್ ಪೇಟಿಎಂ ಆ್ಯಪ್ ಹಣ ಲಪಟಾಯಿಸಬಹುದು; ನಿಮ್ಮ ಆ್ಯಪ್‌ನ್ನು ಪರಿಶೀಲಿಸಿ

    (Minnal Murali Atrangi Re and Top 5 Indian Films Series Released This Week on OTT Platforms)

Comments are closed.