Swami Shraddhanand: ರಾಜೀವ್ ಗಾಂಧಿ ಹಂತಕರನ್ನೇ ಜೈಲಿನಿಂದ ಬಿಟ್ಟಿದ್ದೀರಿ, ನನ್ನನ್ನೂ ರಿಲೀಸ್ ಮಾಡಿ; ಸುಪ್ರೀಂಗೆ ಸ್ವಾಮಿ ಶೃದ್ಧಾನಂದ ಅರ್ಜಿ

ನವದೆಹಲಿ: Swami Shraddhanand: ಕಳೆದ ವಾರ ರಾಜೀವ್ ಗಾಂಧಿ ಹಂತಕರನ್ನು ಜೈಲಿನಿಂದ ಬಿಡುಗಡೆ ರಿಲೀಸ್ ಮಾಡಿರುವ ಬೆನ್ನಲ್ಲೇ ತನ್ನನ್ನೂ ರಿಲೀಸ್ ಮಾಡುವಂತೆ ಸುಪ್ರೀಂಕೋರ್ಟ್ ಗೆ ಕೊಲೆ ಕೇಸ್ ನಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಸ್ವಾಮಿ ಶೃದ್ಧಾನಂದ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Suicide Case took turn: ಗೋಳಗುಮ್ಮಟದಿಂದ ಜಿಗಿದು ವ್ಯಕ್ತಿ ಸಾವು: ತಿರುವು ಪಡೆದ ಪ್ರಕರಣ

80 ವರ್ಷದ ಸ್ವಾಮಿ ಶೃದ್ಧಾನಂದ ತನ್ನ ಪತ್ನಿ ರಾ ಖಲೀಲಿ ಎಂಬಾಕೆಯನ್ನು ಆಸ್ತಿ ಆಸೆಗಾಗಿ ಜೀವಂತವಾಗಿ ಹೂತು ಹಾಕಿ ಕೊಲೆಗೈದ ಪ್ರಕರಣದಲ್ಲಿ ಕಳೆದ 29 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈತನಿಗೆ ಮೊದಲು ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಆದರೆ ಬಳಿಕ ಅದನ್ನು ಜೀವಿತಾವಧಿ ಪೂರ್ತಿ ಜೈಲುವಾಸಕ್ಕೆ ಇಳಿಸಲಾಗಿತ್ತು.

‘ನನ್ನ ಕಕ್ಷಿದಾರರಾದ ಸ್ವಾಮಿ ಶೃದ್ಧಾನಂದ ಒಂದು ಕೊಲೆ ಕೇಸ್ ಗಾಗಿ ಜೈಲಿನಲ್ಲಿದ್ದು, ಈಗಾಗಲೇ 29 ವರ್ಷಗಳನ್ನು ಜೈಲಿನಲ್ಲೇ ಕಳೆದಿದ್ದಾರೆ. ಒಂದು ದಿನವೂ ಆತನಿಗೆ ಪೆರೋಲ್ ಸಿಕ್ಕಿಲ್ಲ. ಆದರೆ ದೇಶದ ಪ್ರಧಾನಿ ಆಗಿದ್ದ ರಾಜೀವ್ ಗಾಂಧಿಯನ್ನು ಕೊಂದವರೇ ಜೈಲಿನಿಂದ ಮುಕ್ತಿ ಪಡೆದಿದ್ದಾರೆ. ಆ ಘಟನೆಯಲ್ಲಿ ರಾಜೀವ್ ಗಾಂಧಿ ಸೇರಿದಂತೆ 16 ಮಂದಿ ಮೃತಪಟ್ಟು, 43 ಮಂದಿ ಗಾಯಗೊಂಡಿದ್ದರು. 30 ವರ್ಷಗಳ ಜೈಲುವಾಸದ ಬಳಿಕ ಆರೋಪಿಗಳು ರಿಲೀಸ್ ಆಗಿದ್ದಾರೆ. ಅದಕ್ಕೂ ಮುನ್ನ ಅವರಿಗೆ ಪೆರೋಲ್ ಕೂಡಾ ನೀಡಲಾಗಿತ್ತು. ಮರಣದಂಡನೆ ಶಿಕ್ಷೆಯ ಹೊರತಾಗಿಯೂ ಶೃದ್ಧಾನಂದನನ್ನು 3 ವರ್ಷಗಳ ಕಾಲ ಬೆಳಗಾವಿ ಜೈಲಿನಲ್ಲಿ ಏಕಾಂತದಲ್ಲಿ ಇರಿಸಲಾಗಿತ್ತು. 80ಕ್ಕೂ ಅಧಿಕ ವಯಸ್ಸಾಗಿರುವ ಅವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಎರಡೂ ಪ್ರಕರಣಗಳನ್ನು ಹೋಲಿಸಿದಾಗ, ಸಮಾನತೆಯ ಹಕ್ಕು ಉಲ್ಲಂಘನೆ ಆಗಿದೆ’ ಎಂದು ಸ್ವಾಮಿ ಶೃದ್ಧಾನಂದ ಪರ ವಕೀಲ ವರುಣ್ ಠಾಕೂರ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠದ ಮುಂದೆ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಿದ್ದಾರೆ.

ಶಾಖೇರಾ ಖಲೀಲಿ ಯಾರು ಗೊತ್ತಾ..?

ತಮ್ಮ ಪತ್ನಿ ಹಾಗೂ ಮೈಸೂರು ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾದ ಶಾಖೇರಾ ಖಲೀಲಿ ಅವರ ಕೊಲೆ ಪ್ರಕರಣದಲ್ಲಿ 1994ರ ಮಾರ್ಚ್ ನಿಂದಲೂ ಸ್ವಾಮಿ ಶೃದ್ಧಾನಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ, ಆಸ್ಟ್ರೇಲಿಯಾ ಹಾಗೂ ಇರಾನ್ ಗೆ ಭಾರತದ ರಾಯಭರಿಯಾಗಿದ್ದ ಅಕ್ಬರ್ ಖಲೀಲಿ ಜೊತೆ ಶಾಖೇರಾ ಮೊದಲ ವಿವಾಹವಾಗಿದ್ದರು. 1985ರಲ್ಲಿ 21 ವರ್ಷಗಳ ಬಳಿಕ ಅವರ ಮದುವೆ ಮುರಿದುಬಿದ್ದು, 1986ರಲ್ಲಿ ಆಕೆ ಸ್ವಾಮಿ ಶೃದ್ಧಾನಂದ ಅವರ ಜೊತೆ 2ನೇ ಮದುವೆಯಾಗಿದ್ದರು.

ಇದನ್ನೂ ಓದಿ: Black magic: ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಜ್ಯೋತಿಷಿ ಉದ್ಯಮಿ ಮನೆಗೆ ಬಂದು ಮಾಡಿದ್ದು ಎಂಥಾ ಕೆಲಸ ನೋಡಿ..

ಪ್ರಕರಣದ ಹಿನ್ನೆಲೆ:

ಶಾಖೆರಾ ಹೆಸರಿನಲ್ಲಿದ್ದ 600 ಕೋಟಿ ಆಸ್ತಿಯನ್ನು ದೋಚುವ ಉದ್ದೇಶದಿಂದ 1991ರಲ್ಲಿ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ಬಂಗಲೆಯಲ್ಲಿ ಸ್ವಾಮಿ ಶೃದ್ಧಾನಂದ ಆಕೆಗೆ ಮಾದಕ ದ್ಯವ್ಯ ನೀಡಿದ್ದ. ಆಕೆ ಅಮಲಿನಲ್ಲಿದ್ದಾಗಲೇ ಜೀವಂತವಾಗಿ ಹೂತುಹಾಕಿದ್ದ. ಆ ಬಳಿಕ ಕೋರ್ಟ್ ಆದೇಶದನುಸಾರ ಪೊಲೀಸರು ನೆಲವನ್ನು ಅಗೆದು ಶಾಖೇರಾ ಮೃತದೇಹ ಹೊರತೆಗೆದಿದ್ದರು. 1994ರ ಏ.30ರಂದು ಶೃದ್ಧಾನಂದನನ್ನು ಬಂಧಿಸಲಾಗಿತ್ತು. 2000ನೇ ಇಸವಿಯಲ್ಲಿ ಬೆಂಗಳೂರಿನ ವಿಚಾರಣಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. 2005ರಲ್ಲಿ ಕರ್ನಾಟಕ ಹೈಕೋರ್ಟ್ ಕೂಡಾ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ 2008ರಲ್ಲಿ ಶೃದ್ಧಾನಂದ ಸಲ್ಲಿಸಿದ್ದ ಮೇಲ್ಮನವಿ ಮೇರೆಗೆ ಸುಪ್ರೀಂಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಆತ ಜೈಲಿನಲ್ಲಿ ಯಾರನ್ನೂ ಭೇಟಿಯಾಗುವಂತಿಲ್ಲ ಹಾಗೂ ಆತನಿಗೆ ಪೆರೋಲ್ ನೀಡುವಂತಿಲ್ಲ ಎಂದು ಸುಪ್ರೀಂ ಖಡಕ್ ಆದೇಶ ಹೊರಡಿಸಿತ್ತು.

ಸದ್ಯ ಸ್ವಾಮಿ ಶೃದ್ಧಾನಂದ ಪರ ವಕೀಲರ ಅರ್ಜಿಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ವಿಚಾರಣೆ ನಡೆಸುವುದಾಗಿ ತಿಳಿಸಿದೆ ಎಂದು ತಿಳಿದುಬಂದಿದೆ.

Swami Shraddhanand: You released Rajiv Gandhi assassins from jail release me too Swami Shriddhananda’s application to the Supreme Court

Comments are closed.